Yash: ರಾಕಿ ಭಾಯ್ ಮನೆಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ!

Written by Pooja Siddaraj

Published on:

Yash: ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಆದರೆ ಯಶ್ ಅವರು ಕೆಜಿಎಫ್2 ಬಳಿಕ ಹೊಸ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಸಹ ಇಲ್ಲಿಯವರೆಗೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇನ್ನು ಸಿಕ್ಕಿಲ್ಲ. ಮುಂದಿನ ಸಿನಿಮಾ ಘೋಷಣೆ ಆಗ ಈಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಅವರು ರಾಮಾಯಣ ಸಿನಿಮಾದಲ್ಲಿ ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಕೂಡ ಹೇಳಲಾಗುತ್ತಿದೆ. ಹಾಗೂ ಕನ್ನಡದಲ್ಲಿ ಗೀತು ಮೋಹನ್ ದಾಸ್ ಅವರು ನಿರ್ದೇಶನ ಮಾಡಲಿರುವ ಸಿನಿಮಾದಲ್ಲಿ ನಟಿಸುತ್ತಾರೆ ಎನ್ನಲಾಗಿದೆ.

ಮುಂದಿನ ಸಿನಿಮಾ ನೆಕ್ಸ್ಟ್ ಲೆವೆಲ್ ನಲ್ಲಿ ಇರಬೇಕು ಎನ್ನುವ ಕಾರಣಕ್ಕೆ ಯಶ್ ಅವರು ಬಹಳ ತಯಾರಿ ನಡೆಸುತ್ತಿದ್ದಾರೆ. ಹಾಗೆಯೇ ಫ್ಯಾಮಿಲಿ ಜೊತೆಯಲ್ಲಿ ಕೂಡ ಸಮಯ ಕಳೆಯುತ್ತಿದ್ದಾರೆ. ನಮಗೆಲ್ಲ ಗೊತ್ತಿರುವ ಹಾಗೆ ನಟ ಯಶ್ ಅವರು ಪ್ರತಿಯೊಂದು ಹಬ್ಬಗಳನ್ನು ನಮ್ಮ ಸಂಪ್ರದಾಯದ ಅನುಸಾರ ಕುಟುಂಬದ ಜೊತೆಗೆ ಆಚರಣೆ ಮಾಡುತ್ತಾರೆ. ಆದರೆ ಈ ಬಾರಿ ದೀಪಾವಳಿ ಹಬ್ಬಕ್ಕೆ ಯಶ್ ಅವರು ಮನೆಯವರ ಜೊತೆಗಿಲ್ಲ.

ಹೌದು, ಯಶ್ ಅವರು ಬೆಂಗಳೂರಿನಲ್ಲಿ ಇಲ್ಲ, ಮನೆಯಲ್ಲಿ ರಾಧಿಕಾ ಪಂಡಿತ್ ಅವರು ಇದ್ದು ಮಕ್ಕಳ ಜೊತೆಗೆ ಮತ್ತು ಕುಟುಂಬದ ಜೊತೆಗೆ ರಾಧಿಕಾ ಪಂಡಿತ್ ಅವರು ಹಬ್ಬದ ಆಚರಣೆ ಮಾಡಿದ್ದಾರೆ. ದೀಪಾವಳಿ ಹಬ್ಬದಂದು ಮಕ್ಕಳ ಜೊತೆಗೆ ಹಬ್ಬದ ಆಚರಣೆ ಮಾಡುತ್ತಿರುವ ಫೋಟೋಸ್ ಗಳನ್ನು ರಾಧಿಕಾ ಪಂಡಿತ್ ಅವರು ಶೇರ್ ಮಾಡಿದ್ದಾರೆ. ದೀಪ ಹಿಡಿದಿರುವ ತಮ್ಮದೊಂದು ಫೋಟೋ ಸಹ ಶೇರ್ ಮಾಡಿದ್ದಾರೆ.

ರಾಧಿಕಾ ಪಂಡಿತ್ ಅವರ ಈ ಪೋಸ್ಟ್ ಗೆ ಯಶ್ ಅವರು ಕಮೆಂಟ್ ಬರೆದಿದ್ದು, ನೀವೆಲ್ಲರೂ ಎಷ್ಟು ಎಂಜಾಯ್ ಮಾಡುತ್ತಿದ್ದೀರಾ ನಿಮ್ಮನ್ನು ಮಿಸ್ ಮಾಡಿಕೊಳ್ಳುತ್ತಿದ್ದೇನೆ ಎಂದು ಬರೆದಿದ್ದಾರೆ. ಇದನ್ನು ನೋಡಿದ ನೆಟ್ಟಿಗರು ಯಶ್ ಅವರು ಬೆಂಗಳೂರಿನಲ್ಲಿ ಇಲ್ಲ ಅಂದ್ರೆ ಮುಂದಿನ ಸಿನಿಮಾ ವಿಚಾರವಾಗಿ ಹೊರಗಡೆ ಹೋಗಿದ್ದಾರೆ ಅನ್ನಿಸುತ್ತದೆ ಎಂದು ಅಭಿಮಾನಿಗಳು ಭಾವಿಸಿದ್ದಾರೆ. ಒಟ್ಟಿನಲ್ಲಿ ಈಗಲಾದರೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಅಪ್ಡೇಟ್ ಸಿಗುತ್ತಾ ಎಂದು ಕಾದು ನೋಡಬೇಕಿದೆ.

Leave a Comment