Vasuki Vaibhav: ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ವಾಸುಕಿ ವೈಭವ್! ಹುಡುಗಿ ಯಾರು ಗೊತ್ತಾ?

Written by Pooja Siddaraj

Published on:

Vasuki Vaibhav: ಕನ್ನಡದ ಯುವ ಸಂಗೀತ ನಿರ್ದೇಶಕರಲ್ಲಿ ಒಬ್ಬರು ವಾಸುಕಿ ವೈಭವ್. ಇವರ ಬಗ್ಗೆ, ಇವರ ಹಾಡುಗಳ ಬಗ್ಗೆ ಹೊಸದಾಗಿ ಹೇಳುವ ಅವಶ್ಯಕತೆ ಇಲ್ಲ. ಮ್ಯೂಸಿಕ್ ಡೈರೆಕ್ಟರ್ ಆಗಿ, ಸಿಂಗರ್ ಆಗಿ ಗುರುತಿಸಿಕೊಂಡಿರುವ ವಾಸುಕಿ ಬೈಭವ್ ಅವರು ಇದೀಗ ಮದುವೆ ವಿಷಯದಿಂದ ಸುದ್ದಿಯಾಗಿದ್ದಾರೆ. ವಾಸುಕಿ ವೈಭವ್ ಅವರು ಶೀಘ್ರದಲ್ಲೇ ಮದುವೆಯಾಗುತ್ತಾರೆ ಎನ್ನುವ ವಿಷಯ ಈಗ ಗೊತ್ತಾಗಿದೆ.

ವಾಸುಕಿ ವೈಭವ್ ಅವರ ಮದುವೆ ಬಗ್ಗೆ ರಿವೀಲ್ ಮಾಡಿರುವುದು ಮತ್ಯಾರು ಅಲ್ಲ, ಕನ್ನಡದ ನಟಿ ತಾರಾ ಅವರು. ನಮಗೆಲ್ಲ ಗೊತ್ತಿರುವ ಹಾಗೆ ಡಾಲಿ ಧನಂಜಯ್ ಅವರು ನಿರ್ಮಾಣ ಮಾಡಿ, ನಾಗಭೂಷಣ್, ಅಮೃತಾ ಪ್ರೇಮ್, ರಂಗಾಯಣ ರಘು, ತಾರಾ ಇವರೆಲ್ಲರೂ ನಟಿಸಿರುವ ಟಗರು ಪಲ್ಯ ಸಿನಿಮಾದಲ್ಲಿ ವಾಸುಕಿ ವೈಭವ್ ಅವರು ಕೂಡ ಒಂದು ಪಾತ್ರದಲ್ಲಿ ನಟಿಸಿದ್ದಾರೆ, ಸಿನಿಮಾದಲ್ಲಿ ಬಹಳ ಇನೊಸೆಂಟ್ ಕ್ಯಾರೆಕ್ಟರ್ ನಲ್ಲಿ ನಟಿಸಿದ್ದಾರೆ.

ಈ ಸಿನಿಮಾದ ಪ್ರೆಸ್ ಮೀಟ್ ವೇಳೆ, ಇಡೀ ತಂಡವಿತ್ತು. ಆಗ ಪತ್ರಕರ್ತರು ವಾಸುಕಿ ವೈಭವ್ ಅವರಿಗೆ ಒಂದು ಪ್ರಶ್ನೆಯನ್ನು ಕೇಳಿದರು, ನೀವು ಮದುವೆ ಆಗುವ ಹುಡುಗಿ ಹೇಗಿರಬೇಕು ಎಂದು ವಾಸುಕಿ ವೈಭವ್ ಅವರನ್ನು ಕೇಳಿದಾಗ, ಅವರು ಏನು ಹೇಳಲಿಲ್ಲ ನಕ್ಕು ಸುಮ್ಮನಾದರು. ಆಗ ನಟಿ ತಾರಾ ಅವರು ಈ ತಿಂಗಳೇ ವಾಸುಕಿ ವೈಭವ್ ಮದುವೆ ಎಂದು ದಿಢೀರ್ ಎಂದು ಹೇಳಿದ್ದಾರೆ.

ಈ ರೀತಿಯಾಗಿ ವಾಸುಕಿ ವೈಭವ್ ಅವರ ಮದುವೆ ವಿಷಯ ರಿವೀಲ್ ಆಗಿದೆ. ನಟಿ ತಾರಾ ಅವರು ಸಡನ್ ಆಗಿ ಈ ವಿಷಯವನ್ನು ರಿವೀಲ್ ಮಾಡಿದ್ದಾರೆ. ನಂತರ ಸಿಕ್ಕಿರುವ ಮಾಹಿತಿಯ ಅನುಸಾರ ವಾಸುಕಿ ವೈಭವ್ ಅವರು ನವೆಂಬರ್ 16ರಂದು ಮದುವೆ ಆಗಲಿದ್ದಾರೆ ಎಂದು ಹೇಳಲಾಗುತ್ತಿದೆ, ಆದರೆ ಈ ಬಗ್ಗೆ ಯಾವುದೇ ಅಧಿಕೃತವಾದ ಮಾಹಿತಿ ಸಿಕ್ಕಿಲ್ಲ.

ತಮ್ಮ ಬಹುಕಾಲದ ಗೆಳತಿ ಜೊತೆಗೆ ವಾಸುಕಿ ವೈಭವ್ ಅವರ ಮದುವೆ ನಡೆಯಲಿದೆ ಎನ್ನಲಾಗಿದ್ದು, ಹುಡುಗಿ ಯಾರು ಎಂದು ಕೂಡ ರಿವೀಲ್ ಆಗಿಲ್ಲ. ಒಟ್ಟಿನಲ್ಲಿ ಸಿನಿಮಾ ಮತ್ತು ಹಾಡುಗಳ ವಿಚಾರವಾಗಿ ಸುದ್ದಿಯಾಗುತ್ತಿದ್ದ ವಾಸುಕಿ ವೈಭವ್ ಅವರು ಈಗ ಮದುವೆ ವಿಷಯಕ್ಕೆ ಸುದ್ದಿಯಾಗಿದ್ದಾರೆ, ಕೆಲವು ಅಭಿಮಾನಿಗಳು ಇವರಿಗೆ ವಿಶ್ ಸಹ ಮಾಡುತ್ತಿದ್ದಾರೆ..

Leave a Comment