ಇಂದಿನ ಆರ್ ಸಿ ಬಿ vs ಕೆಕೆಆರ್ ಪಂದ್ಯ ರದ್ದು!ಯಾಕಾಗಿ ಗೋತ್ತಾ?ಓದಿ

Sports

ದೇಶದಲ್ಲಿ ಹೆಚ್ಚುತ್ತಿರುವ ಕೋರೊನಾದ ನಡುವೆ ಐಪಿಎಲ್‌ನ 14 ನೇ ಸೀಸನ್ ಒಂದು ಕಡೆ ಬಯೋಬಬಲ್‌ನಲ್ಲಿ ಪ್ರಾರಂಭವಾಗಿ ಯಶಸ್ವಿಯಾಗಿ ನಡೆಯುತ್ತಿರುವಾಗ ಇದೀಗ ಬಿಸಿಸಿಐ ಗೆ ದೋಡ್ಡ ಆಘಾತವನ್ನ ಉಂಟುಮಾಡಿದೆ.

ಇಬ್ಬರು ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ಆಟಗಾರರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ. ಇದರ ಪರಿಣಾಮವಾಗಿ ಕೋಲ್ಕತಾ ನೈಟ್ ರೈಡರ್ಸ್ (ಕೆಕೆಆರ್) ವಿರುದ್ಧದ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಪಂದ್ಯವನ್ನು ಇಂದು ಮುಂದೂಡಲಾಗಿದೆ.

ಕೋಲ್ಕತಾ ತಂಡದ ಇಬ್ಬರು ಆಟಗಾರರು ಕರೋನಾ ರೋಗಕ್ಕೆ ತುತ್ತಾಗಿದ್ದಾರೆ. ಆದ್ದರಿಂದ ಆರ್‌ಸಿಬಿ ಆಟಗಾರರು ತಮ್ಮ ವಿರುದ್ಧ ಆಡಲು ಸಿದ್ಧರಿಲ್ಲ ಎಂದು ಪಂದ್ಯವನ್ನ ಮುಂದೂಡಲಾಗಿದೆ.ಕೆಕೆಆರ್ ಸ್ಪಿನ್ನರ್ ವರುಣ್ ಚಕ್ರವರ್ತಿ ಮತ್ತು ವೇಗಿ ಸಂದೀಪ್ ವಾರಿಯರ್ ಇಬ್ಬರೂ ಕರೋನಾವನ್ನು ಪಾಸಿಟಿವ್ ಆಗಿದ್ದಾರೆ ಹಾಗು ಈ ಎರಡೂ ಆಟಗಾರರನ್ನು ಪ್ರತ್ಯೇಕವಾಗಿ ಇರಿಸಲಾಗಿದೆ. ಇದಲ್ಲದೆ, ಆಸ್ಟ್ರೇಲಿಯಾದ ವೇಗದ ಬೌಲರ್ ಪ್ಯಾಟ್ ಕಮ್ಮಿನ್ಸ್ ಸೇರಿದಂತೆ ಐದು ಆಟಗಾರರು ಅನಾರೋಗ್ಯದಿಂದ ಬಳಲುತ್ತಿದ್ದಾರೆ ಎಂದು ವರದಿಯಾಗಿದೆ.

ವರುಣ್ ಚಕ್ರವರ್ತಿ ಇತ್ತೀಚೆಗೆ ಭುಜದ ಸ್ಕ್ಯಾನ್ಗಾಗಿ ಬಯೋ ಬಬಲ್ ನಿಂದ ಹೊರಗೆ ಹೋಗಿದ್ದರು. ಅದೇ ಸಮಯದಲ್ಲಿ, ಕರೋನಾ ಅವರಿಗೆ ಬಂದಿರಬಹುದೆ ಎಂದು ಊಹಿಸಲಾಗುತ್ತಿದೆ.ಬಿಸಿಸಿಐ ಕೆಲವು ದಿನಗಳ ಹಿಂದೆ ಬಯೋ ಬಬಲ್ ನಿಯಮಗಳನ್ನು ಬಿಗಿಗೊಳಿಸಿತ್ತು. ಪ್ರತಿ ಎರಡು ದಿನಗಳಿಗೊಮ್ಮೆ ಆಟಗಾರರ ಮೇಲೆ ಕರೋನಾ ಪರೀಕ್ಷೆಗಳನ್ನು ನಡೆಸಲಾಗುತ್ತಿತ್ತು

Leave a Reply

Your email address will not be published.