Vinay Gowda: ನಟ ವಿನಯ್ ಗೌಡ ಅವರ ಮಗ Mentally Challenged ಆಗಿ ಜನಿಸುತ್ತಾನೆ ಎಂದಿದ್ದರಂತೆ ವೈದ್ಯರು! ಕೊನೆಗೆ ನಡೆದ Miracle ಏನು ಗೊತ್ತಾ?

0 16

Vinay Gowda: ಬಿಗ್ ಬಾಸ್ ಕನ್ನಡ ಸೀಸನ್ 10ರಲ್ಲಿ ಟಿಆರ್ಪಿ ಕಿಂಗ್ ಎಂದೇ ಗುರುತಿಸಿಕೊಂಡವರು ನಟ ವಿನಯ್ ಗೌಡ. ಇಡೀ ಸೀಸನ್ ನಲ್ಲಿ ಅಗ್ರೆಶನ್ ಇಂದಲೇ ಹೆಚ್ಚು ಸುದ್ದಿಯಾಗಿ, ನಂತರದ ದಿನಗಳಲ್ಲಿ ಇದ್ದರೆ ವಿನಯ್ ಥರ ಇರಬೇಕು ಎಂದು ಅನ್ನಿಸುವ ಹಾಗೆ ಮಾಡಿ, ವೀಕ್ಷಕರ ಅಭಿಪ್ರಾಯ ಬದಲಾಯಿಸಿದ ಸ್ಪರ್ಧಿ ವಿನಯ್ ಗೌಡ. ವಿನಯ್ ಗೌಡ ಅವರ ಮಗುವಿನ ಬಗ್ಗೆ ವೈದ್ಯರು ಹೇಳಿದ್ದೇನು? ಕೊನೆಗೆ ಆಗಿದ್ದೇನು ಗೊತ್ತಾ?

ನಟ ವಿನಯ್ ಅವರು ಹಲವು ವರ್ಷಗಳಿಂದ ನಟನೆಯ ಕ್ಷೇತ್ರದಲ್ಲಿ ಇದ್ದರು ಸಹ ಅವರಿಗೆ ಒಳ್ಳೆಯ ಹೆಸರು ಸಿಕ್ಕಿದ್ದು ಹರಹರ ಮಹಾದೇವ ಪಾತ್ರದ ಮೂಲಕ. ಹಲವು ಜನರು ಸಾಕ್ಷಾತ್ ಶಿವನ ಹಾಗೆ ಕಾಣುತ್ತಾರೆ ಎಂದು ಹೇಳಿದ್ದು ಇದೆ. ಅದನ್ನು ಹೊರತುಪಡಿಸಿ ಶಾಂಭವಿ, ನಮ್ಮ ಲಚ್ಚಿ ಸೇರಿದಂತೆ ಅನೇಕ ಧಾರವಾಹಿಗಳಲ್ಲಿ ಉತ್ತಮ ಪಾತ್ರದಲ್ಲಿ ಮತ್ತು ವಿಲನ್ ಆಗಿ ನಟಿಸಿದ್ದಾರೆ ವಿನಯ್ ಗೌಡ. ಬಳಿಕ ಬಿಗ್ ಬಾಸ್ ಮನೆಗೆ ಬಂದರು.

ಕನ್ನಡ ಚಿತ್ರರಂಗದಲ್ಲಿ ವಿಲ್ಲನ್ ಆಗಬೇಕು ಎನ್ನುವುದು ಇವರ ಆಸೆ. ಬಿಗ್ ಬಾಸ್ ಮನೆಯೊಳಗೆ ಕೂಡ ವಿಲ್ಲನ್ ಎಂದೇ ಗುರುತಿಸಿಕೊಂಡಿದ್ದರು. ಇನ್ನು ವಿನಯ್ ಗೌಡ ಅವರ ಪರ್ಸನಲ್ ಲೈಫ್ ಬಗ್ಗೆ ಹೇಳುವುದಾದರೆ, ಬಾಲ್ಯದಿಂದಲೂ ಪ್ರೀತಿಸುತ್ತಿದ್ದ, ತಮ್ಮ ರಿಲೇಟಿವ್ ಸಹ ಆಗಿದ್ದ ಅಕ್ಷತಾ ಗೌಡ ಅವರೊಡನೆ ಮದುವೆಯಾಗಿದ್ದು, ಈ ಜೋಡಿಗೆ ರಿಷಬ್ ಹೆಸರಿನ ಮಗ ಇದ್ದಾನೆ. ವಿನಯ್ ಅವರ ಮಗನಿಗೆ ಈಗ 15 ವರ್ಷ.

ಆದರೆ ಅಕ್ಷತಾ ಅವರು ಗರ್ಭಿಣಿ ಆಗಿದ್ದಾಗ, 5 ತಿಂಗಳಿಗೆ ಸ್ಕ್ಯಾನಿಂಗ್ ಮಾಡಿಸಿದಾಗ, ಮಗುವಿಗೆ Markers ಆಗಿದೆ ಎಂದು ಹೇಳಿ, Mentally Chanllenged ಆಗಬಹುದು, ಮಗುವನ್ನು ಅಬಾರ್ಟ್ ಮಾಡಿಸುವುದಾದರೆ ಮಾಡಿಸಿಬಿಡಿ ಎಂದು ಹೇಳಿದ್ದರಂತೆ. ಆಗ ಅಕ್ಷತಾ ಅವರು ಮೊದಲ ಮಗುವಿಗೆ ಹೀಗೆ ಹೇಳ್ತಿದ್ದಾರೆ ಎಂದು ತುಂಬಾ ನೋವು ಅನುಭವಿಸಿದ್ದರಂತೆ. ಆಗ ವಿನಯ್ ಅವರು, ಹೇಗಾದರೂ ಆಗಲಿ ಮಗುವಿನ ಜೀವ ತೆಗೆಯೋದು ಬೇಡ, ಕಷ್ಟಪಟ್ಟು ನೋಡಿಕೊಳ್ಳೋಣ ಅಂದಿದ್ದರಂತೆ.

ಗರ್ಭಾವಸ್ಥೆಯ ವೇಳೆ ಅಕ್ಷತಾ ಅವರು ತುಂಬಾ ನೋವು ಅನುಭವಿಸಿದ್ದರಂತೆ, ಆದರೆ ವಿನಯ್ ಅವರು ಅಷ್ಟೇ ಪಾಸಿಟಿವ್ ಆಗಿರುವ ಹಾಗೆ ನೋಡಿಕೊಂಡಿದ್ದರಂತೆ. ಕೊನೆಗೆ ಮಗು ಹುಟ್ಟಿದಾಗ ನಾರ್ಮಲ್ ಆಗಿ ಹುಟ್ಟಿದ್ದು, ಒಂದು miracle ನಡೆದ ಹಾಗೆ ಆಗಿದೆ. ಇಂದು ವಿನಯ್ ಅವರ ಮಗ ರಿಷಬ್ ತಂದೆಯ ಹಾಗೆ ತುಂಬಾ ಚೆನ್ನಾಗಿದ್ದಾರೆ.

Leave A Reply

Your email address will not be published.