ವೈರಸ್ ಹೊಡೆದೋಡಿಸಿ ನಿಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ!

Health & Fitness

ರೋಗವನ್ನು ಪ್ರತಿರೋಧಿಸುವ ಸಾಮರ್ಥ್ಯವನ್ನು ರೋಗ ನಿರೋಧಕ ಶಕ್ತಿ ಅಂತ ಕರೆಯುತ್ತಾರೆ.ವೈರಸ್ ಗಳಿಂದ ಮತ್ತು ವಿವಿಧ ರೀತಿಯ ಸೋಂಕಿನಿಂದ ರಕ್ಷಣೆಗೆ ಪ್ರತಿರೋಧಕ ಶಕ್ತಿ ಅತಿ ಅಗತ್ಯ.ರೋಗ ನಿರೋಧಕ ಶಕ್ತಿಯನ್ನು ಉತ್ತಮಗೊಳಿಸುವುದು ಜೀವಮಾನದ ಪ್ರಕ್ರಿಯೆಯಾಗಿದೆ.ಪೋಷಕರಾಗಿ ನಾವು ಮಗು ಜನಿಸಿದ ನಂತರ ಪ್ರತಿ ರಕ್ಷೆಯನ್ನು ಸುಧಾರಿಸಲು ನಮ್ಮ ಅತ್ಯುತ್ತಮ ಪ್ರಯತ್ನವನ್ನು ಮಾಡಬೇಕು.

ಪ್ರಸ್ತುತ ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯು ದಿನೇ ದಿನೇ ಕುಸಿಯುತ್ತಿದೆ ಹೊಸ ಆವಿಷ್ಕಾರಗಳು ಮತ್ತು ಸಂಶೋಧನೆಗಳ ಹೊರತಾಗಿಯೂ ಮಕ್ಕಳು ಅನಾರೋಗ್ಯಕ್ಕೆ ಒಳಗಾಗುತ್ತಿದ್ದಾರೆ.ಕೆಲವು ಕಾಲಕ್ರಮೇಣ ನಾವು ಮಕ್ಕಳಲ್ಲಿ ರೋಗ ನಿರೋಧಕ ಶಕ್ತಿಯನ್ನು ನಿರ್ಮಿಸಬಹುದೇ ?ನಿರ್ದಿಷ್ಟ ಅವಧಿಯ ನಂತರವೂ ಪ್ರತಿ ರಕ್ಷೆಯನ್ನು ನಿರ್ವಹಿಸಲು ಪುನಃ ಪ್ರಯತ್ನಿಸಬಹುದೆ ?ಹೀಗೆ ಅನೇಕ ಪ್ರಶ್ನೆಗಳು ಉದ್ಭವಿಸುವುದು ಮತ್ತು ಪ್ರತಿ ಮಗುವು ಅನನ್ಯವಾಗಿರುತ್ತಾರೆ ಹಾಗೂ ಪ್ರತಿರಕ್ಷಣೆಯು ವಿಭಿನ್ನವಾಗಿರುತ್ತದೆ.

ವಿಶೇಷ ವೈದ್ಯಕೀಯ ಆರೈಕೆ ಮತ್ತು ಅವಶ್ಯಕತೆಗೆ ಅಗತ್ಯವಿರುವ ರೋಗನಿರೋಧಕಶಕ್ತಿ ಮಗುವಿನಲ್ಲಿ ಅಭಿವೃದ್ಧಿ ಪಡಿಸಲು ಮತ್ತು ಉತ್ತಮ ವಿನಾಯಿತಿಯನ್ನು ಅಂದ್ರೆ ಇಮ್ಯುನಿಟಿಯನ್ನು ನಿರ್ಮಿಸಲು ಸಹಾಯ ಮಾಡುವ ಅನೇಕ ಅಂಶಗಳು ಖಂಡಿತವಾಗಿಯೂ ಇವೆ.

ಜೇಷ್ಠ ಮಧು

ಈ ಜೇಷ್ಠಮಧುವಿನ ಕಷಾಯವನ್ನು ನಿಯಮಿತವಾಗಿ ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.

ಬೆಳ್ಳುಳ್ಳಿ

ಪ್ರತಿನಿತ್ಯ ಬೆಳ್ಳುಳ್ಳಿ ಸೇವನೆ ಮಾಡುವುದರಿಂದ ಪ್ರೋಟಿನ್ , ವಿಟಮಿನ್ ಎ , ಬಿ , ಸಿ ಸೇರಿದಂತೆ ಹಲವು ಪೌಷ್ಟಿಕಾಂಶಗಳು ಸಿಗುತ್ತದೆ ಹಾಗೂ ಇದು ಅಸಿಡಿಟಿ ಗ್ಯಾಸ್ಟ್ರಿಕ್ ತೊಂದರೆಗಳನ್ನು ಇದು ದೂರಮಾಡುತ್ತದೆ. ಗ್ಯಾಸ್ಟಿಕ್ ಮತ್ತು ಅಸಿಡಿಟಿಗೆ ಅತ್ಯುತ್ತಮ ರಾಮಬಾಣವಾಗಿದೆ.

ಬಸಳೆಸೊಪ್ಪು

ಬಸಳೆಸೊಪ್ಪನ್ನು ಪೌಷ್ಟಿಕಾಂಶದ ಸೊಪ್ಪು ಅಂತ ಕರೆಯುತ್ತಾರೆ. ಪ್ರತಿನಿತ್ಯ ಈ ಸೊಪ್ಪನ್ನು ತಿನ್ನುವುದರಿಂದ ದೇಹದ ಆರೋಗ್ಯ ಹೆಚ್ಚಾಗುತ್ತದೆ.

ಸಿಹಿ ಗೆಣಸು

ಸಿಹಿ ಗೆಣಸಿನಲ್ಲಿ ಕ್ಯಾರೆಟಿನಾಯಿಡ್ಗಳು ಹೆಚ್ಚಾಗಿರುತ್ತವೆ.ವಿಟಮಿನ್ ಎ ಅನ್ನು ಅಧಿಕ ಪ್ರಮಾಣದಲ್ಲಿ ಹೊಂದಿರುವಂತಹ ಈ ಸಿಹಿ ಗೆಣಸು ದೇಹಕ್ಕೆ ಪೋಷಕಾಂಶ ಮತ್ತು ನಾರಿನ ಅಂಶ ಒದಗಿಸಿ ಜೀರ್ಣಕ್ರಿಯೆ ಸರಾಗವಾಗಿ ಆಗುವಂತೆ ಮಾಡುತ್ತದೆ.

ಅಣಬೆ

ಅಣಬೆಯು ಅತಿ ಹೆಚ್ಚು ಪ್ರೊಟೀನ್ಯುಕ್ತ ಆಹಾರವಾಗಿದ್ದು , ವಿಟಮಿನ್ , ಮಿನರಲ್ , ಅಮೈನೋ ಆಸಿಡ್ , ಆ್ಯಂಟಿ ಬಯಾಟಿಕ್ ಮತ್ತು ಆ್ಯಂಟಿ ಅಕ್ಸಿಡೆಂಟ್ ಗಳು ಅಧಿಕವಾಗಿರುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚು ಮಾಡುತ್ತದೆ.

ಕೋಸು ಗಡ್ಡೆ

ಕೋಸು ಗಡ್ಡೆ ಪಲ್ಯ ,ಕೋಸು ಗಡ್ಡೆ ಸೂಪ್ , ಕೋಸುಗಡ್ಡೆ ಸಲಾಡ್ ಕೂಡ ಉತ್ತಮ ಆಹಾರವಾಗಿದೆ.

ಕಿವಿ ಹಣ್ಣು

ಹಣ್ಣುಗಳಲ್ಲಿ ಕಿವಿ ಹಣ್ಣು ಹೆಚ್ಚು ಪೋಷಕಾಂಶಗಳನ್ನು ಹೊಂದಿರುವುದರಿಂದ ಪ್ರತಿ ದಿನ ಈ ಹಣ್ಣು ನಿಮಗೆ ಸಿಕ್ಕರೆ ತಪ್ಪದೇ ಸೇವಿಸಬೇಕು.ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು.

ಜವಿ ಗೋಧಿ

ಜವಿ ಗೋಧಿಯಲ್ಲಿ ಅಣಬೆಯಲ್ಲಿ ಇರುವಂತೆ ಅತಿ ಹೆಚ್ಚು ಪೋಷಕಾಂಶಗಳಿದ್ದು ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ವೃದ್ಧಿಸುತ್ತದೆ.

ಬಾದಾಮಿ

ಬದಾಮಿಯಲ್ಲಿ 50% ವಿಟಮಿನ್ ಎ ಅಂಶ ಇದ್ದು ಇದು ಖಿನ್ನತೆಯನ್ನು ಹೋಗಲಾಡಿಸುತ್ತದೆ ಹಾಗೂ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಅಮೃತಬಳ್ಳಿ

ಅಮೃತಬಳ್ಳಿ ಕಷಾಯವನ್ನು ವಾರದಲ್ಲಿ 2 ರಿಂದ 3 ಬಾರಿ ಸೇವಿಸುತ್ತಾ ಬಂದರೆ ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗುತ್ತದೆ.ಮೊಸರು ಮತ್ತು ಹಾಲು ಮೊಸರಿನಲ್ಲಿ ವಿಟಮಿನ್ ಡಿ ಇದ್ದು , ಇದನ್ನು ಪ್ರತಿದಿನ ಸೇವಿಸುವುದರಿಂದ ಶೀತ , ಕೆಮ್ಮು ಹೀಗೆ ಚಿಕ್ಕ ಪುಟ್ಟ ಕಾಯಿಲೆಗಳನ್ನು ತಡೆಗಟ್ಟಬಹುದು. 70 % ರೋಗ ನಿರೋಧಕ ಅಂಶವು ನಮ್ಮ ಜೀರ್ಣಾಂಗದಲ್ಲಿ ಇರುತ್ತದೆ. ಜೀರ್ಣಕ್ರಿಯೆ ಸರಿಯಾಗಿ ನಡೆದರೆ ಮಾತ್ರ ಅದು ದೇಹಕ್ಕೆ ದೊರೆಯುತ್ತದೆ.

ಮೊಸರು ಜೀರ್ಣಕ್ರಿಯೆ ಸರಿಯಾಗಿ ನಡೆಯಲು ಸಹಕಾರಿಯಾಗಿದೆ.

ಹೀಗೆ ಇತ್ತೀಚಿನ ದಿನಗಳಲ್ಲಿ ಮುಖ್ಯವಾಗಿ ಈ ಕೊರೊನಾ ಸಮಸ್ಯೆ ಬಂದಾಗಿನಿಂದ ನಮಗೆ ಪೌಷ್ಟಿಕಾಂಶದ ಮತ್ತು ಪೌಷ್ಟಿಕ ಪದಾರ್ಥಗಳ ಅಗತ್ಯವಿದೆ.ನಾವು ನಮ್ಮ ಇಮ್ಯುನಿಟಿ ಯನ್ನು ಬೆಳೆಸಿಕೊಳ್ಳಬೇಕೆಂದರೆ ಈ ಮೇಲೆ ತಿಳಿಸಿರುವ ಪದಾರ್ಥಗಳನ್ನು ಸಾಧ್ಯವಾದಷ್ಟು ಸೇವಿಸಿಕೊಂಡು ನಮ್ಮ ದೇಹದಲ್ಲಿರುವ ಇಮ್ಯುನಿಟಿ ಯನ್ನು ಬೆಳೆಸಿಕೊಂಡರೆ ರೋಗನಿರೋಧಕ ಶಕ್ತಿ ಹೆಚ್ಚಾಗಿ ರೋಗದಿಂದ ನಾವು ಪಾರಾಗಲು ಸಾಧ್ಯವಾಗುತ್ತದೆ.

ಧನ್ಯವಾದಗಳು.

Leave a Reply

Your email address will not be published.