Virat Anushka: ಎರಡನೇ ಮಗುವಿನ ನಿರೀಕ್ಷೆಯಲ್ಲಿ ವಿರಾಟ್ ಅನುಷ್ಕಾ? ಬೇಬಿ ಬಂಪ್ ವಿಡಿಯೋ ವೈರಲ್!

Written by Pooja Siddaraj

Published on:

Virat Anushka: ಕ್ರಿಕೆಟರ್ ಗಳು ಸಿನಿಮಾ ಕಲಾವಿದರನ್ನು ಮದುವೆ ಆಗಿರುವುದು ಹೊಸ ವಿಚಾರ ಅಲ್ಲ. ಈ ಹಿಂದೆಯೇ ಕ್ರಿಕೆಟಿಗರು ಬಾಲಿವುಡ್ ನಟಿಯರನ್ನು ಮದುವೆಯಾಗಿದ್ದಾರೆ. ಅದೇ ಸಾಲಿಗೆ ಸೇರುವ ದಂಪತಿ ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ. ಕೆಲ ವರ್ಷಗಳ ಕಾಲ ಡೇಟಿಂಗ್ ಮಾಡಿದ ಈ ಜೋಡಿ, 2017ರಲ್ಲಿ ಇಟಲಿಯಲ್ಲಿ ತಮ್ಮ ಆತ್ಮೀಯ ಬಳಗದವರ ಸಮ್ಮುಖದಲ್ಲಿ ಮದುವೆಯಾದರು. ಈ ಜೋಡಿ ಇಂದು ಎಲ್ಲಾ ಅಭಿಮಾನಿಗಳ ಮೆಚ್ಚಿನ ಜೋಡಿ ಆಗಿದ್ದಾರೆ ಎಂದರೆ ತಪ್ಪಲ್ಲ.

ವಿರುಷ್ಕಾ ದಂಪತಿಗೆ ಪ್ರಪಂಚಾದ್ಯಂತ ಕೋಟಿಗಟ್ಟಲೇ ಅಭಿಮಾನಿಗಳಿದ್ದಾರೆ. ಈ ಜೋಡಿ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಗಾಗ ಸುದ್ದಿಗಳು ಕೇಳಿ ಬರುತ್ತಲೇ ಇರುತ್ತದೆ. ಇದೀಗ ಈ ಜೋಡಿ ಬಗ್ಗೆ ಹೊಸದೊಂದು ಸುದ್ದಿ ಕೇಳಿಬಂದಿದ್ದು, ಅಭಿಮಾನಿಗಳು ಈ ಸುದ್ದಿ ನಿಜವಾಗಿರಲಿ ಆದಷ್ಟು ಬೇಗ ಈ ವಿಚಾರದ ಬಗ್ಗೆ ವಿರುಷ್ಕಾ ದಂಪತಿ ಅಧಿಕೃತವಾಗಿ ಮಾಹಿತಿ ನೀಡಲಿ ಎಂದು ಕಾಯುತ್ತಿದ್ದಾರೆ..

ವಿರಾಟ್ ಅನುಷ್ಕಾ ದಂಪತಿಗಳಿಗೆ 2021ರಲ್ಲಿ ಹೆಣ್ಣುಮಗು ಜನಿಸಿತು. ತಮ್ಮ ಮುದ್ದು ಮಗಳಿಗೆ ವಮಿಕಾ ಎಂದು ಹೆಸರಿಟ್ಟಿದ್ದಾರೆ ಈ ಜೋಡಿ. ಇವರಿಬ್ಬರು ಕೂಡ ಇದುವರೆಗೂ ತಮ್ಮ ಮಗುವಿನ ಮುಖವನ್ನು ಸೋಷಿಯಲ್ ಮೀಡಿಯಾದಲ್ಲಿ ರಿವೀಲ್ ಮಾಡಿಲ್ಲ. ಮಗುವಿನ ವಿಚಾರದಲ್ಲಿ ತಮಗೆ ಪ್ರೈವೆಸಿ ನೀಡಬೇಕು ಎಂದು ಮಾಧ್ಯಮದವರನ್ನು ಕೂಡ ಕೇಳಿಕೊಂಡಿದ್ದಾರೆ. ಮಗುವಿಗೆ 2 ವರ್ಷ ತುಂಬಿದ್ದರು ಈಗಲೂ ಅದೇ ಮಾತನ್ನು ಪಾಲಿಸಿಕೊಂಡು ಬರುತ್ತಿದ್ದಾರೆ..

ಇದೀಗ ಈ ಜೋಡಿ ಬಗ್ಗೆ ಕೇಳಿಬರುತ್ತಿರುವ ಹೊಸ ವಿಚಾರ ಏನು ಎಂದರೆ, ವಿರುಷ್ಕಾ ದಂಪತಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂದು ವರದಿಯ ಮೂಲಕ ತಿಳಿದುಬಂದಿದೆ. ಅನುಷ್ಕಾ ಅವರಿಗೆ ಈಗ 35 ವರ್ಷ, ಇದೀಗ ಇವರು ಎರಡನೇ ಮಗುವಿಗೆ ಗರ್ಭಿಣಿ ಆಗಿದ್ದಾರೆ ಎನ್ನುವ ಸುದ್ದಿ ಈಗ ವೈರಲ್ ಆಗುತ್ತಿದೆ. ಪ್ರಸ್ತುತ ಓಡಿಐ ವರ್ಲ್ಡ್ ಕಪ್ ಪಂದ್ಯಾವಳಿ ಭಾರತದಲ್ಲೇ ನಡೆಯುತ್ತಿದೆ ಎನ್ನುವ ವಿಚಾರ ಗೊತ್ತೇ ಇದೆ. ಭಾರತ ತಂಡದ ಮುಂದಿನ ಪಂದ್ಯ ನವೆಂಬರ್ 12ರಂದು ಬೆಂಗಳೂರಿನಲ್ಲಿ ನಡೆಯಲಿದೆ.

ಮುಂದಿನ ಪಂದ್ಯ ಬೆಂಗಳೂರಿನಲ್ಲಿ ನಡೆಯಲಿದೆ. ಈ ಕಾರಣಕ್ಕೆ ಬೆಂಗಳೂರಿಗೆ ಬಂದಿದೆ ಟೀಮ್ ಇಂಡಿಯಾ, ಈ ವೇಳೆ ವಿರಾಟ್ ಕೊಹ್ಲಿ ಅವರೊಡನೆ ಅನುಷ್ಕಾ ಶರ್ಮಾ ಅವರು ಸಹ ಬೆಂಗಳೂರಿಗೆ ಬಂದಿದ್ದು, ವಿರಾಟ್ ಅವರೊಡನೆ ಹೊರಗಡೆ ಓಡಾಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋ ನೋಡಿದರೆ ಅನುಷ್ಕಾ ಶರ್ಮಾ ಅವರ ಬೇಬಿ ಬಂಪ್ ಕಾಣಿಸುತ್ತಿದ್ದು, ಅನುಷ್ಕಾ ಶರ್ಮಾ ಅವರು ನಿಜಕ್ಕೂ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರಾ ಎನ್ನುವ ಅನುಮಾನ ಶುರುವಾಗಿದೆ.

Leave a Comment