Varthur Santhosh: ಬಿಗ್ ಬಾಸ್ ಮನೆಗೆ ಗ್ರ್ಯಾಂಡ್ ರೀಎಂಟ್ರಿ ಕೊಟ್ಟ ವರ್ತೂರ್ ಸಂತೋಷ್

0 15

Varthur Santhosh: ಬಿಗ್ ಬಾಸ್ ಕನ್ನಡ ಸೀಸನ್ 10 ಶುರುವಾಗಿ 2 ವಾರಗಳ ಸಮಯ ಕಳೆದಿದೆ. ರೈತನಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟಿದ್ದ ವರ್ತೂರ್ ಸಂತೋಷ್ ಅವರನ್ನು ರಾತ್ರೋ ರಾತ್ರಿ ಬಿಗ್ ಬಾಸ್ ಮನೆಯಿಂದ ಹೊರತಂದು, ಅರಣ್ಯಾಧಿಕಾರಿಗಳು ಅವರನ್ನು ಬಂಧಿಸಿದ್ದಾರೆ. ಈ ಹಿಂದೆ ಯಾವ ಭಾಷೆಯ ಯಾವುದೇ ಸೀಸನ್ ನಲ್ಲಿ ಕೂಡ ಈ ರೀತಿಯ ಘಟನೆ ನಡೆದಿರಲಿಲ್ಲ. ಈ ರೀತಿ ಅರ್ಧದಲ್ಲೇ ಹೊರಬಂದಿದ್ದು ಇದೇ ಮೊದಲು.

ವರ್ತೂರ್ ಸಂತೋಷ್ ಪಕ್ಕಾ ಹಳ್ಳಿಯ ರೈತ, ವ್ಯವಸಾಯ ಮಾಡಿ ಜೀವನ ಸಾಗುತ್ತಿರುವ ವ್ಯಕ್ತಿ ಮಾತ್ರ ಎಂದುಕೊಂಡಿದ್ದರೆ, ಆ ಊಹೆ ಖಂಡಿತ ತಪ್ಪು. ವರ್ತೂರ್ ಸಂತೋಷ್ ಬಹಳ ಶ್ರೀಮಂತ ವ್ಯಕ್ತಿ ಎನ್ನುವುದು ಹಲವರಿಗೆ ಗೊತ್ತಿಲ್ಲದ ವಿಷಯ. ಬಿಗ್ ಬಾಸ್ ಮನೆಯಲ್ಲಿ ನೂರು ದಿನಗಳ ಕಾಲ ಇರಬೇಕು, ಹಳ್ಳಿಕಾರ್ ತಳಿ ಹಸುವಿನ ಬಗ್ಗೆ ಜನರಿಗೆ ಅರಿವು ಮೂಡಿಸಬೇಕು ಎಂದು ಬಂದಿದ್ದ ವರ್ತೂರ್ ಸಂತೋಷ್ ಬಹಳ ದೊಡ್ಡ ಮನೆತನಕ್ಕೆ ಸೇರಿದ ಶ್ರೀಮಂತ ವ್ಯಕ್ತಿ ಎಂದರೆ ತಪ್ಪಲ್ಲ.

ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದರು ಎನ್ನುವ ಕಾರಣಕ್ಕೆ ಸಂತೋಷ್ ಅವರನ್ನು ಅರೆಸ್ಟ್ ಮಾಡಲಾಗಿದೆ, 14 ದಿನಗಳ ನ್ಯಾಯಾಂಗ ಬಂಧನದಲ್ಲಿ ಇಡಲಾಗಿತ್ತು. ಆದರೆ ಈಗ ಇದೀಗ ವರ್ತೂರ್ ಸಂತೋಷ್ ಅವರಿಗೆ ಜಾಮೀನು ನೀಡಿರುವ ವಿಚಾರ ಗೊತ್ತಾಗಿದೆ. ಬೆಂಗಳೂರಿನ ಎಸಿಎಂಎಂ ಕೋರ್ಟ್ ಆದೇಶ ನೀಡಿದ್ದು, ವರ್ತೂರ್ ಸಂತೋಷ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಲಾಗಿದೆ ಎಂದು ಮಾಹಿತಿ ಸಿಕ್ಕಿದೆ.

ಜಾಮೀನು ಸಿಕ್ಕಿದ ಬಳಿಕ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬರುತ್ತಾರೆ ಎಂದು ಹೇಳಲಾಗಿತ್ತು, ಜೈಲಿನಿಂದ ವರ್ತೂರ್ ಸಂತೋಷ್ ಅವರನ್ನು ಕರೆದುಕೊಂಡು ಹೋಗಲು ಪ್ರೈವೇಟ್ ಕಾರ್ ಕೂಡ ಬಂದಿತ್ತು. ಶುಕ್ರವಾರದ ಎಪಿಸೋಡ್ ನಲ್ಲಿ, ಶನಿವಾರದ ಎಪಿಸೋಡ್ ನಲ್ಲೂ ಇವರು ಕಾಣಿಸಿಕೊಂಡಿಲ್ಲ. ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಡುವುದಕ್ಕಿಂತ ಮೊದಲು, ಎಸಿಜೆಎಂ ಕೋರ್ಟ್ ನಿಯಮಗಳ ಪ್ರಕಾರ ಅಲ್ಲಿನ ಕೆಲವು ಶರತ್ತುಗಳ ಬಗ್ಗೆ ಮಾಹಿತಿ ನೀಡುವುದು ಅತ್ಯಾವಶ್ಯಕವಾಗಿತ್ತು.

ಹಾಗೆಯೇ ವರ್ತೂರ್ ಸಂತೋಷ್ ಅವರಿಗೆ ಇನ್ನು ಜಾಮೀನಿನ ಆರ್ಡರ್ ಕಾಪಿ ಕೂಡ ಸಿಕ್ಕಿಲ್ಲ ಎಂದು ಹೇಳಲಾಗಿತ್ತು. ಈ ಕಾರಣಗಳಿಂದ ಸಂತೋಷ್ ಅವರು ಇನ್ನು ಬಿಗ್ ಬಾಸ್ ಮನೆಗೆ ರೀಎಂಟ್ರಿ ಕೊಟ್ಟಿರಲಿಲ್ಲ. ಆದರೆ ಇಂದು ಕಲರ್ಸ್ ಕನ್ನಡ ವಾಹಿನಿ ಮತ್ತೊಂದು ಹೊಸ ಪ್ರೊಮೋ ಬಿಡುಗಡೆ ಮಾಡಿದ್ದು, ಅದರಲ್ಲಿ ವರ್ತೂರ್ ಸಂತೋಷ್ ಅವರು ಬಿಗ್ ಬಾಸ್ ಮನೆಗೆ ವಾಪಸ್ ಬಂದಿರುವುದನ್ನು ನೋಡಬಹುದಾಗಿದೆ. ಇನ್ನುಮುಂದೆ ವರ್ತೂರ್ ಸಂತೋಷ್ ಅವರು ಕೂಡ ಆಟದಲ್ಲಿ ತಮ್ಮದೇ ಆದ ಬದಲಾವಣೆ ತರುವುದು ಪಕ್ಕಾ ಆಗಿದೆ.

Leave A Reply

Your email address will not be published.