ಪ್ರಂಚದ ಕೆಲವೇ ಮಂದಿ ಕೈಯಲ್ಲಿ ಮಾತ್ರ X ಗುರುತು ಇದ್ದರೆ ಏನಾಗುವುದು ಗೊತ್ತಾ?

Featured-Article

ನಮ್ಮ ಕೈಯಲ್ಲಿರುವ ರೇಖೆಗಳು ನಮ್ಮ ಜೀವನವನ್ನು ನಿರ್ಣಯ ಮಾಡುತ್ತವೆ ಎಂದು ತುಂಬಾ ಜನ ನಂಬುತ್ತಾರೆ.ಭಾರತದಲ್ಲಿ ಮಾತ್ರವಲದೆ ವಿದೇಶಗಳಲ್ಲೂ ಅತಿ ಹೆಚ್ಚು ಜನ ನಂಬುತ್ತಾರೆ.ಅದು ಒಂದು ಕಡೆ ನಿಜ ,ಏಕೆಂದರೆ ಅದರ ಬಗ್ಗೆ ಸಂಶೋಧನೆಗಳು ನಡೆದು ರುಜುವಾತಾಗಿದೆ.

ನಾವು ಹಸ್ತದಲ್ಲಿ ಮುಖ್ಯವಾಗಿ ಮದುವೆ ರೇಖೆ , ಆಯಸ್ಸು ರೇಖೆಗಳನ್ನು ನೋಡುತ್ತೇವೆ.ಹಸ್ತರೇಖಾ ಶಾಸ್ತ್ರದ ಬಗ್ಗೆ ಇನ್ನೊಂದು ದೊಡ್ಡ ವಿಷಯ ಸಂಶೋಧನೆಯಲ್ಲಿ ಕಂಡು ಹಿಡಿದಿದ್ದು ಅದು ಏನು ಎಂದು ತಿಳಿಯೋಣ ಬನ್ನಿ.

ಹಸ್ತರೇಖೆಗಳನ್ನು ಸೂಕ್ಷ್ಮವಾಗಿ ನೋಡಿದರೆ ರೇಖೆಗಳ ಮಧ್ಯ X ಆಕಾರದ ಗುರುತು ಇರುತ್ತದೆ. ಅದು ರೇಖೆಗಳ ಆಕಾರದಲ್ಲಿಯೇ ಇರುತ್ತದೆ.ಈ X ಗುರುತು ನಿಮ್ಮ ಕೈಯಲ್ಲಿದ್ದರೆ ನೀವು ತುಂಬಾ ಪ್ರತಿಭಾನ್ವಿತರಾಗಿರುತ್ತೀರಿ , ತುಂಬಾ ಕಡಿಮೆ ಜನರಿಗೆ ಈ ಗುರುತು ಇರುತ್ತದೆ.

ಅಂದರೆ ಪ್ರಪಂಚದ 3% ಜನರಿಗೆ ಮಾತ್ರ ಹಸ್ತದಲ್ಲಿ X ರೇಖೆ ಇರುತ್ತದೆ ಎಂದು ಸಂಶೋಧನೆಯಲ್ಲಿ ತಿಳಿದು ಬಂದಿದೆ.ರಷ್ಯಾದ ಮಾಸ್ಕೋನ ಎಸ್ ಟಿ ಐ ವಿಜ್ಞಾನಿಗಳು ಇದರ ಬಗ್ಗೆ ಸುದೀರ್ಘ ಸಂಶೋಧನೆ ಮಾಡಿದ್ದು ಕೆಲವು ಉದಾಹರಣೆಗಳನ್ನು ಕೊಟ್ಟಿದ್ದಾರೆ.ಅಲೆಕ್ಸಾಂಡರ್ , ರಷ್ಯಾದ ಅಧ್ಯಕ್ಷ ಪುಟಿನ್ , ಅಮೇರಿಕಾದ ಅಬ್ರಹಾಂ ಲಿಂಕನ್ ಗೂ ಈ X ರೇಖೆ ಇದ್ದ ಕಾರಣ ಅವರು ಎಲ್ಲವನ್ನೂ ಜಯಿಸಿದರು ಎಂದು ಸಂಶೋಧನೆ ಹೇಳುತ್ತದೆ.

ಎರಡೂ ಕೈಯಲ್ಲಿ X ಗುರುತು ಇದ್ದರೆ ಅವರು ಯಶಸ್ವಿಯಾಗುತ್ತಾರೆ.ಯಾವುದೇ ಪ್ರಣಾಳಿಕೆಯಿಲ್ಲದೆ ಹಾಗೆ ಸಾಗಿ ಜಯ ಸಾಧಿಸುವ ಸಾಮರ್ಥ್ಯ ಅವರಿಗೆ ಇರುತ್ತದೆ.ಸೂಕ್ಷ್ಮ ಮನೋಭಾವದವರಾದ ಇವರು ತಾಂತ್ರಿಕವಾಗಿ ತುಂಬಾ ಶಕ್ತಿಶಾಲಿ ಗಳಾಗಿದ್ದು ಇತರರನ್ನು ಗ್ರಹಿಸುವ ಹೆಚ್ಚು ಶಕ್ತಿ ಅವರಿಗೆ ಮಾತ್ರ ಇರುತ್ತದೆ ಎಂದು ಸಂಶೋಧನೆ ತಿಳಿಸಿದೆ.

ಕೈಯಲ್ಲಿ X ರೇಖೆ ಹೊಂದಿರುವವರನ್ನು ಮೋಸ ಮಾಡುವುದು ಅಷ್ಟು ಸುಲಭ ವಲ್ಲ ಹಾಗೂ ಅವರಿಗೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ.ಎಷ್ಟೇ ಕಷ್ಟದಲ್ಲಿದ್ದರೂ ಎದ್ದು ಬಂದು ಮತ್ತೆ ಉನ್ನತ ಸ್ಥಾನವನ್ನು ತಲುಪುತ್ತಾರೆ ಎಂದು ಹೇಳಲಾಗಿದೆ.

ಧನ್ಯವಾದಗಳು.

Leave a Reply

Your email address will not be published.