Vinay Gowda: ಬಿಗ್ ಬಾಸ್ ಮನೆಯಲ್ಲಿರುವ ವಿನಯ್ ಗೌಡ ಅವರ ದೊಡ್ಡ ಟ್ಯಾಟೂ ಅರ್ಥವೇನು ಗೊತ್ತಾ?

0 18

Vinay Gowda: ಬಿಗ್ ಬಾಸ್ ಮನೆಯಲ್ಲಿ ಅಗ್ರೆಶನ್ ಇಂದಲೇ ಹೆಸರುವಾಸಿ ಆಗಿರುವವರು ನಟ ವಿನಯ್ ಗೌಡ. ಕೆಲ ವರ್ಷಗಳ ಹಿಂದೆ ಇವರು ನಟಿಸಿದ್ದ ಹರ ಹರ ಮಹಾದೇವ ಧಾರವಾಹಿ ಎಷ್ಟು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿತ್ತು ಎಂದು ಗೊತ್ತೇ ಇದೆ. ಭಗವಾನ್ ಶಿವನ ಪಾತ್ರದಲ್ಲಿ ನಟಿಸಿದ್ದರು ವಿನಯ್ ಗೌಡ. ಪಾತ್ರಕ್ಕೆ ಹೇಳಿಮಾಡಿಸಿದ ಹಾಗಿದ್ದರು. ಈ ಧಾರವಾಹಿ ಬಹಳ ದೊಡ್ಡ ಹೆಸರು ತಂದುಕೊಟ್ಟಿತ್ತು.

ಈಗ ಬಿಗ್ ಬಾಸ್ ಮನೆಯಲ್ಲಿ ಹೆಚ್ಚಿನ ಜಗಳದ ವಿಷಯಕ್ಕೆ ಸುದ್ದಿಯಾಗಿದ್ದಾರೆ ಎಂದರೆ ತಪ್ಪಲ್ಲ. ವಿನಯ್ ಅಂದ್ರೆ ಕೋಪ ಅಗ್ರೆಶನ್ ಎನ್ನುವ ಹಾಗಿದ್ದಾರೆ. ವಿನಯ್ ಅವರನ್ನು ನೋಡಿದರೆ ತಕ್ಷಣವೇ ಎಲ್ಲರ ಕಣ್ಣಿಗೂ ಅವರ ಕೈಮೇಲಿರುವ ದೊಡ್ಡ ಟ್ಯಾಟೂ ಕಾಣಿಸುತ್ತದೆ. ಇಷ್ಟು ದೊಡ್ಡ ಟ್ಯಾಟೂವನ್ನು ಹೇಗೆ ಹಾಕಿಸಿಕೊಂಡರು ಎಂದು ಎಲ್ಲರಿಗೂ ಅನ್ನಿಸದೇ ಇರದು.

ವಿನಯ್ ಅವರ ಕೈಮೇಲೆ ಇರುವ ಆ ಟ್ಯಾಟೂ ಹಿಂದೆ ಒಂದು ಅರ್ಥವಿದೆ. ಕುಂಭಮೇಳಕ್ಕೆ ಫ್ರೆಂಡ್ಸ್ ಜೊತೆಗೆ ಹೋಗಿದ್ದಾಗ ತೆಗೆದಿದ್ದ ಫೋಟೋವನ್ನು ಕೈಮೇಲೆ ಟ್ಯಾಟೂ ಹಾಕಿಸಿಕೊಂಡಿರೋದಂತೆ. ಕೈ ಟ್ಯಾಟೂ ಮೇಲೆ ಶಿವ, ನಂದಿ, ಗಂಗಾ ನದಿ ತೀರ, ತ್ರಿಶೂಲ ಇದೆಲ್ಲವೂ ಇದೆ. ಈ ಟ್ಯಾಟೂ ಹಾಕಿಸಿಕೊಳ್ಳಲು ಬರೋಬ್ಬರಿ ಒಂದು ತಿಂಗಳು ಸಮಯ ತೆಗೆದುಕೊಂಡಿತ್ತಂತೆ.

ವಿನಯ್ ಅವರು ವ್ಹಾರಿ ಫೇಮಸ್ ಆಗಿದ್ದು ಮಹಾದೇವ ಅಂದರೆ ಶಿವನ ಪಾತ್ರದಿಂದಲೇ ಆಗಿದೆ. ಹರ ಹರ ಮಹಾದೇವ ಧಾರವಾಹಿ ಮಾತ್ರವಲ್ಲದೆ, ಯಡಿಯೂರು ಶ್ರೀ ಸಿದ್ದಲಿಂಗೇಶ್ವರ ಸ್ವಾಮಿ ಧಾರವಾಹಿಯಲ್ಲಿ ಕೂಡ ಶಿವನ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.

Leave A Reply

Your email address will not be published.