Varthur Santhosh: ತುಕಾಲಿ ಸಂತೋಷ್ ಗೆ ಗೋಲ್ಡ್ ಪೆಂಡೆಂಟ್ ಗಿಫ್ಟ್ ಕೊಟ್ಟ ವರ್ತೂರ್ ಸಂತೋಷ್! ಬಳಿಕ ಹೇಳಿದ್ದೇನು ಗೊತ್ತಾ?

0 22

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ತಮ್ಮ ಫ್ರೆಂಡ್ಶಿಪ್ ಇಂದಲೇ ಹೆಸರು ಪಡೆದಿದ್ದವರು ವರ್ತುರ್ ಸಂತೋಷ್ ಹಾಗೂ ತುಕಾಲಿ ಸಂತೋಷ್ ಎಂದರೆ ತಪ್ಪಲ್ಲ. ಯಾರು ಏನೇ ಅಂದರು ಕೂಡ ಇವರಿಬ್ಬರು ಒಬ್ಬರನ್ನೊಬ್ಬರು ಬಿಟ್ಟು ಕೊಟ್ಟಿರಲಿಲ್ಲ. ಮೊದಲ ದಿನದಿಂದ ಕೊನೆಯ ದಿನದವರೆಗು ಇಬ್ಬರು ಜೊತೆಯಾಗೆ ಇದ್ದರು, ಅಷ್ಟೇ ಆತ್ಮೀಯತೆ ಇತ್ತು..

ಸಂತು ಪಂತು ಎಂದೇ ಇಬ್ಬರು ಫೇಮಸ್ ಆಗಿದ್ದರು, ಇವರಿಬ್ಬರು ಫಿನಾಲೆಗು ಕೂಡ ಜೊತೆಯಾಗೆ ಬಂದರು. 6ನೇ ಸ್ಥಾನಕ್ಕೆ ತುಕಾಲಿ ಸಂತೋಷ್ ಎಲಿಮಿನೇಟ್ ಆದರೆ, 5ನೇ ಸ್ಥಾನಕ್ಕೆ ವರ್ತೂರ್ ಸಂತೋಷ್ ಎಲಿಮಿನೇಟ್ ಆಗಿ ಹೊರಬಂದಿದ್ದರು. ಹೊರಬಂದಮೇಲು ಸಹ ತಮ್ಮ ಸ್ನೇಹ ಹಾಗೆ ಇರುತ್ತದೆ ಎಂದು ಇಬ್ಬರು ಕೂಡ ಹೇಳಿಕೆ ನೀಡಿದ್ದರು.

ಅದು ನಿಜವೇ ಆಗಿದೆ. ಮೊನ್ನೆಯಷ್ಟೇ ವರ್ತೂರ್ ಸಂತೋಷ್ ಅವರ ಮನೆಯಲ್ಲಿ ಒಂದು ಕಾರ್ಯಕ್ರಮ ನಡೆದಿದ್ದು, ಅದಕ್ಕೆ ಎಲ್ಲಾ ಬಿಗ್ ಬಾಸ್ ಸ್ಪರ್ಧಿಗಳನ್ನು ಆಹ್ವಾನಿಸಿದ್ದು, ಸಂಗೀತ, ತನಿಷಾ ಎಲ್ಲರೂ ಸಹ ವರ್ತೂರ್ ಅವರ ಮನೆಯ ಕಾರ್ಯಕ್ರಮಕ್ಕೆ ಬಂದಿದ್ದಾರೆ. ತುಕಾಲಿ ಸಂತೋಷ್ ಕೂಡ ಬಂದಿದ್ದು, ತುಕಾಲಿ ಸಂತೋಷ್ ಅವರಿಗೆ ವರ್ತೂರ್ ಸಂತೋಶ್ ಚಿನ್ನದ ಪೆಂಡೆಂಟ್ ಗಿಫ್ಟ್ ಆಗಿ ನೀಡಿದ್ದಾರೆ.

ಅದಕ್ಕೆ ಇದೆಲ್ಲಾ ಯಾಕಣ್ಣಾ ಎಂದು ಕೇಳಿದ್ದಾರೆ, ಅದಕ್ಕೆ ವರ್ತೂರ್ ಸಂತೋಷ್ ಅವರು, ಇದು ಕಮ್ಮಿದು ಇನ್ನು ಇದೆ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಇವರಿಬ್ಬರ ಸ್ನೇಹ ಇನ್ನು ಜಾಸ್ತಿಯಾಗಿ ಬೆಳೆಯುತ್ತಿದ್ದು, ತುಕಾಲಿ ಸಂತೋಷ್ ಅವರಿಗೆ ಇನ್ನು ಹೆಚ್ಚಿನ ಗಿಫ್ಟ್ಸ್ ಗಳು ವರ್ತೂರ್ ಸಂತೋಷ್ ಅವರಿಂದ ಸಿಗುವುದರಲ್ಲಿ ಯಾವುದೇ ಸಂಶಯ ಅಂತೂ ಇಲ್ಲ. ಈ ಸ್ನೇಹ ನೋಡಿದ ನೆಟ್ಟಿಗರು, ನಮಗೂ ಇಂಥ ಸ್ನೇಹಿತರೇ ಸಿಗಲಿ ಎಂದು ಹೇಳುತ್ತಿದ್ದಾರೆ.

Leave A Reply

Your email address will not be published.