Vinay Guruji: ಪ್ರಸ್ತುತ ಸ್ಯಾಂಡಲ್ ವುಡ್ ನಲ್ಲಿ ಮತ್ತು ನಮ್ಮ ರಾಜ್ಯದಲ್ಲಿ ಹುಲಿಯ ವಿಚಾರ ಭಾರಿ ಚರ್ಚೆಯಾಗುತ್ತಿದೆ. ಹುಲಿಯ ಉಗುರು ಇರುವ ಪೆಂಡೆಂಟ್ ಧರಿಸಿದ್ದ ಕಾರಣಕ್ಕೆ ಬಿಗ್ ಬಾಸ್ ಸ್ಪರ್ಧಿ ವರ್ತೂರ್ ಸಂತೋಷ್ ಅವರನ್ನು ಬಿಗ್ ಬಾಸ್ ಮನೆಯಿಂದಲೇ ಹೊರಗೆ ಕರೆದುಕೊಂಡು ಹೋಗಿ ಬಂಧಿಸಲಾಗಿದೆ. ಅಷ್ಟೇ ಅಲ್ಲದೆ, ಇವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಸಂತೋಷ್ ಅವರನ್ನು ಬಂಧಿಸಿದ ಬಳಿಕ ಸ್ಯಾಂಡಲ್ ವುಡ್ ನ ಬೇರೆ ಕಲಾವಿದರ ಬಳಿ ಕೂಡ ಹುಲಿ ಉಗುರಿನ ಪೆಂಡೆಂಟ್ ಇರುವ ವಿಚಾರ ಭಾರಿ ಸದ್ದು ಮಾಡುತ್ತಿದೆ. ಇದರ ಬೆನ್ನಲ್ಲೇ ವಿನಯ್ ಗುರುಜಿ ಅವರು ತಲೆ ಸಮೇತ ಇರುವ ಹುಲಿ ಚರ್ಮದ ಮೇಲೆ ಕುಳಿತಿರುವ ಫೋಟೋ ವೈರಲ್ ಆಗಿದೆ. ಹಾಗಿದ್ರೆ ವಿನಯ್ ಗುರೂಜಿ ಕೂಡ ಅರೆಸ್ಟ್ ಆಗ್ತಾರಾ ಎನ್ನುವ ಮಾತು ಕೂಡ ಕೇಳಿಬರುತ್ತಿದೆ..
ಜೊತೆಗೆ ನಟ ದರ್ಶನ್, ನಟ ಯಶ್, ನಿಖಿಲ್ ಕುಮಾರಸ್ವಾಮಿ, ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಇವರೆಲ್ಲರ ಮೇಲು ದೂರು ದಾಖಲಾಗಿದ್ದು, ಇವರ ಮನೆಯಲ್ಲಿ ತನಿಖೆ ಮಾಡಿದ್ದಾರೆ ಎಂದು ತಿಳಿಸಿದ್ದಾರೆ. ಇದೆಲ್ಲವೂ ನಡೆಯುವಾಗ ವಿನಯ್ ಗುರುಜಿ ಅವರನ್ನು ಸಹ ಪರೀಕ್ಷಿಸಿ ಅವರ ಮನೆಯನ್ನು ಶೋಧಿಸಬೇಕು ಎಂದು ನೆಟ್ಟಿಗರು ಪ್ರಶ್ನಿಸಿದ್ದಾರೆ, ಆದರೆ ಏನೇ ನಡೆದರು ವಿನಯ್ ಗುರೂಜಿ ಅವರನ್ನು ಅರೆಸ್ಟ್ ಮಾಡಲು ಸಾಧ್ಯವಿಲ್ಲ ಎಂದು ಹೇಳಲಾಗುತ್ತಿದೆ.
ವಿನಯ್ ಗುರೂಜಿ ಅವರನ್ನು ಬಂಧಿಸಲು ಸಾಧ್ಯವಿಲ್ಲ, ಇದಕ್ಕೆ ಕಾರಣ ಏನು ಎಂದರೆ ಹುಲಿಯ ಚರ್ಮವನ್ನು ಶಿವಮೊಗ್ಗ ಜಿಲ್ಲೆಯ ಅಮರೇಂದ್ರ ಕಿರೀಟಿ ಎನ್ನುವ ವ್ಯಕ್ತಿ ಗಿಫ್ಟ್ ಆಗಿ ಹುಲಿ ಚರ್ಮವನ್ನು ನೀಡಿದ್ದರು. ಹಾಗೆಯೇ ಈ ಚರ್ಮವನ್ನು ಬಳಸಲು ಅರಣ್ಯ ಇಲಕಶೇ ಇಂದ ಅನುಮತಿ ಕೂಡ ಪಡೆದಿದ್ದರು ಎಂದು ಹೇಳಲಾಗುತ್ತಿದೆ. ಆದರೆ ಕಳೆದ ವರ್ಷ 2022ರಲ್ಲೇ ಈ ಹುಲಿ ಚರ್ಮವನ್ನು ಅರಣ್ಯ ಇಲಾಖೆಗೆ ಹಿಂದಿರುಗಿಸಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ಮತ್ತೊಂದು ವಿಚಾರ ಏನು ಅಂದರೆ ಈ ಚರ್ಮವನ್ನು ವಿನಯ್ ಗುರೂಜಿ ಅವರಿಗೆ ಗಿಫ್ಟ್ ಆಗಿ ನೀಡಿದ್ದ ಅಮರೇಂದ್ರ ಕಿರೀಟಿ ಎನ್ನುವ ವ್ಯಕ್ತಿ ಅವರ ಕುಟುಂಬ 1975 ನಲ್ಲೇ ಹುಲಿ ಚರ್ಮದ ಬಗ್ಗೆ ಅನುಮತಿ ಪಡೆದಿದ್ದಾರಂತೆ, ಅವರ ತಂಡೆಯ ಕಾಲದಿಂದಲೂ ಕೂಡ ಆ ಹುಲಿ ಚರ್ಮ ಕಿರೀಟಿ ಅವರ ಮನೆಯಲ್ಲೇ ಇದೆಯಂತೆ. ಹಾಗಾಗಿ ವಿನಯ್ ಗುರುಜಿ ಅವರಿಗೆ ಯಾವುದೇ ಸಮಸ್ಯೆ ಆಗುವುದಿಲ್ಲ ಎಂದು ಹೇಳಲಾಗುತ್ತಿದೆ.