Varthur Santhosh: ಮದುವೆ ಬಗ್ಗೆ ಮುಕ್ತವಾಗಿ ಮಾತನಾಡಿ ಭಾವುಕರಾದ ವರ್ತೂರ್ ಸಂತೋಷ್!

Written by Pooja Siddaraj

Published on:

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 50 ದಿನಗಳ ಸಮಯ ಕಳೆದಿದೆ. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಇಂದು ಮನೆಯಲ್ಲಿರುವ ಸ್ಟ್ರಾಂಗ್ ಸ್ಪರ್ಧಿಗಳಲ್ಲಿ ಒಬ್ಬರಾಗಿದ್ದಾರೆ. ವಾರದಿಂದ ವಾರಕ್ಕೆ ಇವರು ಸ್ಟ್ರಾಂಗ್ ಆಗುತ್ತಿದ್ದಾರೆ. ಇವರು ಬಿಗ್ ಬಾಸ್ ಮನೆಯೊಳಗೆ ಇದ್ದರು ಹೊರಗಡೆ ಇವರ ಮದುವೆ ಬಗ್ಗೆ ಭಾರಿ ಚರ್ಚೆ ಆಗುತ್ತಿತ್ತು, ಇದೀಗ ಇಂದಿನ ಸಂಚಿಕೆಯಲ್ಲಿ ಖುದ್ದು ವರ್ತೂರ್ ಸಂತೋಷ್ ಅವರೇ ತಮ್ಮ ಮದುವೆ ಬಗ್ಗೆ ಕ್ಲಾರಿಟಿ ಕೊಡಲಿದ್ದಾರೆ.

ವರ್ತೂರ್ ಸಂತೋಷ್ ಪಕ್ಕಾ ಹಳ್ಳಿಯ ರೈತ, ವ್ಯವಸಾಯ ಮಾಡಿ ಜೀವನ ಸಾಗುತ್ತಿರುವ ವ್ಯಕ್ತಿ ಮಾತ್ರ ಎಂದುಕೊಂಡಿದ್ದರೆ, ಆ ಊಹೆ ಖಂಡಿತ ತಪ್ಪು. ವರ್ತೂರ್ ಸಂತೋಷ್ ಬಹಳ ಶ್ರೀಮಂತ ವ್ಯಕ್ತಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇರಬೇಕು, ಹಳ್ಳಿಕಾರ್ ತಳಿ ಹಸುವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬಂದಿದ್ದ ವರ್ತೂರ್ ಸಂತೋಷ್ ಬಹಳ ದೊಡ್ಡ ಮನೆತನಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಎಂದರೆ ತಪ್ಪಲ್ಲ.

ಬಿಗ್ ಬಾಸ್ ಮನೆಗೆ ಬಂದು 2 ವಾರ ಆಗುತ್ತಿದ್ದ ಹಾಗೆ ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದ ಕಾರಣ ವರ್ತೂರ್ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿ ವಾಸ ಮಾಡಿದ ಬಳಿಕ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟರು. ಆದರೆ ಆಗಿನಿಂದಲು ಇವರ ಮದುವೆ ಬಗ್ಗೆ ಊಹಾಪೋಹಗಳು ಕೇಳಿಬಂದಿದ್ದವು. ಇದೀಗ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಯಲ್ಲೇ ಇದಕ್ಕೆಲ್ಲ ಉತ್ತರ ಕೊಟ್ಟಿದ್ದಾರೆ.

ಸಂತೋಷ್ ಅವರು ಹೇಳಿರುವ ಪ್ರಕಾರ, ನೀವು ಯಾವುದೇ ಹುಡುಗಿಯನ್ನ ತೋರಿಸಿದರು ಮದುವೆ ಆಗ್ತೀನಿ ಅಂತ ತಮ್ಮ ದೊಡ್ಡಪ್ಪನಿಗೆ ಪ್ರಾಮಿಸ್ ಮಾಡಿದ್ದರಂತೆ, ಅದೇ ರೀತಿ ಅವರು ತೋರಿಸಿದ ಹುಡುಗಿಯನ್ನೇ ಮದುವೆಯಾದರು. ಕೆಲ ಸಮಯ ಕಳೆದ ಬಳಿಕ ಆ ಹುಡುಗಿ ಸಂತೋಷ್ ಅವರ ತಾಯಿಗೆ ಮರಿಯಾದೆ ಕೊಡದೆ ಇರುವುದು ಹಾಗೆ ಮಾಡುವುದಕ್ಕೆ ಶುರು ಮಾಡಿದರಂತೆ. ತಾಯಿಯಿಂದ ಮತ್ತು ಜನರಿಂದ ವರ್ತೂರ್ ಸಂತೋಷ್ ಅವರನ್ನು ದೂರ ಮಾಡುವುದಕ್ಕೆ ಟ್ರೈ ಮಾಡಿದರಂತೆ.

ಆದರೆ ಸಂತೋಷ್ ಅವರು ಇದಕ್ಕೆ ಒಪ್ಪದ ಕಾರಣ, ಆಕೆ ಮನೆ ಬಿಟ್ಟು ಹೋಗಿದ್ದಾರೆ. ಸ್ವಲ್ಪ ಸಮಯ ಆದಮೇಲೆ ಕರೆದುಕೊಂಡು ಬರೋಕೆ ಹೋದಾಗ, ಆಚೆ ಹೋಗು ಎಂದು ಅವಮಾನ ಮಾಡಿದರಂತೆ. ಈಗಲೂ ತಾವು ಕೊಟ್ಟ ಮಾತಿಗೆ ತಪ್ಪಿಲ್ಲ ಎಂದು ಹೇಳಿ ಭಾವುಕರಾಗಿದ್ದಾರೆ ಸಂತೋಷ್.

Leave a Comment