Yash: ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿದ ರಾಕಿ ಭಾಯ್!

Written by Pooja Siddaraj

Published on:

Yash: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಇತ್ತೀಚೆಗೆ ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಕೂಡ ಸಿಕ್ಕಿದೆ.

ಮಲಯಾಳಂ ನಿರ್ದೇಶಕಿ ಗೀತು ಮೋಹನ್ ದಾಸ್ ಅವರು ಯಶ್ ಅವರ ಮುಂದಿನ ಸಿನಿಮಾ ನಿರ್ದೇಶನ ಮಾಡುತ್ತಿದ್ದು, ಸಿನಿಮಾದ ಟೈಟಲ್ ಲಾಂಚ್ ಇತ್ತೀಚೆಗೆ ಮಾಡಲಾಯಿತು. ಈ ಹೊಸ ಸಿನಿಮಾಗೆ ಟಾಕ್ಸಿಕ್ ಎಂದು ಹೆಸರಿಡಲಾಗಿದ್ದು, ಟೈಟಲ್ ಮತ್ತು ಫಸ್ಟ್ ಲುಕ್ ಇಂದಲೇ ಭಾರಿ ಸದ್ದು ಮಾಡಿದೆ. 2025ರ ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.

ಯಶ್ ಅವರು ಸಿನಿಮಾ ಬಗ್ಗೆ ಎಷ್ಟು ಕಾಳಜಿ ವಹಿಸಿದ್ದಾರೋ ಅದೇ ರೀತಿ ಕುಟುಂಬದ ಬಗ್ಗೆ ಕೂಡ ಕಾಳಜಿ ವಹಿಸುತ್ತಾರೆ. ತಮ್ಮ ಕುಟುಂಬದ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ ರಾಕಿ ಭಾಯ್. ಪತ್ನಿ ರಾಧಿಕಾ ಪಂಡಿತ್ ಹಾಗೂ ಮಕ್ಕಳ ಜೊತೆಗೆ ಸಾಧ್ಯವಾದಷ್ಟು ಸಮಯ ಕಳೆಯುತ್ತಾರೆ. ಮೊನ್ನೆಯಷ್ಟೇ ಯಶ್ ರಾಧಿಕಾ ದಂಪತಿಯ ಮಗಳು ಆಯ್ರ ಹುಟ್ಟುಹಬ್ಬವಿತ್ತು.

ಮಗಳ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಲಾಗಿದೆ. ಬರ್ತ್ ಡೇ ಸೆಲೆಬ್ರೇಷನ್ ವಿಡಿಯೋ ಅನ್ನು ರಾಧಿಕಾ ಪಂಡಿತ್ ಅವರು ಶೇರ್ ಮಾಡಿದ್ದು, Ayra’s Winter Land ಥೀಮ್ ನಲ್ಲಿ ಬರ್ತ್ ಡೇ ಸೆಲೆಬ್ರೇಷನ್ ನಡೆದಿದೆ. ಎಲ್ಲರು ರಾಕಿ ಭಾಯ್ ಮಗಳ ಹುಟ್ಟುಹಬ್ಬಕ್ಕೆ ವಿಶ್ ಮಾಡುತ್ತಿದ್ದಾರೆ.

Leave a Comment