Vasuki Vaibhav: ಯಶಸ್ವಿ ಸಂಗೀತ ನಿರ್ದೇಶಕ ವಾಸುಕಿ ವೈಭಬ್ ಮದುವೆ ಸಂಭ್ರಮ!

0 2

Vasuki Vaibhav: ಕನ್ನಡದ ಯುವ ಸಂಗೀತ ನಿರ್ದೇಶಕರಲ್ಲಿ ಒಬ್ಬರು ವಾಸುಕಿ ವೈಭವ್. ಇವರ ಬಗ್ಗೆ, ಇವರ ಹಾಡುಗಳ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಮ್ಯೂಸಿಕ್ ಡೈರೆಕ್ಟರ್ ಆಗಿ, ಸಿಂಗರ್ ಆಗಿ ಗುರುತಿಸಿಕೊಂಡಿರುವ ವಾಸುಕಿ ಬೈಭವ್ ಅವರು ಇತ್ತೀಚೆಗೆ ಮದುವೆ ವಿಷಯದಿಂದ ಸುದ್ದಿಯಾಗಿದ್ದರು. ವಾಸುಕಿ ವೈಭವ್ ಅವರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಷಯ ವೈರಲ್ ಆಗಿತ್ತು.

ವಾಸುಕಿ ವೈಭವ್ ಅವರ ಮದುವೆ ಬಗ್ಗೆ ರಿವೀಲ್ ಮಾಡಿರುವುದು ಮತ್ಯಾರು ಅಲ್ಲ, ಕನ್ನಡದ ನಟಿ ತಾರಾ ಅವರು. ನಮಗೆಲ್ಲ ಗೊತ್ತಿರುವ ಹಾಗೆ ಡಾಲಿ ಧನಂಜಯ್ ಅವರು ನಿರ್ಮಾಣ ಮಾಡಿ, ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಇವರೆಲ್ಲರೂ ನಟಿಸಿರುವ ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ವೈಭವ್ ಅವರು ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ, ಸಿನಿಮಾದಲ್ಲಿ ಬಹಳ ಇನೊಸೆಂಟ್ ಕ್ಯಾರೆಕ್ಟರ್ ನಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಪ್ರೆಸ್ ಮೀಟ್ ವೇಳೆ, ಇಡೀ ತಂಡವಿತ್ತು. ಆಗ ಪತ್ರಕರ್ತರು ವಾಸುಕಿ ವೈಭವ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದರು, ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ವಾಸುಕಿ ವೈಭವ್ ಅವರನ್ನು ಕೇಳಿದಾಗ, ಅವರು ಏನು ಹೇಳಲಿಲ್ಲ ನಕ್ಕು ಸುಮ್ಮನಾದರು. ಆಗ ನಟಿ ತಾರಾ ಅವರು ಈ ತಿಂಗಳೇ ವಾಸುಕಿ ವೈಭವ್ ಮದುವೆ ಎಂದು ದಿಢೀರ್ ಎಂದು ಹೇಳಿದ್ದಾರೆ.

ಈ ರೀತಿಯಾಗಿ ವಾಸುಕಿ ವೈಭವ್ ಅವರ ಮದುವೆ ವಿಷಯ ರಿವೀಲ್ ಆಗಿತ್ತು. ನಟಿ ತಾರಾ ಅವರು ಸಡನ್ ಆಗಿ ಈ ವಿಷಯವನ್ನು ರಿವೀಲ್ ಮಾಡಿದ್ದರು. ಬಳಿಕ ವಾಸುಕಿ ವೈಭವ್ ಅವರು ನವೆಂಬರ್ 16ರಂದು ಮದುವೆ ಆಗಲಿದ್ದಾರೆ ಎಂದು ಹೇಳಲಾಗಗಿತ್ತು, ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಸಿಕ್ಕಿರಲಿಲ್ಲ. ಆದರೆ ನಿನ್ನೆ ವಾಸುಕಿ ವೈಭವ್ ಅವರ ಮದುವೆ ಆಗಿದ್ದು ಫೋಟೋಸ್ ವೈರಲ್ ಆಗಿದೆ.

ವಾಸುಕಿ ವೈಭವ್ ಅವರು ತಮ್ಮ ಬಹುಕಾಲದ ಗೆಳತಿ ಬೃಂದಾ ಅವರೊಡನೆ ಮದುವೆ ಆಗಿದ್ದಾರೆ. ನಿನ್ನೆ ಕುಟುಂಬದವರು, ಸ್ನೇಹಿತರು ಮತ್ತು ಚಿತ್ರರಂಗದವರ ಸಮ್ಮುಖದಲ್ಲಿ ಇವರ ಮದುವೆ ನಡೆದಿದ್ದು, ವಾಸುಕಿ ವೈಭವ್ ಅವರ ಮದುವೆ ಫೋಟೋಸ್ ವೈರಲ್ ಆಗಿದೆ. ಎಲ್ಲಾ ಅಭಿಮಾನಿಗಳು ಇವರಿಗೆ ವಿಶ್ ಮಾಡಿ ಮೆಚ್ಚುಗೆ ಸೂಚಿಸುತ್ತಿದ್ದಾರೆ.

Leave A Reply

Your email address will not be published.