Virat Kohli: ದಿಢೀರ್ ಎಂದು ಕಿಂಗ್ ಕೊಹ್ಲಿ ಮುಖಕ್ಕೆ ಏನಾಯ್ತು? ಸ್ಟೋರಿ ನೋಡಿ ಅಭಿಮಾನಿಗಳು ಶಾಕ್!

Written by Pooja Siddaraj

Published on:

Virat Kohli: ನಮ್ಮ ದೇಶ ಕಂಡ ಅದ್ಭುತವಾದ ಕ್ರಿಕೆಟರ್ ಗಳಲ್ಲಿ ಒಬ್ಬರು ವಿರಾಟ್ ಕೊಹ್ಲಿ, ಇವರಿಗೆ ನಮ್ಮ ದೇಶದಲ್ಲಿ ಮಾತ್ರವಲ್ಲ, ಹೊರದೇಶದಲ್ಲಿ ಕೂಡ ಅಷ್ಟೇ ಕ್ರೇಜ್ ಇದೆ. ವಿಶ್ವಾದ್ಯಂತ ಗುರುತಿಸಿಕೊಂಡು, ದೊಡ್ಡ ಮಟ್ಟದಲ್ಲಿ ಫ್ಯಾನ್ ಬೇಸ್ ಹೊಂದಿರುವವರು ವಿರಾಟ್ ಕೊಹ್ಲಿ. ಐಪಿಎಲ್, ಐಸಿಸಿ ಟೋರ್ನಮೆಂಟ್ ಗಳ ಮೂಲಕ ವಿಶ್ವವೇ ತಮ್ಮತ್ತ ತಿರುಗಿ ತಿರುಗಿ ನೋಡುವ ಜಾಗೆ ಮಾಡಿಕೊಂಡಿದ್ದಾರೆ.

ವಿಶ್ವದಲ್ಲಿ ಅತಿದೊಡ್ಡ ಫ್ಯಾನ್ ಹೆಸ್ ಹೊಂದಿರುವ ಸೆಲೆಬ್ರಿಟಿಗಳಲ್ಲಿ ವಿರಾಟ್ ಕೊಹ್ಲಿ ಅವರು ಅಗ್ರಸ್ಥಾನದಲ್ಲಿದ್ದಾರೆ ಎಂದರೆ ತಪ್ಪಲ್ಲ. ಇನ್ಸ್ಟಾಗ್ರಾಮ್ ನಲ್ಲಿ ಇವರಿಗೆ ಬರೋಬ್ಬರಿ 264 ಮಿಲಿಯನ್ ಫಾಲೋವರ್ಸ್ ಇದ್ದಾರೆ. ಇಂಥ ಸ್ಥಾನದಲ್ಲಿರುವ ವಿರಾಟ್ ಕೊಹ್ಲಿ ಅವರು ಶೇರ್ ಮಾಡಿರುವ ಒಂದು ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದೆ..

ವಿರಾಟ್ ಅವರು ಶೇರ್ ಮಾಡಿರುವ ಫೋಟೋದಲ್ಲಿ ಅವರ ಮುಖದ ಮೇಲೆ ಗಾಯಗಳಾಗಿವೆ. ಮೂಗಿಗೆ ಬ್ಯಾಂಡೇಡ್ ಹಾಕಲಾಗಿದೆ, ಕೆನ್ನೆಯ ಮೇಲೆ ಹಣೆಯ ಮೇಲೆ ಪೆಟ್ಟಾಗಿದೆ, ಕಣ್ಣುಗಳು ಊದಿಕೊಂಡಿವೆ. ಆದರೆ ಫೋಟೋದಲ್ಲಿ ನಗುತ್ತಿರುವ ಕೊಹ್ಲಿ ಅವರು ವಿಕ್ಟರಿ ಸಿಂಬಲ್ ತೋರಿಸಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಶಾಕ್ ಆಗಿದ್ದಾರೆ..

ತಮ್ಮ ಮೆಚ್ಚಿನ ಕ್ರಿಕೆಟರ್ ಗೆ ಯಾವ ತೊಂದರೆ ಆಯಿತೋ ಎಂದು ತಲೆ ಕೆಡಿಸಿಕೊಂಡಿದ್ದಾರೆ. ಆದರೆ ಅಭಿಮಾನಿಗಳು ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಇದು ಒಂದು ಬ್ರ್ಯಾಂಡ್ ಪ್ರೊಮೋಷನ್ ಗಾಗಿ ತೆಗೆದಿರುವ ಫೋಟೋ ಆಗಿದ್ದು, ಕೊಹ್ಲಿ ಅವರಿಗೆ ನಿಜಕ್ಕೂ ಏನು ಆಗಿಲ್ಲ. ಒಟ್ಟಿನಲ್ಲಿ ಈ ಫೋಟೋ ಅಂತೂ ವೈರಲ್ ಆಗಿದೆ.

Leave a Comment