Vinod Prabhakar: ತಮ್ಮ ಕ್ಯಾರವಾನ್ ನಲ್ಲಿ ಪ್ರತಿದಿನ ಅಪ್ಪು ಫೋಟೋಗೆ ಪೂಜೆ ಮಾಡ್ತಾರೆ ನಟ ವಿನೋದ್ ಪ್ರಭಾಕರ್! ಯಾಕೆ ಗೊತ್ತಾ?

0 17

Vinod Prabhakar: ಚಂದನವನದ ಹಿರಿಯ ನಟರಾದ ಟೈಗರ್ ಪ್ರಭಾಕರ್ ಅವರ ಮಗ ವಿನೋದ್ ಪ್ರಭಾಕರ್. ಇವರ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. ಹಲವು ಸಿನಿಮಾಗಳಲ್ಲಿ ನಟಿಸುವ ಮೂಲಕ ವಿನೋದ್ ಪ್ರಭಾಕರ್ ಅವರು ಚಿತ್ರರಂಗಕ್ಕೆ ಪರಿಚಯವಾಗಿ, ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಈಗ ಸಿನಿಮಾಗಳಲ್ಲಿ ಬ್ಯುಸಿ ಆಗಿರುವ ವಿನೋದ್ ಅವರು ತಮ್ಮ ಕ್ಯಾರವಾನ್ ನಲ್ಲಿ ಅಪ್ಪು ಅವರ ಫೋಟೋ ಇಟ್ಟುಕೊಂಡು ಪ್ರತಿದಿನ ಅದಕ್ಕೆ ಪೂಜೆ ಮಾಡುತ್ತಾರೆ. ಅದು ಯಾಕೆ ಗೊತ್ತಾ?

ವಿನೋದ್ ಪ್ರಭಾಕರ್ ಅವರ ತಂದೆ ಟೈಗರ್ ಪ್ರಭಾಕರ್ ಅವರು ಡಾ. ರಾಜ್ ಕುಮಾರ್ ಅವರ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಹಾಗಾಗಿ ಎರಡು ಕುಟುಂಬಗಳ ನಡುವೆ ಸಾಕಷ್ಟು ವರ್ಷಗಳಿಂದ ಆ ಬಾಂಧವ್ಯ ಸ್ನೇಹವಿದೆ. ಇನ್ನು ಅಪ್ಪು ಅವರು ಸ್ನೇಹಜೀವಿ ಎಲ್ಲರೊಡನೆ ಆತ್ಮೀಯವಾಗಿ ಇರುತ್ತಿದ್ದರು. ಅಪ್ಪು ಅವರನ್ನು ಇಡೀ ಕರ್ನಾಟಕದ ಜನತೆ ದೇವರ ಹಾಗೆ ಕಾಣುತ್ತಿದೆ ಎಂದರೆ ಖಂಡಿತ ತಪ್ಪಲ್ಲ..

ಇನ್ನು ವಿನೋದ್ ಪ್ರಭಾಕರ್ ಅವರಿಗು ಕೂಡ ಅಪ್ಪು ಅವರನ್ನು ಕಂಡರೆ ಅಷ್ಟೇ ಪ್ರೀತಿ ಗೌರವವಿದೆ. ಹಾಗಾಗಿ ತಮ್ಮ ಕ್ಯಾರವಾನ್ ನಲ್ಲಿ ಅಪ್ಪು ಅವರ ಫೋಟೋ ಇಟ್ಟುಕೊಂಡು, ಆ ಜಾಗವನ್ನು ದೇವರ ಮನೆಯ ಹಾಗೆ ನೋಡಿಕೊಳ್ಳುತ್ತಾರೆ ವಿನೋದ್ ರಾಜ್. ಅಪ್ಪು ಅವರ ಫೋಟೋಗೆ ಹೂವು ಇಟ್ಟು ಪ್ರತಿದಿನ ಪೂಜೆ ಮಾಡುತ್ತಾರೆ. ಅಷ್ಟೇ ಅಲ್ಲ, ಅಪ್ಪು ಅವರ ಫೋಟೋ ಇರುವ ಕ್ಯಾರವಾನ್ ಒಳಗೆ ಚಪ್ಪಲಿ ಹಾಕೊಂಡು ಹೋಗುವುದಿಲ್ಲ.

ಬೇರೆಯವರು ಬಂದಾಗಲೂ ಚಪ್ಪಲಿಯನ್ನು ಹೊರಗಡೆ ಬಿಟ್ಟು ಬನ್ನಿ ಎಂದು ವಿನೋದ್ ಅವರು ಹೇಳುತ್ತಾರಂತೆ. ಈ ವಿಚಾರ ಕೇಳಿದರೆ ವಿನೋದ್ ಅವರಿಗೆ ಅಪ್ಪು ಅವರ ಮೇಲೆ ಎಷ್ಟು ಪ್ರೀತಿ ಗೌರವ ಇದೆ ಎನ್ನುವುದು ಗೊತ್ತಾಗುತ್ತದೆ. ಇನ್ನು ಅಪ್ಪು ಅವರ ಬಗ್ಗೆ ಎಷ್ಟು ಹೇಳಿದರೂ ಕಡಿಮೆಯೇ. ಇಂದು ಅವರು ನಮ್ಮೊಡನೆ ದೈಹಿಕವಾಗಿ ಇಲ್ಲದೇ ಹೋದರು, ಮಾನಸಿಕವಾಗಿ ಯಾವಾಗಲೂ ಕರ್ನಾಟಕದ ಜನತೆಯ ಜೊತೆಗೆ, ಕನ್ನಡಿಗರ ಪ್ರೀತಿಯ ಜೊತೆಗೆ ಶಾಶ್ವತವಾಗಿ ಇರುತ್ತಾರೆ.

Leave A Reply

Your email address will not be published.