Vijayalakshmi Darshan: ಡಿಬಾಸ್ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಹುಟ್ಟುಹಬ್ಬದ ಸಂಭ್ರಮಾಚರಣೆ!

Written by Pooja Siddaraj

Published on:

Vijayalakshmi Darshan: ಸ್ಯಾಂಡಲ್ ವುಡ್ ನ ಬಾಕ್ಸ್ ಆಫೀಸ್ ಸುಲ್ತಾನ್ ಎಂದೇ ಖ್ಯಾತಿಯಾಗಿರುವ ನಟ ದರ್ಶನ್ ಮತ್ತು ಅವರ ಪತ್ನಿ ವಿಜಯಲಕ್ಷ್ಮಿ ಇಂದು ಸುಂದರವಾದ ದಾಂಪತ್ಯ ಜೀವನ ನಡೆಸುತ್ತಿದ್ದಾರೆ. ಮಗ ವಿನೀಶ್ ಜೊತೆ ಮಗನ ವಿದ್ಯಾಭ್ಯಾಸ ಮತ್ತು ಇನ್ನೆಲ್ಲ ಪೋಷಣೆ ಮಾಡುತ್ತಾ ಮಗನ ಜೊತೆ ಇದ್ದಾರೆ. ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಮ್ಯಾರೇಜ್ ಎನ್ನುವ ವಿಚಾರ ನಮಗೆ ಗೊತ್ತಿದೆ. ಈ ವರ್ಷ ವಿಜಯಲಕ್ಷ್ಮಿ ದರ್ಶನ್ ಅವರ ಹುಟ್ಟುಹಬ್ಬದ ಆಚರಣೆ ಹೇಗಿತ್ತು ಗೊತ್ತಾ?

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರದ್ದು ಲವ್ ಕಮ್ ಆರೆಂಜ್ ಮ್ಯಾರೇಜ್ ಎನ್ನುವ ವಿಷಯ ನಮಗೆ ತಿಳಿದಿದೆ. ನಟ ದರ್ಶನ್ ಸಿನಿಮಾದಲ್ಲಿ ಸಣ್ಣ ಪುಟ್ಟ ಪಾತ್ರಗಳಲ್ಲಿ ನಟಿಸುತ್ತಿದ್ದ ಸಂದರ್ಭದಲ್ಲಿ ವಿಜಯಲಕ್ಷ್ಮಿ ಅವರನ್ನು ಕಾಮನ್ ಫ್ರೆಂಡ್ ಒಬ್ಬರ ಮೂಲಕ ಮೊದಲ ಬಾರಿಗೆ ಭೇಟಿಯಾದರು. ನಂತರ ಇಬ್ಬರ ನಡುವೆ ಸ್ನೇಹ ಬೆಳೆದು, ಸ್ನೇಹ ಪ್ರೀತಿಯಾಗಿ ಇಬ್ಬರು ಎರಡು ಕುಟುಂಬದವರನ್ನು ಒಪ್ಪಿಸಿ ಮದುವೆಯಾದರು. ದರ್ಶನ್ ವಿಜಯಲಕ್ಷ್ಮಿ ದಂಪತಿಯ ಮಗ ವಿನೀಶ್ ದರ್ಶನ್.

ದರ್ಶನ್ ಮತ್ತು ವಿಜಯಲಕ್ಷ್ಮಿ ದಂಪತಿಯ ಮದುವೆ ನಡೆದಿದ್ದು ಧರ್ಮಸ್ಥಳದ ವಸಂತ್ ಮಹಲ್ ನಲ್ಲಿ. ವಿಜಯಲಕ್ಷ್ಮೀ ಅವರು ಓದಿದ್ದು ಕೆಮಿಕಲ್ ಇಂಜಿನಿಯರಿಂಗ್. ಇವರನ್ನು ದರ್ಶನ್ ಅವರು ಪ್ರೀತಿಸಿ ಮದುವೆ ಆಗುತ್ತಾರೆ. ಸಿನಿಮಾ ಚಿತ್ರೀಕರಣ ಮತ್ತು ಇನ್ನಿತರ ಕೆಲಸಗಳಲ್ಲಿ ಬ್ಯುಸಿ ಇರುತ್ತಾರೆ ನಟ ದರ್ಶನ್. ಆದರೆ ಈಗ ಸಿನಿಮಾ ಕೆಲಸಗಳ ಜೊತೆಗೆ ಪತ್ನಿ ಮತ್ತು ಮಗನ ಜೊತೆ ಹೆಚ್ಚಿನ ಸಮಯ ಕಳೆಯುತ್ತಿದ್ದಾರೆ ಡಿಬಾಸ್.

ದರ್ಶನ್ ಮತ್ತು ವಿಜಯಲಕ್ಷ್ಮಿ ಅವರ ದಾಂಪತ್ಯ ಜೀವನದಲ್ಲಿ ಕೆಲವೊಮ್ಮೆ ಮನಸ್ತಾಪ ಜಗಳಗಳು ಬಂದಿದ್ದವು, ಆದರೆ ಅವೆಲ್ಲವನ್ನೂ ಮೆಟ್ಟಿ ನಿಂತು ಇಂದು ಅನ್ಯೋನ್ಯವಾದ ಜೀವನ ನಡೆಸುತ್ತಿದ್ದಾರೆ. ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ತೋರಿಸುತ್ತಿದ್ದಾರೆ ನಟ ದರ್ಶನ್. ನಿನ್ನೆಯಷ್ಟೇ ಡಿಬಾಸ್ ಅವರ ಪತ್ನಿ ವಿಜಯಲಕ್ಷ್ಮಿ ದರ್ಶನ್ ಅವರ ಬರ್ತ್ ಡೇ ಸೆಲೆಬ್ರೇಶನ್ ನಡೆದಿದೆ.

ಇವರ ಹುಟ್ಟುಹಬ್ಬ ಆಚರಣೆಗೆ ಚಿತ್ರರಂಗದ ಸಾಕಷ್ಟು ಗಣ್ಯರು ಬಂದಿದ್ದಾರೆ, ಅಭಿಷೇಕ್ ಅಂಬರೀಶ್, ಅವಿವಾ ಬಿದಪ ಸೇರಿದಂತೆ ಚಿತ್ರರಂಗದ ಮತ್ತು ಕಿರುತೆರೆಯ ಗಣ್ಯರು ಸೇರಿದಂತೆ ಎಲ್ಲರೂ ಬಂದಿದ್ದು, ಜೋರಾಗಿಯೇ ಹುಟ್ಟುಹಬ್ಬದ ಆಚರಣೆ ನಡೆದಿದೆ., ಇದೀಗ ಇವರ ಫೋಟೋಸ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Leave a Comment