Leelavathi: ಇಡೀ ಜೀವನ ಲೀಲಾವತಿ ಅವರಿಗೆ ಇದ್ದಿದ್ದು ಅದೊಂದೆ ಚಿಂತೆ: ಅಸಲಿ ವಿಚಾರ ತಿಳಿಸಿದ ವಿನೋದ್ ರಾಜ್

Written by Pooja Siddaraj

Published on:

Leelavathi: ಚಂದನವನದ ಹಿರಿಯನಟಿ ಲೀಲಾವತಿ ಅವರು ಡಿಸೆಂಬರ್ 8ರಂದು ಸಂಜೆ ಇಹಲೋಕ ತ್ಯಜಿಸಿದರು. ಇಂದಿಗೆ ಲೀಲಾವತಿ ಅವರ 11ನೇ ದಿನದ ಕಾರ್ಯ ಅವರ ಸಮಾಧಿ ಇರುವ ನೆಲಮಂಗಲದ ಸೋಲದೇವನಹಳ್ಳಿಯಲ್ಲಿ ನಡೆದಿದೆ. ಪೂಜೆ ಮುಗಿದ ಬಳಿಕ ವಿನೋದ್ ರಾಜ್ ಅವರು ತಾಯಿಯ ಬಗ್ಗೆ ಮಾತನಾಡಿ ಭಾವುಕರಾಗಿದ್ದಾರೆ.

ಲೀಲಾವತಿ ಅವರು 50ರ ದಶಕದ ಸಮಯದಿಂದಲು ಚಿತ್ರರಂಗದಲ್ಲಿ ಸಕ್ರಿಯವಾಗಿರುವ ಅತ್ಯುನ್ನತ ನಟಿಯರಲ್ಲಿ ಒಬ್ಬರು. ಕನ್ನಡ, ತೆಲುಗು, ತಮಿಳು, ಮಲಯಾಳಂ ಭಾಷೆಗಳಲ್ಲಿ 600 ಕ್ಕಿಂತ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ನಟಿಯಾಗಿ ಮಾತ್ರವಲ್ಲದೆ, ನಿರ್ಮಾಪಕಿಯಾಗಿ ತಮ್ಮದೇ ಸ್ವಂತ ಸಂಸ್ಥೆ ಶುರು ಮಾಡಿ ಕೆಲವು ಸಿನಿಮಾಗಳನ್ನು ನಿರ್ಮಾಣ ಮಾಡಿದ್ದಾರೆ..ಲೀಲಾವತಿ ಅವರು ಸಮಾಜಮುಖಿ ಕಾರ್ಯಗಳಲ್ಲಿ ತುಂಬಾ ಮುಂದಿದ್ದರು..

ಪ್ರಾಣಿ ಪಕ್ಷಿಗಳು ಮತ್ತು ಪರಿಸರದ ಮೇಲೆ ಹೆಚ್ಚು ಕಾಳಜಿ ಹೊಂದಿದ್ದ ಲೀಲಾವತಿ ಅವರು ತಮ್ಮ ಹಳ್ಳಿಯಲ್ಲಿ ಪಶು ಆಸ್ಪತ್ರೆಯನ್ನು ಕಟ್ಟಿಸಿದ್ದರು. ಹಾಗೆಯೇ ಮನುಷ್ಯರಿಗೂ ಆಸ್ಪತ್ರೆ ಕಟ್ಟಿಸಿದ್ದಾರೆ. ಇರುವಷ್ಟು ದಿವಸ ಲೀಲಾವತಿ ಅವರು ಈ ಸಮಾಜಕ್ಕೆ ತಮ್ಮಿಂದ ಆದದ್ದೆಲ್ಲವನ್ನು ನೀಡಿದ್ದಾರೆ. ಇಂಥ ಚೇತನದ ಅಗಲಿಕೆ ಕನ್ನಡ ಚಿತ್ರರಂಗಕ್ಕೆ ತುಂಬಲಾರದ ನಷ್ಟ ಎಂದರೆ ತಪ್ಪಲ್ಲ. ಇಂದು ಅವರ 11ನೇ ದಿನದ ಕಾರ್ಯದಲ್ಲಿ ವಿನೋದ್ ರಾಜ್ ಅವರು ಅಮ್ಮನ ಬಗ್ಗೆ ಮಾತನಾಡಿದ್ದಾರೆ.

“ನನಗೆ ಮತ್ತೆಮತ್ತೆ ಕಣ್ಣೀರು ಬರ್ತಿದೆ. ಅವರ ಸ್ಥಾನವನ್ನ ಹೇಗೆ ತುಂಬೋದು ಅಂತ ಹೆದರಿಕೆ ಶುರುವಾಗಿದೆ. ಅವರು ಮಾಡ್ತಿದ್ದ ಹಾಗೆ ಸಮಯಕ್ಕೆ ಸರಿಯಾಗಿ ಕೆಲಸ ಮಾಡೋದು ಕಷ್ಟ. ಅವರ ಇಡೀ ಜೀವನ ಇನ್ನೊಬ್ಬರಿಗೆ ನೋವು ಮಾಡಿದ್ನಾ ಅಂತ ಯೋಚನೆಯಲ್ಲೇ ಕಳೆದುಬಿಟ್ರು. ಇವತ್ತು ಅವರಿಗೆ ಈ ಸ್ಥಾನಸಿಕ್ಕಿರೋದು ಅದಕ್ಕೆ ಅನ್ಸುತ್ತೆ..”ಎಂದು ಅಮ್ಮನ ಬಗ್ಗೆ ಹೇಳಿದ್ದಾರೆ ವಿನೋದ್ ರಾಜ್.

Leave a Comment