Weight Loss: ದೇಹದ ತೂಕ ಕಡಿಮೆ ಮಾಡುವ ಭರದಲ್ಲಿ ಈ ತಪ್ಪುಗಳನ್ನು ಮಾಡಬೇಡಿ, ಆರೋಗ್ಯಕ್ಕೆ ಆಪತ್ತು

Written by Pooja Siddaraj

Published on:

Weight Loss: ಈಗಿನ ಜೀವನಶೈಲಿ ಮೊದಲಿನ ಹಾಗಿಲ್ಲ. ಹದಗೆಟ್ಟಿರುವ ಜೀವನಶೈಲಿಯಲ್ಲಿ ಆರೋಗ್ಯಕರ ಊಟ ಸೇವಿಸದೇ ಇರುವುದು ಅಥವಾ ಬೇರೆ ಕಾರಣಗಳಿಂದ ಜನರ ದೇಹದ ತೂಕ ಹೆಚ್ಚಾಗುವ ಸಾಧ್ಯತೆ ಜಾಸ್ತಿಯೇ ಇರುತ್ತದೆ. ಹಾಗೆಯೇ ಹಲವರಿಗೆ ಬೊಜ್ಜು ಕೂಡ ಜಾಸ್ತಿ ಇರುತ್ತದೆ. ಹೀಗಿರುವವರು ದೇಹದ ತೂಕ ಇಳಿಸುವ ಪ್ರಯತ್ನ ಮಾಡುತ್ತಾರೆ.

ಆದರೆ ದೇಹದ ತೂಕವನ್ನು ಇಳಿಸುವ ಪ್ರಕ್ರಿಯೆಯಲ್ಲಿ ಕೆಲವು ತಪ್ಪುಗಳು ಕೂಡ ನಡೆಯುತ್ತದೆ. ಅವು ನಿಮ್ಮ ಆರೋಗ್ಯದ ಮೇಲೆ ನೇರವಾಗಿ ಪರಿಣಾಮ ಬೀರಬಹುದು. ಹಾಗಾಗಿ ನೀವು ದೇಹದ ತೂಕ ಇಳಿಸುವ ಕಾರ್ಯದಲ್ಲಿ ಬಹಳ ಹುಷಾರಾಗಿ ಇರಬೇಕು. ಈ ಕೆಲವು ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಸಮಸ್ಯೆ ಆಗುತ್ತದೆ. ಹಾಗಿದ್ದಲ್ಲಿ ನೀವು ಯಾವ ತಪ್ಪುಗಳನ್ನು ಮಾಡಬಾರದು ಎಂದು ತಿಳಿಸುತ್ತೇವೆ ನೋಡಿ..

*ದೇಹದ ತೂಕ ಇಳಿಸುವ ಕಾರ್ಯದಲ್ಲಿ ವ್ಯಾಯಾಮ ಮಾಡುವುದರ ಜೊತೆಗೆ ಕನಿಷ್ಠ 8 ಗಂಟೆಗಳ ಕಾಲ ನಿದ್ದೆ ಮಾಡುವುದು ಕೂಡ ಮುಖ್ಯವಾಗುತ್ತದೆ. ಹಾಗಾಗಿ ನಿದ್ದೆ ಮಾಡುವುದರ ಕಡೆಗೂ ನೀವು ಗಮನ ಕೊಡಬೇಕು. ವ್ಯಾಯಾಮದ ಭರದಲ್ಲಿ ನಿದ್ದೆ ಬಗ್ಗೆ ಗಮನ ಕೊಡದೇ ಇರಬೇಡಿ.

*ತೂಕ ಇಳಿಸಲು ನೀವು ಪ್ರಯತ್ನ ಪಡುವಾಗ ನಿಮಗೆ ಹೆಚ್ಚಿಗೆ ಹಸಿವು ಆಗುತ್ತದೆ. ಜನರು ಈ ಹಸಿವಿಗೆ ಸೊಪ್ಪು ಹಾಕದೆ, ತೀರಾ ಹಸಿವಾದಾಗ ತಿನ್ನುವುದು, ಜಾಸ್ತಿ ಕಾಲ ತಿನ್ನದೆಯೇ ಇರುವುದು ಈ ರೀತಿ ಮಾಡುತ್ತಾರೆ. ಆದರೆ ಹೀಗೆ ಮಾಡುವುದು ತಪ್ಪು. ಸಮಯಕ್ಕೆ ಆಹಾರ ಕೂಡ ಸೇವಿಸಬೇಕು.

*ತೂಕ ಇಳಿಸುತ್ತಿರುವ ಜನರು ಕಾರ್ಬೊಹೈಡ್ರೇಟ್ ಊಟ ತಿನ್ನುವುದಕ್ಕೆ ಭಯ ಪಡುತ್ತಾರೆ. ಮನೆಯಲ್ಲೇ ಅಡುಗೆ ಮಾಡಿದ ಉಪ್ಪಿಟ್ಟು, ಇಡ್ಲಿ, ದೋಸೆ ಇದೆಲ್ಲವನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೆ ಯಾವುದೇ ತೊಂದರೆ ಆಗುವುದಿಲ್ಲ. ಒಂದು ವೇಳೆ ಕಾರ್ಬೋಹೈಡ್ರೇಟ್ ಸೇವಿಸದೇ ಇದ್ದರೆ ನಿಮ್ಮ ದೇಹಕ್ಕೆ ಆಯಾಸ ಕೂಡ ಆಗಬಹುದು. ಹಾಗಾಗಿ ಹುಷಾರಾಗಿರಿ

Leave a Comment