Vinay Gowda: ವಿನಯ್ ಗೌಡ ಅವರಿಗೆ ಬಿಗ್ ಬಾಸ್ ಇಂದ ಸಿಕ್ಕಿದ್ದು ಎಷ್ಟು ಲಕ್ಷ? ಅಸಲಿ ಸುದ್ದಿ ಇಲ್ಲಿದೆ

0 16

Vinay Gowda: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಟಿಆರ್ಪಿ ಕಿಂಗ್ ಎಂದೇ ಗುರುತಿಸಿಕೊಂಡವರು ನಟ ವಿನಯ್ ಗೌಡ. ಇಡೀ ಸೀಸನ್ ನಲ್ಲಿ ಅಗ್ರೆಶನ್ ಇಂದಲೇ ಹೆಚ್ಚು ಸುದ್ದಿಯಾಗಿ, ನಂತರದ ದಿನಗಳಲ್ಲಿ ಇದ್ದರೆ ವಿನಯ್ ಥರ ಇರಬೇಕು ಎಂದು ಅನ್ನಿಸುವ ಹಾಗೆ ಮಾಡಿ, ವೀಕ್ಷಕರ ಅಭಿಪ್ರಾಯ ಬದಲಾಯಿಸಿದ ಸ್ಪರ್ಧಿ ವಿನಯ್ ಗೌಡ. ಇವರಿಗೆ ಬಿಗ್ ಬಾಸ್ ಶೋ ಇಂದ ಸಿಕ್ಕಿರುವ ಸಂಭಾವನೆ ಎಷ್ಟು ಗೊತ್ತಾ?

ನಟ ವಿನಯ್ ಅವರು ಹಲವು ವರ್ಷಗಳಿಂದ ನಟನೆಯ ಕ್ಷೇತ್ರದಲ್ಲಿ ಇದ್ದರು ಸಹ ಅವರಿಗೆ ಒಳ್ಳೆಯ ಹೆಸರು ಸಿಕ್ಕಿದ್ದು ಹರಹರ ಮಹಾದೇವ ಪಾತ್ರದ ಮೂಲಕ. ಹಲವು ಜನರು ಸಾಕ್ಷಾತ್ ಶಿವನ ಹಾಗೆ ಕಾಣುತ್ತಾರೆ ಎಂದು ಹೇಳಿದ್ದು ಇದೆ. ಅದನ್ನು ಹೊರತುಪಡಿಸಿ ಶಾಂಭವಿ, ನಮ್ಮ ಲಚ್ಚಿ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಉತ್ತಮ ಪಾತ್ರದಲ್ಲಿ ಮತ್ತು ವಿಲನ್ ಆಗಿ ನಟಿಸಿದ್ದಾರೆ ವಿನಯ್ ಗೌಡ. ಬಳಿಕ ಬಿಗ್ ಬಾಸ್ ಮನೆಗೆ ಬಂದರು.

ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಆಗಬೇಕು ಎನ್ನುವುದು ಇವರ ಆಸೆ. ಬಿಗ್ ಬಾಸ್ ಮನೆಯೊಳಗೆ ಕೂಡ ವಿಲ್ಲನ್ ಎಂದೇ ಗುರುತಿಸಿಕೊಂಡಿದ್ದರು. ಟಿಆರ್ಪಿ ಗೆ ಕಿಂಗ್ ಆಗಿದ್ದ ವಿನಯ್ ಅವರಿಗೆ ಬಿಗ್ ಬಾಸ್ ಇಂದ ಸಿಕ್ಕ ಸಂಭಾವನೆ ಎಷ್ಟು ಎಂದು ಈಗ ಚರ್ಚೆಯಾಗುತ್ತಿದ್ದು, ವಿನಯ್ ಗೌಡ ಅವರು ಸಂದರ್ಶನ ಒಂದರಲ್ಲಿ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. ಅಗ್ರಿಮೆಂಟ್ ಪ್ರಕಾರ ಸಂಭಾವನೆ ಎಷ್ಟು ಎಂದು ರಿವೀಲ್ ಮಾಡುವ ಹಾಗಿಲ್ಲ ಎಂದು ಹೇಳಿದ್ದಾರೆ..

ವಿನಯ್ ಅವರಿಗೆ ಲಕ್ಷಗಟ್ಟಲೇ ಸಂಭಾವನೆ ಸಿಕ್ಕಿದೆ ಎನ್ನುವ ಮಾತು ಕೇಳಿಬರುತ್ತಿದೆ ಎಂದಿದ್ದಕ್ಕೆ ಉತ್ತರ ಕೊಟ್ಟ ವಿನಯ್ ಅವರು, ಇನ್ಮೇಲೆ ಅಷ್ಟೇ ಅಷ್ಟು ಸಂಭಾವನೆ ಬರಬೇಕು ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ತಮಗೆ ಅಷ್ಟೆಲ್ಲಾ ಸಂಭಾವನೆ ಬಂದಿಲ್ಲ ಎನ್ನುವುದನ್ನು ತಿಳಿಸಿದ್ದಾರೆ ವಿನಯ್. ವೀಕ್ಷಕರ ಎದುರಲ್ಲೇ ಇಂಟರ್ವ್ಯೂ ನಲ್ಲೇ ಈ ವಿಚಾರ ರಿವೀಲ್ ಆಗಿದೆ.

Leave A Reply

Your email address will not be published.