Yash: ಕೊನೆಗೂ ಸಿಕ್ತು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್! ಗುಡ್ ನ್ಯೂಸ್ ಕೊಟ್ಟ ರಾಕಿ ಭಾಯ್!

0 1

Yash: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಆದರೆ ಯಶ್ ಅವರು ಕೆಜಿಎಫ್2 ಬಳಿಕ ಹೊಸ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಸಹ ಇಲ್ಲಿಯವರೆಗೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇನ್ನು ಸಿಕ್ಕಿಲ್ಲ. ಮುಂದಿನ ಸಿನಿಮಾ ಘೋಷಣೆ ಆಗ ಈಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗೂ ಕನ್ನಡದಲ್ಲಿ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

ಮುಂದಿನ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಯಶ್ ಅವರು ಬಹಳ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಫ್ಯಾಮಿಲಿ ಜೊತೆಯಲ್ಲಿ ಕೂಡ ಸಮಯ ಕಳೆಯುತ್ತಿದ್ದಾರೆ. ಕೊನೆಗೂ ಇಷ್ಟು ದಿನಗಳ ಕಾಲ ಅಭಿಮಾನಿಗಳು ಕಾಯುತ್ತಿದ್ದ ಆ ದಿನ ಹತ್ತಿರಕ್ಕೆ ಬರುತ್ತಿದೆ. ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಕೊನೆಗೂ ಅಪ್ಡೇಟ್ ಸಿಕ್ಕಿದೆ.

ಯಶ್ ಅವರು ನಿನ್ನೆ ತಮ್ಮ ಸೋಷಿಯಲ್ ಮೀಡಿಯಾ ಡಿಪಿ ಗಳನ್ನು ಬದಲಾಯಿಸಿ, ಲೋಡಿಂಗ್ ಎಂದು ಪದ ಇರುವ ಫೋಟೋ ಹಾಕಿಕೊಂಡಿದ್ದರು. ಇಂದು ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಸಿಕ್ಕಿದ್ದು, ಡಿಸೆಂಬಫ್ 8ರಂದು ಟೈಟಲ್ ಅನೌನ್ಸ್ಮೆಂಟ್ ಆಗಲಿದೆ. ಈ ವಿಚಾರವನ್ನು ಇಂದು ಯಶ್ ಅವರೇ ಪೋಸ್ಟ್ ಮಾಡಿ ತಿಳಿಸಿದ್ದು, ಇದನ್ನು ನೋಡಿದ ಅಭಿಮಾನಿಗಳ ಖುಷಿಗೆ ಪಾರವೇ ಇಲ್ಲ.

ಡಿಸೆಂಬರ್ 8ರಂದು ಬೆಳಗ್ಗೆ 9:55ಕ್ಕೆ ಯಶ್ ಅವರ ಮುಂದಿನ ಸಿನಿಮಾ ಟೈಟಲ್ ಅನೌನ್ಸ್ ಆಗಲಿದೆ. ಒಟ್ಟಿನಲ್ಲಿ ಕೊನೆಗೂ ಯಶ್ ಅವರು ಅಪ್ಡೇಟ್ ಕೊಟ್ಟಿದ್ದಕ್ಕೆ ಅಭಿಮಾನಿಗಳು ಖುಷಿಯಾಗಿದ್ದಾರೆ. ಹಾಗೆಯೇ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಈಗಾಗಲೇ ನಿರೀಕ್ಷೆಗಳು ಕೂಡ ಜಾಸ್ತಿಯಾಗಿವೆ. ಡಿಸೆಂಬರ್ 8ರಂದು ಯಾವೆಲ್ಲಾ ವಿಷಯ ರಿವೀಲ್ ಆಗುತ್ತದೆ ಎಂದು ಕಾದು ನೋಡಬೇಕಿದೆ.

Leave A Reply

Your email address will not be published.