Vijay Rashmika: ವಿಜಯ್ ದೇವರಕೊಂಡ ಅವರೊಡನೆ ಮದುವೆಯಾಗಿ ವಿಚ್ಛೇದನ ಪಡೆಯುತ್ತಾರಾ ರಶ್ಮಿಕಾ? ಹೊಸ ಭವಿಷ್ಯ ವೈರಲ್!

0 17

Vijay Rashmika: ತೆಲುಗಿನಲ್ಲಿ ತಮ್ಮ ಭವಿಷ್ಯದ ಮೂಲಕ ಹೆಚ್ಚು ಫೇಮಸ್ ಆಗಿರುವವರು ವೇಣು ಸ್ವಾಮಿ, ಇವರು ನುಡಿಯುವ ಭವಿಷ್ಯ ಬಹುತೇಕ ವಿಚಾರಗಳಲ್ಲಿ ನಿಜ ಆಗಿರುತ್ತದೆ. ಹಾಗಾಗಿ ಜನರಿಗೂ ಇವರ ಮಾತಿನ ಮೇಲೆ ನಂಬಿಕೆ ಇದೆ. ಇದೀಗ ಇವರು ಟಾಲಿವುಡ್ ಲವ್ ಬರ್ಡ್ಸ್ ವಿಜಯ್ ದೇವರಕೊಂಡ ಹಾಗೂ ರಶ್ಮಿಕಾ ಮಂದಣ್ಣ ಮದುವೆ ಬಗ್ಗೆ ಭವಿಷ್ಯ ನುಡಿದಿದ್ದಾರೆ.

ವಿಜಯ್ ರಶ್ಮಿಕಾ ಮದುವೆ ಆಗುತ್ತಾರೆ ಆದರೆ ಜಾಸ್ತಿ ದಿನಗಳ ಕಾಲ ಆ ದಾಂಪತ್ಯ ಜೀವನ ಉಳಿಯುವುದಿಲ್ಲ, ಇಬ್ಬರು ಬೇಗ ದೂರ ಆಗ್ತಾರೆ ಎಂದು ಭವಿಷ್ಯ ನುಡಿದಿದ್ದಾರೆ. ಈ ಹಿಂದೆ ಸಮಂತಾ ಹಾಗೂ ನಾಗಚೈತನ್ಯ ಅವರ ಮದುವೆಯಾದಾಗ ಕೂಡ ವೇಣು ಸ್ವಾಮಿ ಭವಿಷ್ಯ ಹೇಳಿ ಇವರಿಬ್ಬರು ಸ್ವಲ್ಪ ವರ್ಷಕ್ಕೆ ದೂರ ಆಗ್ತಾರೆ ಎಂದು ಹೇಳಿದರು. ಅದೇ ರೀತಿ ಮದುವೆಯಾದ 4ವರ್ಷಕ್ಕೆ ಸಮಂತಾ ಚೈತನ್ಯ ದೂರವಾದರು.

ಬಳಿಕ ಪ್ರಭಾಸ್ ಅವರ ಕೆರಿಯರ್ ಬಗ್ಗೆ ಮಾತನಾಡಿ, ಬಾಹುಬಲಿ ನಂತರ ಯಾವುದೇ ಯಶಸ್ಸು ಸಿಗುವುದಿಲ್ಲ ಎಂದು ಹೇಳಿದ್ದರು, ಆದರೆ ಈಗ ಸಲಾರ್ ಮೂಲಕ ಪ್ರಭಾಸ್ ಭರ್ಜರಿ ಕಂಬ್ಯಾಕ್ ಮಾಡಿದ್ದಾರೆ. ಈ ಕಾರಣಕ್ಕೆ ವೇಣು ಸ್ವಾಮಿ ಟ್ರೋಲ್ ಆಗುತ್ತಿದ್ದಾರೆ. ಹಾಗೆಯೇ ಪ್ರಭಾಸ್ ಅವರ ಮದುವೆ ಬಗ್ಗೆ ಮಾತನಾಡಿ, ಅವರಿಗೆ ಮದುವೆ ಆಗುವುದಿಲ್ಲ ಎಂದು ಕೂಡ ಹೇಳಿದ್ದರು. ಇದೀಗ ರಶ್ಮಿಕಾ ಅವರ ಬಗ್ಗೆ ಇದೇ ರೀತಿಯ ವಿಚಾರ ವೈರಲ್ ಆಗಿದೆ.

ವೇಣು ಸ್ವಾಮಿ ಅವರ ಭವಿಷ್ಯದ ಪ್ರಕಾರ, ರಶ್ಮಿಕಾ ವಿಜಯ್ ಇಬ್ಬರು ಪ್ರೀತಿ ಮಾಡುತ್ತಿರುವುದು ಗುಟ್ಟಿನ ವಿಚಾರ ಅಲ್ಲ, ಇಬ್ಬರು ಪ್ರೀತಿ ಮಾಡುತ್ತಿದ್ದು ಮದುವೆ ಆಗಬೇಕು ಎಂದುಕೊಂಡಿದ್ದಾರೆ. ಆದರೆ ಅವರಿಬ್ಬರು ಮದುವೆಯಾದರೆ ಹೆಚ್ಚು ದಿನ ಜೊತೆಯಾಗಿ ಇರುವುದಿಲ್ಲ, ಇದರ ಬಗ್ಗೆ ರಶ್ಮಿಕಾ ಗೆ ನೇರವಾಗಿ ಹೇಳಿದ್ದೇನೆ, ಇದೇ ವಿಷಯಕ್ಕೆ ಆಕೆಗೆ ನನ್ನ ಜೊತೆಗೆ ಭಿನ್ನಾಭಿಪ್ರಾಯವಿದೆ ಎಂದು ಹೇಳಿದ್ದಾರೆ.

ವೇಣು ಸ್ವಾಮಿ ನುಡಿದಿರುವ ಈ ಭವಿಷ್ಯ ಈಗ ಸಿಕ್ಕಾಪಟ್ಟೆ ವೈರಲ್ ಆಗಿದ್ದು, ನಿಜಕ್ಕೂ ರಶ್ಮಿಕಾ ವಿಜಯ್ ಮದುವೆಯಾದರೆ ದೂರ ಆಗ್ತಾರಾ ಎಂದು ಅಭಿಮಾನಿಗಳು ಕೂಡ ಶಾಕ್ ಆಗಿದ್ದಾರೆ..

Leave A Reply

Your email address will not be published.