Vastu Tips: ಹಣದ ವಿಚಾರದಲ್ಲಿ ಈ ಒಂದು ತಪ್ಪು ಮಾಡಬೇಡಿ, ಇಲ್ಲದಿದ್ರೆ ನಿಮ್ಮ ಹಣವೆಲ್ಲಾ ಖಾಲಿ!

Written by Pooja Siddaraj

Published on:

Vastu Tips: ಹಣಕಾಸಿನ ವಿಷಯಕ್ಕೆ ಸಂಬಂಧಿಸಿದ ಹಾಗೆ ವಾಸ್ತು ಶಾಸ್ತ್ರದಲ್ಲಿ ಹಲವು ವಿಚಾರಗಳನ್ನು ತಿಳಿಸಲಾಗಿದೆ. ಅವುಗಳನ್ನು ಪಾಲಿಸಿಕೊಂಡು ಬಂದರೆ ನಿಮಗೆ ಹಣಕಾಸಿನ ವಿಚಾರದಲ್ಲಿ ಯಾವುದೇ ತೊಂದರೆ ಆಗುವುದಿಲ್ಲ. ನಮಗೆ ಸರಿಯಾಗಿ ಗೊತ್ತಿಲ್ಲದೇ ಹಣಕಾಸಿನ ವಿಚಾರದಲ್ಲಿ ಈ ಕೆಲವು ತಪ್ಪುಗಳನ್ನು ಮಾಡಿದರೆ ನಿಮ್ಮ ಹತ್ತಿರ ಇರುವ ಪೂರ್ತಿ ಹಣ ಖಾಲಿಯಾಗಿಬಿಡಬಹುದು. ಹಾಗಾಗಿ ನೀವು ಗಮನ ಹರಿಸಬೇಕಾದ ಒಂದು ಮುಖ್ಯವಾದ ವಿಚಾರಡ್ ಬಗ್ಗೆ ಇಂದು ತಿಳಿಸುತ್ತೇವೆ..

ಹಣಕಾಸಿನ ವಿಷಯ ಎಂದು ಬಂದರೆ ನೀವು ಹಣವನ್ನು ಎಲ್ಲಿ ಇಡುತ್ತೀರಿ ಎನ್ನುವುದು ಬಹಳ ಮುಖ್ಯ ಆಗುತ್ತದೆ. ಹಣವನ್ನು ಮನೆಯ ತಿಜೋರಿಯಲ್ಲಿ ಇಡುತ್ತೇವೆ. ತಿಜೋರಿಯನ್ನು ಯಾವ ದಿಕ್ಕಿನಲ್ಲಿ ಇಡುತ್ತೀರಾ ಎನ್ನುವುದು ಸಹ ಬಹಳ ಮುಖ್ಯ ಆಗುತ್ತದೆ. ತಪ್ಪು ದಿಕ್ಕಿನಲ್ಲಿ ಇಟ್ಟರೆ ನಿಮಗೆ ಹಣಕಾಸಿನ ವಿಷಯದಲ್ಲಿ ತೊಂದರೆ ಅನುಭವಿಸುವ ಹಾಗೆ ಆಗುತ್ತದೆ. ಮನೆಯಲ್ಲಿ ಏನು ಒಳ್ಳೆಯದಾಗುವುದಿಲ್ಲ. ಹಾಗಾಗಿ ನೀವು ತಿಜೋರಿ ಇಡುವ ದಿಕ್ಕಿನ ಬಗ್ಗೆ ಸರಿಯಾಗಿ ತಿಳಿದುಕೊಂಡಿರಬೇಕು. ಇಂದು ಈ ವಿಚಾರದ ಬಗ್ಗೆ ಸಂಪೂರ್ಣ ಮಾಹಿತಿ ಪಡೆಯೋಣ..

ನಿಮ್ಮ ಮನೆಯಲ್ಲಿ ತಿಜೋರಿಯನ್ನು ಈ ಒಂದು ದಿಕ್ಕಿನಲ್ಲಿ ಯಾವುದೇ ಕಾರಣಕ್ಕೂ ಇಡಬಾರದು. ಅದು ಆಗ್ನೇಯ ದಿಕ್ಕು ಆಗಿರುತ್ತದೆ. ಇಲ್ಲಿ ತಿಜೋರಿ ಇಟ್ಟರೆ ಅವಶ್ಯಕತೆ ಇಲ್ಲದೆಯೇ ಹೆಚ್ಚು ಹಣ ಖರ್ಚಾಗುತ್ತದೆ. ನಿಮ್ಮ ಆದಾಯದ ಮೇಲೆ ಇದರಿಂದ ನೆಗಟಿವ್ ಪರಿಣಾಮ ಬೀರಬಹುದು. ಹಾಗೆಯೇ ನೀವು ಸಾಲಗಾರರು ಆಗಬಹುದು. ಬದುಕಿನ ಸಂತೋಷ ನಾಶವಾಗುತ್ತದೆ.

ತಿಜೋರಿ ಇಡಬಾರದು ಎಂದು ಹೇಳುವ ಮತ್ತೊಂದು ದಿಕ್ಕು ಪಶ್ಚಿಮ ದಿಕ್ಕು. ಈ ದಿಕ್ಕಿನಲ್ಲಿ ಸಹ ನೀವು ತಿಜೋರಿ ಇಡಬೇಡಿ. ಒಂದು ವೇಳೆ ಇಟ್ಟರೆ ಅದರಿಂದ ನಿಮ್ಮ ಕುಟುಂಬದವರ ಆದಾಯದಲ್ಲಿ ಇಳಿಕೆ ಆಗಬಹುದು. ಹಣದ ನಷ್ಟಕ್ಕೆ ಕಾರಣ ಆಗಬಹುದು. ಪಶ್ಚಿಮ ದಿಕ್ಕಿನಲ್ಲಿ ತಿಜೋರಿ ಇಟ್ಟರೆ, ಅದರಿಂದ ಹೆಚ್ಚಿನ ಸಮಸ್ಯೆಗಳು ಉಂಟಾಗುತ್ತದೆ. ನಿಮ್ಮ ಸಾಲ ಜಾಸ್ತಿಯಾಗುತ್ತದೆ ಎಂದು ಹೇಳುತ್ತಾರೆ.

ಇನ್ನು ತಿಜೋರಿ ಇಡುವುದಕ್ಕೆ ಸರಿಯಾದ ದಿಕ್ಕು ಯಾವುದು ಎಂದರೆ, ಉತ್ತರ ದಿಕ್ಕು ಒಳ್ಳೆಯದು. ಇಲ್ಲಿ ನಿಮ್ಮ ಹಣ, ಆಭರಣ ಎಲ್ಲವನ್ನು ಇಡಬಹುದು. ಕುಬೇರದೇವ ನೆಲೆಸುವುದು ಕೂಡ ಇದೇ ದಿಕ್ಕಿನಲ್ಲಿ. ಹಾಗಾಗಿ ಈ ದಿಕ್ಕಿನಲ್ಲಿ ಹಣ ಇಡುವುದರಿಂದ ಹಣ ಜಾಸ್ತಿಯಾಗುತ್ತದೆ. ಮನೆಯಲ್ಲಿ ಶಾಂತಿ, ಸಮೃದ್ಧಿ ಇರುತ್ತದೆ.

Leave a Comment