Vastu for Entrance :ನಿಮ್ಮ ಮನೆಯ ಮುಖ್ಯದ್ವಾರಕ್ಕೆ ಇದನ್ನು ಕಟ್ಟಿದರೇ ಲಕ್ಷ್ಮಿಯನ್ನು ಮನೆಗೆ ಕರೆದಂತೆ!
Vastu for Entrance :ಸ್ವಂತ ಮನೆಯಿರಬೇಕು ಮತ್ತು ಮನೆಯಲ್ಲಿ ಚಿಕ್ಕ ಮಕ್ಕಳು ಮತ್ತು ಆ ಮನೆಯಲ್ಲಿ ಚೆನ್ನಾಗಿ ಅಲಂಕಾರ ಮಾಡಿಕೊಂಡು ನೂರು ವರ್ಷಗಳ ಕಾಲ ಸುಖ ಸಂತೋಷದಿಂದ ಆ ಮನೆಯಲ್ಲಿ ಬಾಳಬೇಕು ಎಂದು ಪ್ರತಿಯೊಬ್ಬರೂ ಕೂಡ ಆಸೆಪಡುತ್ತಾರೆ.ಅದಕ್ಕಾಗಿ ವಾಸ್ತು ಇರುವ ಸ್ಥಳವನ್ನು ಖರೀದಿ ಮಾಡಿ ಪಂಡಿತರ ಹತ್ತಿರ ಪೂಜೆ ಮಾಡಿಸಿ ಯಾವ ದೋಷ ಇಲ್ಲದಂತೆ ಜಾಗ್ರತೆ ವಹಿಸುತ್ತಾರೆ.
ಕೆಲವು ಜನರಿಗೆ ಸ್ವಂತ ಮನೆಯ ಕನಸು ಶೀಘ್ರವಾಗಿ ನೆರವೇರುತ್ತದೆ.ಆದರೆ ಇನ್ನು ಕೆಲವು ಜನರಿಗೆ ಜಾತಕದಲ್ಲಿ ಸ್ವಂತ ಮನೆಯ ಯೋಗ ಇದ್ದರು ಕೂಡ ಅವರು ಎಷ್ಟೇ ಕಷ್ಟ ಪಟ್ಟರು ಸ್ವಂತ ಮನೆಯ ಕನಸು ಕನಸಾಗಿಯೇ ಉಳಿದು ಹೋಗುತ್ತದೆ. ಇವರು ಎಷ್ಟೇ ಪರಿಹಾರ ಮಾಡಿಕೊಂಡರು ಸಹ ಆ ಕೆಲಸ ನೆರವೇರುವುದಿಲ್ಲ. ಯಾಕೆಂದರೆ ಹಿಂದಿನ ಜನ್ಮದಲ್ಲಿ ಮಾಡಿದ ಕರ್ಮ ಫಲ.
ಈ ಸಮಯದಲ್ಲಿ ಹಿರಿಯರು ಹೇಳಿರುವ ಸಲಹೆಯನ್ನು ಪಾಲಿಸಬೇಕಾಗುತ್ತದೆ.ಈಗ ಆ ಸಲಹೆ ಏನೆಂದರೆ ಹಳ್ಳಿಯಲ್ಲಿ ಸಿಗುವ ಹಕ್ಕಿ ಗೂಡನ್ನು ತೆಗೆದುಕೊಂಳ್ಳಬೇಕು. ಮುಖ್ಯವಾಗಿ ಮಳೆಗಾಲ ಪ್ರಾರಂಭವಾಗದೆ ಇರುವಾಗಲೇ ಹಕ್ಕಿಗಳು ಗೂಡನ್ನು ಕಟ್ಟಿಕೊಂಳ್ಳುತ್ತವೆ. ಇದರಲ್ಲಿ ಮೊಟ್ಟೆಗಳನ್ನು ಇಟ್ಟು ಅವು ದೊಡ್ಡದಾದ ಮೇಲೆ ಅವು ಹೊರಟು ಹೋಗುತ್ತವೆ.
ಒಂದು ಸಾರಿ ಮೊಟ್ಟೆಗಳನ್ನು ಇಟ್ಟು ಮರಿ ಮಾಡಿ ಹೋದರೆ ಆ ನಂತರ ಆ ಗೂಡನ್ನು ಯಾವ ಪಕ್ಷಿಗಳು ಕೂಡ ಮತ್ತೆ ಬಳಸುವುದಿಲ್ಲ. ಅಂತಹ ಹಕ್ಕಿ ಗೂಡನ್ನು ತೆಗೆದುಕೊಳ್ಳಬೇಕು. ಆದರೆ ಅಂಗಡಿಯಲ್ಲಿ ಸಿಗುವ ಕೃತಕ ಪಕ್ಷಿಯ ಗೂಡನ್ನು ತಂದು ಇಡಬೇಡಿ. ಇದರಿಂದ ಯಾವುದೇ ಫಲಿತಾಂಶ ಇರುವುದಿಲ್ಲ. ಪಕ್ಷಿಗಳು ಕಟ್ಟಿದ ಗೂಡನ್ನು ಮಾತ್ರ ಮನೆಯ ಮುಂದೆ ಕಟ್ಟಬೇಕು.
ಇದನ್ನು ಮನೆಗೆ ತಂದು ಅರಿಶಿಣದ ನೀರಿನಿಂದ ಪ್ರೊಕ್ಷಣೆ ಮಾಡಬೇಕು. ಹೀಗೆ ತಂದ ಹಕ್ಕಿ ಗೂಡನ್ನು ಲಕ್ಷ್ಮೀದೇವಿಯ ಫೋಟೋ ಮುಂದೆ ಇಟ್ಟು ಸಂಕಲ್ಪ ಮಾಡಬೇಕು. ನಂತರ ಹಕ್ಕಿ ಗೂಡಿಗೆ ಪೂಜೆ ಮಾಡಿ ನೀವು ವಾಸವಿರುವ ಮನೆಯ ಮುಖ್ಯದ್ವಾರಕ್ಕೆ ಕಟ್ಟಬೇಕಾಗುತ್ತದೆ. ಇನ್ನು ಪಕ್ಷಿಯ ಗೂಡನ್ನು ಮಂಗಳವಾರ ತಂದರೆ ಗುರುವಾರದ ದಿನ ಕಟ್ಟಬೇಕು. ಗುರುವಾರದ ದಿನ ತಂದರೆ ಶುಕ್ರವಾರದ ದಿನ ಕಟ್ಟಬೇಕು.
ಒಂದು ವೇಳೆ ಶುಕ್ರವಾರ ತಂದರೆ ಭಾನುವಾರದ ದಿನ ಕಟ್ಟಬೇಕು. ಈ ದಿನ ಮಾತ್ರ ನೋಡಿಕೊಂಡು ಕಟ್ಟಬೇಕು. ಪ್ರತಿದಿನ ಪೂಜೆಯ ಸಮಯದಲ್ಲಿ ಹಕ್ಕಿಯ ಗೂಡಿಗೆ ಅಗರ ಬತ್ತಿ ಹಾಗೂ ಕರ್ಪೂರವನ್ನು ಬೆಳಗಬೇಕು. ಹೀಗೆ ಪೂಜೆ ಮಾಡುತ್ತಾ ಬಂದರೆ ಒಂದು ವರ್ಷದಲ್ಲಿ ನಿಮ್ಮ ಸ್ವಂತ ಮನೆಯ ಕನಸು ನನಸಾಗುತ್ತದೆ.ಈ ಹಕ್ಕಿಗೂಡು ಲಕ್ಷ್ಮೀದೇವಿ ಮತ್ತು ಸರಸ್ವತಿ ದೇವಿಯ ಸ್ವರೂಪ. ಆದ್ದರಿಂದ ನಿಮ್ಮ ಮನೆಗೆ ಸಿರಿಸಂಪತ್ತು ಹೆಚ್ಚಾಗುತ್ತದೆ.ಅಷ್ಟೇ ಅಲ್ಲದೆ ಕೆಟ್ಟ ದೃಷ್ಟಿಯು ಸಹ ಬೀಳುವುದಿಲ್ಲ.