ವೀಕೆಂಡ್ ವಿತ್ ರಮೇಶ್ ಹೊಸ ಸೀಸನ್ ಗೆ ದಿನಗಣನೆ: ಮಾಲಾಶ್ರೀ, ರಿಷಬ್ ಶೆಟ್ಟಿ ಬರ್ತಾರಾ? ಏನಿದು ವೈರಲ್ ಸುದ್ದಿ?

0
35

Weekend With Ramesh :ಬಹುಭಾಷಾ ನಟ, ಕನ್ನಡ ಚಿತ್ರರಂಗದಲ್ಲಿ(Kannada cinema industry) ದೊಡ್ಡ ಹೆಸರೇನು ಮಾಡಿರುವ ನಟ ರಮೇಶ್ ಅರವಿಂದ್(Ramesh Arvind) ಅವರು ಸಿನಿಮಾಗಳು ಮಾತ್ರವೇ ಅಲ್ಲದೆ ಕನ್ನಡ ಕಿರುತೆರೆಯಲ್ಲೂ(Kannada Small Screen) ಸಾಕಷ್ಟು ಜನಪ್ರಿಯತೆಯನ್ನು ಪಡೆದುಕೊಂಡಿದ್ದಾರೆ. ಕಿರುತೆರೆಯ ಜನಪ್ರಿಯ ಶೋಗಳಿಗೆ ನಿರೂಪಕನಾಗಿ ಅವರಿಗೆ ಒಳ್ಳೆಯ ಬೇಡಿಕೆ ಇದೆ. ಈಗಾಗಲೇ ಕೆಲವೊಂದು ಜನಪ್ರಿಯ ಕಾರ್ಯಕ್ರಮಗಳನ್ನು ನಿರೂಪಣೆ ಮಾಡಿರುವ ಅವರು ಆ ಕಾರ್ಯಕ್ರಮಗಳ ಯಶಸ್ಸಿಗೂ ಕಾರಣರಾಗಿದ್ದಾರೆ ಎನ್ನುವುದರಲ್ಲಿ ಎರಡು ಮಾತಿಲ್ಲ. ರಮೇಶ್ ಅರವಿಂದ್(Ramesh Arvind) ಅವರ ನಿರೂಪಣೆಯಲ್ಲಿ ಕನ್ನಡ ಕಿರುತೆರೆಯಲ್ಲಿ ಸಾಕಷ್ಟು ಜನ ಮನ್ನಣೆ ಮತ್ತು ಜನ ಮೆಚ್ಚುಗೆಯನ್ನು ಪಡೆದಿರುವ ಕಾರ್ಯಕ್ರಮ ಎಂದರೆ ಎಲ್ಲರಿಗೂ ತಟ್ಟನೆ ನೆನಪಾಗುವುದು ವೀಕೆಂಡ್ ವಿತ್ ರಮೇಶ್ (Weekend With Ramesh) ಕಾರ್ಯಕ್ರಮ.

ಮನೆಯಲ್ಲಿ ಬಡತನ ಬರುವ ಮುನ್ನ ಸಿಗುವ 9 ಸೂಚನೆಗಳು ವಾಸ್ತು ಶಾಸ್ತ್ರದ ಪ್ರಕಾರ ನಾವು ಮಾಡುವ ತಪ್ಪುಗಳು!

ಈ ಶೋ‌ ಗೆ ಬಹುದೊಡ್ಡ ಅಭಿಮಾನಿಗಳ ಬಳಗವೇ ಇದೆ. ಈಗಾಗಲೇ ನಾಲ್ಕು ಯಶಸ್ವಿ ಸೀಸನ್ ಗಳನ್ನು ಪೂರ್ತಿ ಮಾಡಿರುವ ವೀಕೆಂಡ್ ವಿತ್ ರಮೇಶ್ 5ನೇ (Weekend With Ramesh Season 5) ಸೀಸನ್ ಯಾವಾಗ ಬರಲಿದೆ ಎನ್ನುವ ನಿರೀಕ್ಷೆಯಲ್ಲಿದ್ದಾರೆ ಅಭಿಮಾನಿಗಳು. ಈ ಕಾರ್ಯಕ್ರಮದ ನಿರೀಕ್ಷೆಯಲ್ಲಿದ್ದ ಪ್ರೇಕ್ಷಕರಿಗೆ ಜೀ ಕನ್ನಡ ವಾಹಿನಿಯ ಕಡೆಯಿಂದ ಒಂದು ಒಳ್ಳೆಯ ಸುದ್ದಿ ಹೊರ ಬಂದಿದೆ. ಹೌದು, ಸುದ್ದಿಗಳ ಪ್ರಕಾರ ವೀಕೆಂಡ್ ವಿತ್ ರಮೇಶ್ ನ 5ನೇ ಸೀಸನ್ ಬಹಳ ಶೀಘ್ರದಲ್ಲೇ ಶುರುವಾಗಲಿದೆ ಎನ್ನಲಾಗುತ್ತಿದ್ದು ಅದಕ್ಕೆ ದಿನಗಣನೆ ಆರಂಭವಾಗಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು, ಯಾರೆಲ್ಲಾ ಸೆಲೆಬ್ರಿಟಿಗಳು ಸಾಧಕರು ಈ ಬಾರಿ ಕಾರ್ಯಕ್ರಮಕ್ಕೆ ಬರಬೇಕು ಎನ್ನುವ ವಿಚಾರವಾಗಿ ಒಂದಷ್ಟು ಹೆಸರುಗಳನ್ನು ಹೇಳುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಬರಲಿದೆ ಎಂದು ತಿಳಿದು ಕೂಡಲೇ ಸಾಮಾಜಿಕ ಜಾಲತಾಣಗಳಲ್ಲಿ ಒಂದಷ್ಟು ಚರ್ಚೆಗಳು ಪ್ರಾರಂಭವಾಗಿದೆ. ಪ್ರತಿ ಬಾರಿಯೂ ಸಿನಿಮಾ ಕ್ಷೇತ್ರದ ಸಾಧಕರನ್ನು ಕರೆ ತಂದಿರುವ ಈ ಕಾರ್ಯಕ್ರಮದಲ್ಲಿ ಈ ಬಾರಿ ಕಾಂತರಾ ಸಿನಿಮಾದ ನಾಯಕ ನಿರ್ದೇಶಕ ರಿಸೆಬ್ ಶೆಟ್ಟಿಯವರು ಬರಲಿ ಎಂದು ಹಾಗೂ ಕನಸಿನ ರಾಣಿ ಖ್ಯಾತಿಯ ಮಾಲಾಶ್ರೀ ಅವರು ಬರಬೇಕು ಎನ್ನುವುದು ಅವರ ಅಭಿಮಾನಿಗಳ ಬೇಡಿಕೆಯಾಗಿದೆ.

ಇದೇ ವೇಳೆ, ಈ ಕಾರ್ಯಕ್ರಮ ಕೇವಲ ಸಿನಿಮಾ ಸೆಲೆಬ್ರಿಟಿಗಳಿಗೆ ಮಾತ್ರವೇ ಸೀಮಿತ ಆಗದಿರಲಿ. ತೆರೆಮರೆಯಲ್ಲಿ ಸಾಧನೆ ಮಾಡಿರುವ ಬಹಳಷ್ಟು ಮಂದಿ ಇದ್ದು ಅಂತಹವರನ್ನು ಕಾರ್ಯಕ್ರಮಕ್ಕೆ ಕರೆ ತಂದು ಇಡೀ ಕರ್ನಾಟಕಕ್ಕೆ ಪರಿಚಯಿಸುವಂತೆ ಆಗಲಿ ಎಂಬುದಾಗಿ ವೀಕ್ಷಕರು ಬೇಡಿಕೆಯನ್ನು ಇಡುತ್ತಿದ್ದಾರೆ. ವೀಕೆಂಡ್ ವಿತ್ ರಮೇಶ್ ಸೀಸನ್ 5 ಯಾವಾಗ ಪ್ರಾರಂಭವಾಗಲಿದೆ ಎನ್ನುವುದು ಸದ್ಯಕ್ಕೆ ಎಲ್ಲರ ಕುತೂಹಲದ ವಿಷಯವಾಗಿದ್ದು, ಈ ವಿಚಾರವಾಗಿ ವಾಹಿನಿಯ ಕಡೆಯಿಂದ ಅಧಿಕೃತ ಘೋಷಣೆ ಆಗಬೇಕಾಗಿದೆ.

LEAVE A REPLY

Please enter your comment!
Please enter your name here