Vinay Gowda: ಬಿಗ್ ಬಾಸ್ ಗೆಲ್ಲದೇ ಇದ್ರು ಸುದೀಪ್ ಅವರಿಂದ ವಿನಯ್ ಗೆ ಸಿಕ್ತು ಗುಡ್ ನ್ಯೂಸ್!

0 15

Vinay Gowda: ಬಿಗ್ ಬಾಸ್ ಕನ್ನಡ ಸೀಸನ್ 10ಕ್ಕೆ ನಿನ್ನೆ ತೆರೆಬಿದ್ದಿದೆ. ಟಾಪ್ 6 ಫೈನಲಿಸ್ಟ್ ಆಗಿ ತುಕಾಲಿ ಸಂತೋಷ್, ವರ್ತೂರ್ ಸಂತೋಷ್, ವಿನಯ್, ಸಂಗೀತ, ಪ್ರತಾಪ್ ಹಾಗೂ ಕಾರ್ತಿಕ್ ಇದ್ದರು. ಇವರುಗಳ ಪೈಕಿ ಕಾರ್ತಿಕ್ ಮಹೇಶ್ ಅವರು ವಿನ್ ಆಗಿದ್ದಾರೆ. ಬಿಬಿಕೆ10 ವಿನ್ನರ್ ಟ್ರೋಫಿ ಈಗ ಕಾರ್ತಿಕ್ ಅವರ ಪಾಲಾಗಿದೆ. ಈ ಬಾರಿ ಫಿನಾಲೆ ಎಪಿಸೋಡ್ ಹಾಗೂ ಎಲಿಮಿನೇಷನ್ ಪ್ರಕ್ರಿಯೆಗಳು ಎಲ್ಲವೂ ಸಹ ವಿಭಿನ್ನವಾಗಿತ್ತು.

ಟಾಪ್ 3 ನಲಿ ಸಂಗೀತ, ಕಾರ್ತಿಕ್ ಹಾಗೂ ಪ್ರತಾಪ್ ಇದ್ದರು. ಈ ಮೂವರನ್ನು ಕೂಡ ಬಿಗ್ ಬಾಸ್ ವೇದಿಕೆಗೆ ಕರೆದುಕೊಂಡು ಬಂದರು ಸುದೀಪ್. ಮೂವರ ಪೈಕಿ ಸಂಗೀತ ಅವರು ಮೂರನೇ ಸ್ಥಾನ ಪಡೆದುಕೊಂಡರೆ, ಟಾಪ್ 2 ನಲ್ಲಿ ಕಾರ್ತಿಕ್ ಹಾಗೂ ಪ್ರತಾಪ್ ಇದ್ದರು. ಇವರಿಬ್ಬರ ಪೈಕಿ ಕಾರ್ತಿಕ್ ಅವರು ವಿನ್ನರ್ ಆಗಿದ್ದು, ಪ್ರತಾಪ್ ಅವರು ಮೊದಲ ರನ್ನರ್ ಅಪ್ ಆಗಿದ್ದಾರೆ.

ಈ ಸೀಸನ್ ವಿನ್ನರ್ ವಿನಯ್ ಗೌಡ ಆಗಬಹುದು ಎನ್ನುವುದು ಹೆಚ್ಚಿನ ಜನರ ನಿರೀಕ್ಷೆ ಆಗಿತ್ತು, ಆದರೆ ವಿನಯ್ ಗೌಡ ಅವರು 4ನೇ ಸ್ಥಾನಕ್ಕೆ ಬಂದಿದ್ದಕ್ಕೆ ಬಹಳಷ್ಟು ಜನರಿಗೆ, ಅವರ ಅಭಿಮಾನಿಗಳಿಗೆ ನಿರಾಸೆ ಆಗಿದೆ. ಆದರೆ ಬಿಗ್ ಬಾಸ್ ನಲ್ಲಿ ಟ್ರೋಫಿ ಗೆಲ್ಲದೆ ಇದ್ದರು ಸಹ ಕಿಚ್ಚ ಸುದೀಪ್ ಅವರಿಂದ ವಿನಯ್ ಅವರಿಗೆ ಒಂದು ಗುಡ್ ನ್ಯೂಸ್ ಸಿಕ್ಕಿದೆ. ಇಂದು ಬೆಳಗ್ಗೆ ಕಿಚ್ಚ ಸುದೀಪ್ ಅವರು ಟ್ವಿಟರ್ ನಲ್ಲಿ ಅಭಿಮಾನಿಗಳು ಕೇಳುತ್ತಿದ್ದ ಪ್ರಶ್ನೆಗೆ ಉತ್ತರಿಸುತ್ತಿದ್ದರು.

ಆಗ ಅಭಿಮಾನಿಯೊಬ್ಬರು, ವಿನಯ್ ಗೌಡ ಅವರು ಬಿಗ್ ಬಾಸ್ ಗೆಲ್ಲಲಿಲ್ಲ ಆದರೆ ಜನರ ಮನಸ್ಸು ಗೆದ್ದರು, ಮುಂದೆ ನಿಮ್ಮ ಸಿನಿಮಾದಲ್ಲಿ ನಿಮ್ಮಿಬ್ಬರನ್ನ ಜೊತೆಯಾಗಿ ನೋಡಬಹುದಾ ಎಂದು ಕೇಳಿದ್ದಾರೆ. ಅದಕ್ಕೆ ಉತ್ತರಿಸಿರುವ ಸುದೀಪ್ ಅವರು, ಖಂಡಿತವಾಗಿ.. ಅವರೊಬ್ಬ ಅದ್ಭುತ ವ್ಯಕ್ತಿಫ್ವ ಹೊಂದಿರುವ ವ್ಯಕ್ತಿ ಎಂದು ಹೇಳಿದ್ದಾರೆ. ಒಟ್ಟಿನಲ್ಲಿ ಮುಂಬರುವ ಸಿನಿಮಾದಲ್ಲಿ ಸುದೀಪ್ ಅವರು ಹಾಗೂ ವಿನಯ್ ಗೌಡ ಜೊತೆಯಾಗಿ ನಟಿಸಬಹುದು ಎನ್ನಲಾಗುತ್ತಿದೆ.

Leave A Reply

Your email address will not be published.