Varthur Santhosh: ಬಿಗ್ ಬಾಸ್ ಮನೆಗೆ ಎರಡು ವಾರಗಳ ಹಿಂದೆ ಸ್ಪರ್ಧಿಯಾಗಿ ಬಂದವರು ವರ್ತೂರ್ ಸಂತೋಷ್. ಎರಡು ವಾರಗಳಿಂದ ತಮ್ಮದೇ ಶೈಲಿಯಲ್ಲಿ ಆಡುತ್ತಾ ಹೋಗುತ್ತಿದ್ದಾರೆ. ಈ ವಾರ ವೀಕೆಂಡ್ ಎಪಿಸೋಡ್ ನಲ್ಲಿ ಸುದೀಪ್ ಅವರು ವಾರ್ತೆ ಸಂತೋಷ್ ಎಂದು ಹೆಸರು ಕೊಟ್ಟು ತಮಾಷೆ ಕೂಡ ಮಾಡಿದ್ದರು. ಆದರೆ ನಿನ್ನೆ ಮಧ್ಯರಾತ್ರಿ ವರ್ತೂರ್ ಸಂತೋಷ್ ಅವರು ಅರೆಸ್ಟ್ ಆಗಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.
ವರ್ತೂರ್ ಸಂತೋಷ್ ಅವರನ್ನು ಫಾರೆಸ್ಟ್ ಡಿಪಾರ್ಟ್ಮೆಂಟ್ ಆಫೀಸರ್ ಗಳು ಬಿಗ್ ಬಾಸ್ ಮನೆಗೆ ಹೋಗಿ ಅರೆಸ್ಟ್ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ. ಅಧಿಕಾರಿಗಳು ಸಂತೋಷ್ ಅವರನ್ನು ಅರೆಸ್ಟ್ ಮಾಡಿರುವುದು ಅವರು ಹುಲಿ ಉಗುರು ಇರುವ ಪೆಂಡೆಂಟ್ ಧರಿಸಿದ್ದಾರೆ ಎನ್ನುವ ಕಾರಣಕ್ಕಾಗಿ. ವರ್ತೂರ್ ಸಂತೋಷ್ ಅವರನ್ನು ಈ ಕಾರಣಕ್ಕೆ ಅರೆಸ್ಟ್ ಮಾಡಿದ್ದಾರೆ ಎನ್ನಲಾಗಿದೆ.
ಆಕ್ಟೊಬರ್ 22ರ ಮಧ್ಯರಾತ್ರಿ ವರ್ತೂರ್ ಸಂತೋಷ್ ಅವರನ್ನು ಅರಣ್ಯಾಧಿಕಾರಿಗಳು ಬಿಗ್ ಬಾಸ್ ಮನೆಯಿಂದ ಹೊರಗೆ ಕರೆದುಕೊಂಡು ಹೋಗಿದ್ದಾರೆ. ಸಂತೋಷ್ ಅವರು ಧರಿಸಿದ್ದ ಪೆಂಡೆಂಡ್ ನೋಡಿ, ಪರಿಶೀಲಿಸಲು ವರ್ತೂರ್ ಸಂತೋಷ್ ಅವರು ಧರಿಸಿದ್ದ ಪೆಂಡೆಂಟ್ ಅನ್ನು ಕಳಿಸಿಕೊಡಬೇಕು ಎಂದು ಬಿಗ್ ಬಾಸ್ ಟೀಮ್ ಅನ್ನು ಕೇಳಲಾಗಿದ್ದು, ಅಧಿಕಾರಿಗಳು ಅದನ್ನು ಪರಿಶೀಲಿಸಿ, ನಿಜವಾದ ಹುಲಿಯ ಉಗುರು ಎಂದು ಖಚಿತಪಡಿಸಿದ್ದಾರೆ. ಇನ್ನು ಕೆಲವು ಅಧಿಕಾರಿಗಳಿಗೆ ಹೆಚ್ಚಿನ ಮಾಹಿತಿಗಾಗಿ ಸಂತೋಷ್ ಅವರ ಮನೆಗೆ ಹೋಗಿದ್ದಾರೆ.
ವರ್ತೂರ್ ಸಂತೋಷ್ ಅವರ ಕುಟುಂಬದವರು ಅದು ಹುಲಿಯ ಉಗುರು ಎಂದು ನಮಗೆಲ್ಲ ಗೊತ್ತಿರಲಿಲ್ಲ, ಅವನಿಗೂ ಗೊತ್ತಿರಲಿಲ್ಲ, ಗೊತ್ತಿದ್ದರೂ ಯಾರು ತಪ್ಪು ಮಾಡ್ತಾರೆ ಎಂದು ಹೇಳಿದ್ದಾರೆ. ಎಲ್ಲಾ ವಿಚಾರಣೆಗಳನ್ನು ಮುಗಿಸಿದ ನಂತರ ವರ್ತೂರ್ ಸಂತೋಷ್ ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ. ಈ ಸಮಯ ಮುಗಿದ ಬಳಿಕ ಇನ್ನು ಹೆಚ್ಚು ಸಮಯ ಜೈಲು ವಾಸ ವಿಧಿಸಬಹುದು ಎನ್ನಲಾಗಿದೆ.
ಪರಿಸ್ಥಿತಿ ಈ ರೀತಿ ಪರಿಸ್ಥಿತಿ ಬದಲಾಗಿದ್ದು, ವರ್ತೂರ್ ಸಂತೋಷ್ ಅವರು ಮತ್ತೆ ಬಿಗ್ ಬಾಸ್ ಮನೆಗೆ ಹೋಗುತ್ತಾರ ಇಲ್ಲವಾ ಎನ್ನುವ ಗೊಂದಲ ಶುರುವಾಗಿದೆ. ಈ ಬಗ್ಗೆ ಮುಂದಿನ ಅಪ್ಡೇಟ್ ಏನಾಗುತ್ತದೆ ಎನ್ನುವುದನ್ನು ಕಾದು ನೋಡಬೇಕಿದೆ. ಬಿಗ್ ಬಾಸ್ ಮನೆಯಲ್ಲಿ ಎರಡನೇ ವಾರದ ಆಟ ಮುಗಿಸಿ, ಮೂರನೇ ವಾರ ಶುರು ಆದಾಗ ಈ ಘಟನೆ ನಡೆದಿದೆ.