Yash: ರಾಕಿ ಭಾಯ್ ಹೊಸ ಮನೆಯಲ್ಲಿ ದಸರಾ ಹಬ್ಬದ ಸಂಭ್ರಮ

0 19

Yash: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಆದರೆ ಯಶ್ ಅವರು ಕೆಜಿಎಫ್2 ಬಳಿಕ ಹೊಸ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಸಹ ಇಲ್ಲಿಯವರೆಗೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇನ್ನು ಸಿಕ್ಕಿಲ್ಲ. ಮುಂದಿನ ಸಿನಿಮಾ ಘೋಷಣೆ ಆಗ ಈಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗೂ ಕನ್ನಡದಲ್ಲಿ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

ಮುಂದಿನ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಯಶ್ ಅವರು ಬಹಳ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಫ್ಯಾಮಿಲಿ ಜೊತೆಯಲ್ಲಿ ಕೂಡ ಸಮಯ ಕಳೆಯುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ಯಶ್ ಅವರು ಪ್ರತಿಯೊಂದು ಹಬ್ಬಗಳನ್ನು ನಮ್ಮ ಸಂಪ್ರದಾಯದ ಅನುಸಾರ ಕುಟುಂಬದ ಜೊತೆಗೆ ಆಚರಣೆ ಮಾಡುತ್ತಾರೆ. ಇಂದು ದಸರಾ ಹಬ್ಬ, ಈ ಹಬ್ಬವನ್ನು ಕೂಡ ವಿಶೇಷವಾಗಿ ಆಚರಣೆ ಮಾಡುತ್ತಾರೆ.

ಹೊಸ ಮನೆಯಲ್ಲಿ ನಟ ಯಶ್ ಅವರು ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳೊಡನೆ ದಸರಾ ಹಬ್ಬವನ್ನು ಆಚರಿಸಿದ್ದಾರೆ. ಹಬ್ಬದ ಆಚರಣೆಯ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಂಡಿದ್ದು, ಈ ಫೋಟೋಗಳು ವೈರಲ್ ಆಗಿವೆ. ದಂಪತಿಗಳು ಸುಂದರವಾಗಿ ಫೋಟೋಸ್ ಗೆ ಪೋಸ್ ನೀಡಿದ್ದು, ಅಭಿಮಾನಿಗಳು ಇವರಿಗೆ ದೃಷ್ಟಿ ಆಗದೆ ಇರಲಿ ಎಂದು ವಿಶ್ ಮಾಡಿದ್ದಾರೆ.

Leave A Reply

Your email address will not be published.