ರಾಕಿಭಾಯ್ ಪಾತ್ರಕ್ಕೆ ಬೇರೊಬ್ಬ ನಟ ಬರಬಹುದು: ಹೊಂಬಾಳೆ ಫಿಲ್ಮ್ಸ್ ಕೊಟ್ಟ ಶಾಕ್!

0
32

Yash might get replaced ಇಡೀ ಭಾರತೀಯ ಸಿನಿಮಾ ರಂಗ ಕನ್ನಡ ಚಿತ್ರರಂಗದ ಕಡೆಗೆ ತಿರುಗಿ ನೋಡುವಂತೆ ಮಾಡಿದ ಸಿನಿಮಾಗಳು ಯಾವುದೆಂದರೆ ಅವೇ ಕೆಜಿಎಫ್ ಸರಣಿ(KGF series) ಸಿನಿಮಾಗಳು. ಕೆಜಿಎಫ್‌ ಅನಂತರ ಕೆಜಿಎಫ್-2‌ ಸಿನಿಮಾಗಳು ನಟ ರಾಕಿಂಗ್ ಸ್ಟಾರ್ ಯಶ್(Yash) ಅವರಿಗೆ ಸಹಾ ಅವರ ವೃತ್ತಿ ಜೀವನದಲ್ಲಿ ಒಂದು ಮೈಲುಗಲ್ಲಾದ ಸಿನಿಮಾ. ಯಶ್ ಪ್ಯಾನ್ ಇಂಡಿಯಾ ಸ್ಟಾರ್ ಆಗಿ ದೊಡ್ಡ ಮಟ್ಟದಲ್ಲಿ ಅಭಿಮಾನಿಗಳನ್ನು ಪಡೆದುಕೊಂಡರು. ಕೆಜಿಎಫ್ ಸರಣಿ ಸಿನಿಮಾಗಳು ಸ್ಯಾಂಡಲ್ವುಡ್ ನಲ್ಲಿ ಮಾತ್ರವೇ ಅಲ್ಲದೇ ಭಾರತೀಯ ಸಿನಿಮಾ ರಂಗದಲ್ಲಿ ಹೊಸ ದಾಖಲೆಗಳನ್ನು ಸಹಾ ಬರೆದಿತ್ತು. ಕೆಜಿಎಫ್, ಕೆಜಿಎಫ್-2 ನಂತರ ಇದೀಗ ಸಿನಿ ಪ್ರೇಮಿಗಳು ಕೆಜಿಎಫ್-3(KGF 3) ಸಿನಿಮಾದ ನಿರೀಕ್ಷೆಯಲ್ಲಿ ಇದ್ದಾರೆ.

Yash aka KGF’s Rocky Bhai Might Get Replaced At Some Point In The Franchise, Producer Shares Shocking Possibility

ಇನ್ನು ಸ್ಯಾಂಡಲ್ವುಡ್ ನಲ್ಲಿ ಹಿಟ್ ಸಿನಿಮಾಗಳನ್ನು ನೀಡುತ್ತಾ, ಸಿನಿಮಾ ನಿರ್ಮಾಣದಲ್ಲಿ ತೊಡಗಿರುವ ಹೊಂಬಾಳೆ ಸಂಸ್ಥೆ(Hombale films) ಕೆಜಿಎಫ್ ಸರಣಿ ಮತ್ತು ಕಾಂತಾರ(Kantara) ರೀತಿಯ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನೀಡಿದ್ದು, ಇದೀಗ ಬೇರೆ ಬೇರೆ ಭಾಷೆಗಳಲ್ಲೂ ಸಿನಿಮಾ ನಿರ್ಮಾಣ ಮಾಡಲು ಮುಂದಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಹೊಂಬಾಳೆ ಫಿಲ್ಮ್ಸ್ ಚಿತ್ರರಂಗದಲ್ಲಿ ಮೂರು ಸಾವಿರ ಕೋಟಿ ರೂಪಾಯಿಗಳ ಹೂಡಿಕೆಯನ್ನು ಮಾಡಲಿರುವ ಒಂದು ಬಹಳ ಮಹತ್ವದ ಘೋಷಣೆಯನ್ನು ಮಾಡಿದ್ದು, ಅದು ಕೆಲವೇ ದಿನಗಳ ಹಿಂದೆ ದೊಡ್ಡ ಸುದ್ದಿಯಾಗಿತ್ತು.

ಮೈಂಡ್ ಲೆಸ್ ನನ್ನ ಪದವಲ್ಲ: ಕೆಜಿಎಫ್ ಬಗ್ಗೆ ನಟ ಕಿಶೋರ್ ಸ್ಪಷ್ಟನೆ, ಆ ಮಾತು ನಾನು ಹೇಳಿಲ್ಲ

ಈಗ ಇವೆಲ್ಲವುಗಳ ನಂತರ ನಿರ್ಮಾಪಕ ವಿಜಯ ಕಿರಂಗದೂರು(Vijay Kirangadur) ಅವರು ಕೆಜಿಎಫ್ 3 ಸಿನಿಮಾದ ಕುರಿತಾಗಿ ಮಾತನಾಡಿದ್ದಾರೆ.
ನಿರ್ದೇಶಕ ಪ್ರಶಾಂತ್ ನೀಲ್ ಅವರು ಬ್ಯುಸಿಯಾಗಿರುವುದರಿಂದ ಕೆಜಿಎಫ್-3 ಸಿನಿಮಾದ ಪ್ರೀ ಪ್ರೊಡಕ್ಷನ್ ವರ್ಕ್ ಇನ್ನೂ ಆರಂಭವಾಗಿಲ್ಲ ಎಂದಿರುವ ವಿಜಯ ಕಿರಂಗದೂರು ಅವರು 2025 ರಲ್ಲಿ ಈ ಕೆಲಸ ಆರಂಭವಾಗಬಹುದು ಎನ್ನುವ ಮಾತನ್ನು ಹೇಳಿದ್ದಾರೆ. ಅಲ್ಲದೇ ಕೆಜಿಎಫ್-3 ನಂತರವೂ ಫ್ರಾಂಚೈಸಿ ಮುಂದುವರೆಯುವುದು ಎನ್ನುವ ಮಾತನ್ನು ಅವರು ಹೇಳಿದ್ದಾರೆ.‌

ಮುಂದೆ ಕೆಜಿಎಫ್(KGF) ಸಿನಿಮಾ 5 ಭಾಗಗಳು ಬಂದ ಮೇಲೂ ಸಹಾ ಕೆಜಿಎಫ್‌ ಸರಣಿ ಮುಂದುವರೆಯಿತು. ಹಾಲಿವುಡ್ ನಲ್ಲಿ ಜೇಮ್ಸ್‌ ಬಾಂಡ್‌ ಸರಣಿಯಲ್ಲಿ ಸಿನಿಮಾದ ನಾಯಕರು ಬದಲಾಗುವ ರೀತಿಯಲ್ಲೇ ಕೆಜಿಎಫ್‌ ಮುಂದಿನ ಸರಣಿಗಳಲ್ಲಿ ರಾಕಿಭಾಯ್‌ ಪಾತ್ರವನ್ನು ಯಶ್(Yash) ಬದಲಾಗಿ ಬೇರೊಬ್ಬ ಹೀರೋ ನಿಭಾಯಿಸುವ ಸಾಧ್ಯತೆಯಿದೆ ಎನ್ನುವ ಮಾತನ್ನು ಹೇಳಿ ಅಚ್ಚರಿಯನ್ನು ಮೂಡಿಸಿದ್ದಾರೆ. ಅವರ ಈ ಮಾತು ಈಗ ಸಿಕ್ಕಾಪಟ್ಟೆ ವೈರಲ್ ಆಗಿ ಗಮನ ಸೆಳೆದಿದೆ.

LEAVE A REPLY

Please enter your comment!
Please enter your name here