Womem Naga Sadhu : Womem Naga Sadhu in kannada ಹಿಂದೂ ಧರ್ಮದಲ್ಲಿ ಹಲವಾರು ರೀತಿಯ ಋಷಿಗಳು ಮತ್ತು ಸಂತರು ಇದ್ದಾರೆ. ಈ ಋಷಿಗಳಲ್ಲಿ ಒಬ್ಬ ನಾಗ ಸಾಧು ಅಂದರೆ ಅಘೋರಿ ಎಲ್ಲರಿಗಿಂತ ಭಿನ್ನ. ಅವರು ಶಿವನ ಭಕ್ತಿಯಲ್ಲಿ ಮಗ್ನರಾಗಿರುತ್ತಾರೆ. ಅಂದಹಾಗೆ, ಅನೇಕ ಜನರಿಗೆ ಪುರುಷ ನಾಗಾ ಸಾಧುಗಳ ಬಗ್ಗೆ ತಿಳಿದಿರಬಹುದು. ಆದರೆ ಹೆಣ್ಣು ನಾಗಾ ಸಾಧುಗಳ ಬಗ್ಗೆ ಯಾರಿಗೂ ತಿಳಿದಿಲ್ಲ. ಆದರೆ ಪುರುಷರಂತೆ ಸ್ತ್ರೀ ನಾಗಾ ಸಾಧುಗಳೂ ಇದ್ದಾರೆ, ಅವರ ಜೀವನವು ಪುರುಷ ನಾಗಾ ಸಾಧುಗಳಿಗಿಂತ ಹೆಚ್ಚು ಕಷ್ಟಕರವಾಗಿರಲಿದೆಯಂತೆ. ಅಂದಹಾಗೆ, ನಾಗಾ ಸಾಧುಗಳ ವೇಷಭೂಷಣಗಳು ಇತರ ಬಾಬಾಗಳಿಗಿಂತ ಭಿನ್ನವಾಗಿರುತ್ತವೆ ಎಂದು ನಮಗೆಲ್ಲರಿಗೂ ತಿಳಿದಿದೆ. ಆದರೆ ಮಹಿಳಾ ನಾಗಾ ಸಾಧುಗಳ ಉಡುಗೆ ಏನು ಗೊತ್ತಾ? ಈ ಪುರುಷ ನಾಗಾ ಸಾಧುಗಳಂತೆ ಸದಾ ಬೆತ್ತಲೆಯಾಗಿಯೇ ಇರುತ್ತಾರೆಯೇ? ಹಾಗಾದರೆ ಸ್ತ್ರೀ ನಾಗಾ ಸಾಧುಗಳ ಬಗ್ಗೆ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯೋಣ.
Womem Naga Sadhu in kannada
ಸ್ತ್ರೀ ನಾಗಾ ಸಾಧುಗಳು ದಿನನಿತ್ಯ ಕಾಣುವುದಿಲ್ಲ. ಅವರ ಜೀವನದ ಬಗ್ಗೆ ಯಾರಿಗೂ ಏನೂ ತಿಳಿದಿಲ್ಲ. ಅವರು ಕುಂಭ ಮೇಳ ಅಥವಾ ಮಹಾ ಕುಂಭದಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಾರೆ ಮತ್ತು ಕುಂಭವನ್ನು ಸೇರಿದ ನಂತರ ಇದ್ದಕ್ಕಿದ್ದಂತೆ ಕಣ್ಮರೆಯಾಗುತ್ತಾರೆ. ನಾಗಾ ಸಾಧುಗಳು ವರ್ಷವಿಡೀ ತಪಸ್ಸು ಮಾಡಿ ಕಾಡು, ಗುಹೆ, ಪರ್ವತಗಳಿಗೆ ಹೋಗಿ ದೇವರ ಧ್ಯಾನ ಮಾಡುತ್ತಾರೆ ಎಂದು ಹೇಳಲಾಗುತ್ತದೆ.
ಮಹಿಳಾ ನಾಗಾ ಸಾಧುಗಳು ಯಾರು?
ಪುರುಷರಂತೆ, ಮಹಿಳಾ ನಾಗಾ ಸಾಧುಗಳು ಸಹ ತಮ್ಮ ಜೀವನವನ್ನು ಸಂಪೂರ್ಣವಾಗಿ ದೇವರಿಗೆ ಅರ್ಪಿಸುತ್ತಾರೆ. ಅವರ ಜೀವನವು ಅತ್ಯಂತ ವಿಶಿಷ್ಟ ಮತ್ತು ವಿಭಿನ್ನವಾಗಿದೆ. ನಾಗಾ ಸಾಧು ಆಗಲು ಹಲವು ಕಠಿಣ ಪರೀಕ್ಷೆಗಳನ್ನು ಎದುರಿಸಬೇಕಾಗುತ್ತದೆ. ಅವರ ಪರೀಕ್ಷೆಯು ದೀರ್ಘಕಾಲದವರೆಗೆ ಇರುತ್ತದೆ. ನಾಗಾ ಸಾಧು ಆಗಲು ಕನಿಷ್ಠ 10 ರಿಂದ 15 ವರ್ಷಗಳ ಕಾಲ ಪ್ರತಿದಿನ ಕಟ್ಟುನಿಟ್ಟಾದ ಬ್ರಹ್ಮಚರ್ಯ ನಿಯಮಗಳನ್ನು ಅನುಸರಿಸಬೇಕು. ಬದುಕಿರುವಾಗಲೂ ತನ್ನದೇ ಆದ ಪಿಂಡ ದಾನ ಮಾಡಬೇಕು. ನಂತರ ಪಿಂಡದಾನದ ನಂತರ ಅವರು ಕ್ಷೌರ ಮಾಡಿ ನಂತರ, ಪವಿತ್ರ ನದಿಯಲ್ಲಿ ಸ್ನಾನವನ್ನು ತೆಗೆದುಕೊಳ್ಳಲಾಗುತ್ತದೆ. ಸ್ತ್ರೀ ನಾಗಾ ಸಾಧುಗಳು ದಿನವಿಡೀ ಭಕ್ತಿಯಿಂದ ಆರಾಧನೆಯಲ್ಲಿ ಮುಳುಗಿರುತ್ತಾರೆ ಮತ್ತು ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ಭಗವಂತನನ್ನು ಜಪಿಸುತ್ತಾರೆ.
ಮಹಿಳಾ ನಾಗಾ ಸನ್ಯಾಸಿನಿಯರ ಉಡುಗೆ ಯಾವುದು?
ನಾವು ಪುರುಷ ಸಾಧುಗಳು ಸಾರ್ವಜನಿಕವಾಗಿ ಬೆತ್ತಲೆಯಾಗಿ ದರ್ಶನ ವನ್ನ ನೀಡುತ್ತಾರೆ. ಆದರೆ, ಮಹಿಳಾ ಸನ್ಯಾಸಿಗಳು ಇದನ್ನು ಮಾಡಲು ಸಾಧ್ಯವಿಲ್ಲ. ಅನೇಕ ನಾಗಾ ಸಾಧುಗಳು ಬಟ್ಟೆ ಧರಿಸುತ್ತರೆ ಮತ್ತು ಅನೇಕರು ಬೆತ್ತಲೆಯಾಗಿರುತ್ತಾರೆ. ಹಾಗೆಯೇ ಮಹಿಲಳಾ ನಾಗಾ ಸಾಧುಗಳು ಬಟ್ಟೆ ಧರಿಸುತ್ತಾರೆ. ಹಣೆಯ ಮೇಲೆ ತಿಲಕವನ್ನು ಹಚ್ಚಿಕೊಳ್ಳುತ್ತಾರೆ. ಕೇಸರಿ ಬಣ್ಣದ ಬಟ್ಟೆಗಳನ್ನು ಮಾತ್ರ ಧರಿಸಲು ಅವಕಾಶವಿದೆ. ಪುರುಷ ನಾಗಾ ಸಾಧುಗಳಿಗೆ ನೀಡುವಷ್ಟೇ ಗೌರವ ಮಹಿಳಾ ನಾಗಾ ಸಾಧುಗಳಿಗೂ ಸಿಗುತ್ತದೆ. ಮಹಿಳಾ ನಾಗಾ ಸಾಧುವನ್ನು ತಾಯಿ ಎಂದು ಕರೆಯಲಾಗುತ್ತದೆ.