400 ಕೋಟಿ ವೆಚ್ಚದಲ್ಲಿ ರಾಕಿಂಗ್ ಸ್ಟಾರ್ ಯಶ್ ಸಿನಿಮಾ: ಥ್ರಿಲ್ ಆದ ಫ್ಯಾನ್ಸ್, ಸಿನಿಮಾ ಘೋಷಣೆ ಯಾವಾಗ?

0
33
Yash new Movie

Yash new Movie ಕೆಜಿಎಫ್-2(KGF 2) ನಂತರ ರಾಕಿಂಗ್ ಸ್ಟಾರ್ ಯಶ್ (Yash) ಅವರ ಹೊಸ ಸಿನಿಮಾ ಯಾವುದೂ ಘೋಷಣೆ ಆಗಿಲ್ಲ. ಅವರ ಸಿನಿಮಾದ ಘೋಷಣೆ ಯಾವಾಗ ಆಗಲಿದೆ ಎಂದು ಅವರ ಅಭಿಮಾನಿಗಳು ಬಹಳ ಕಾತರತೆಯಿಂದ ನಿರೀಕ್ಷೆಯಲ್ಲಿ ಇದ್ದಾರೆ. ಆದರೆ ಈಗ ನಟ ಯಶ್(Yash) ಅವರ ಮುಂದಿನ ಸಿನಿಮಾ ಕುರಿತು ಮತ್ತೊಂದು ಮಹತ್ವದ ಸುಳಿವು ಸಿಕ್ಕಿದ್ದು, ಅವರ ಈ ಹೊಸ ಸಿನಿಮಾದ ಬಜೆಟ್ ನ ವಿಷಯ ಈಗ ಎಲ್ಲರ ಗಮನವನ್ನು ಸೆಳೆದಿದೆ. ಹೌದು ಯಶ್ ಅವರ ಹೊಸ ಸಿನಿಮಾ ಬರೋಬ್ಬರಿ 400 ಕೋಟಿ ವೆಚ್ಚದಲ್ಲಿ ನಿರ್ಮಾಣ ಆಗಲಿದೆಯಂತೆ ಎನ್ನುವ ಸುದ್ದಿಯಳೀಗ ಹರಿದಾಡಿದೆ.

ಟ್ರಾಫಿಕ್ ಮಧ್ಯೆ ಒಮ್ಮೆ ಗನ್ ತೆಗೆದಿದ್ದೆ: ವರ್ಷಗಳ ನಂತರ ಶಾಕಿಂಗ್ ವಿಚಾರ ತಿಳಿಸಿದ ನಟ ಯಶ್

ಈ ಭಾರೀ ಬಜೆಟ್ ಸಿನಿಮಾವನ್ನು ಕೆವಿಎನ್ ‍ಪ್ರೊಡಕ್ಷನ್(KVN production) ನಿರ್ಮಾಣ ಮಾಡಲಿದೆ ಎಂದು ಹೇಳಲಾಗುತ್ತಿದೆ. ಇದೇ ವೇಳೆ ಈ ಸಿನಿಮಾವನ್ನ ತಮಿಳಿನ ಖ್ಯಾತ ನಿರ್ದೇಶಕರೊಬ್ಬರು ನಿರ್ದೇಶನ ಮಾಡಲಿದ್ದಾರೆ ಎಂದೂ ಸಹಾ ಹೇಳಲಾಗುತ್ತಿದೆ. ಬಹುತೇಕ ಈ ವಿಷಯವನ್ನು ಯಶ್ ಅವರ ಹುಟ್ಟು ಹಬ್ಬದ ದಿನದಂದು ಘೋಷಣೆ ಮಾಡುವ ಸಾಧ್ಯತೆಗಳು ಇವೆ ಎನ್ನಲಾಗುತ್ತಿದೆ. ಕೆಜಿಎಫ್ 2 ಸಿನಿಮಾ ನಂತರ ಯಶ್ ಯಾವುದೇ ಹೊಸ ಸಿನಿಮಾಕ್ಕೆ ಗ್ರೀನ್ ಸಿಗ್ನಲ್ ನೀಡಿರಲಿಲ್ಲ. ಅಲ್ಲದೇ ಹೊಸ ಸಿನಿಮಾ ಯಾವಾಗ ಎನ್ನುವುದಕ್ಕೆ ಸ್ಪಷ್ಟ ಉತ್ತರ ನೀಡಿರಲಿಲ್ಲ.

ಟ್ರಾಫಿಕ್ ಮಧ್ಯೆ ಒಮ್ಮೆ ಗನ್ ತೆಗೆದಿದ್ದೆ: ವರ್ಷಗಳ ನಂತರ ಶಾಕಿಂಗ್ ವಿಚಾರ ತಿಳಿಸಿದ ನಟ ಯಶ್

ಇವೆಲ್ಲವುಗಳ ನಡುವೆ ನಿರ್ದೇಶಕ ನರ್ತನ್(Narthan) ಅವರು ನಿರ್ದೇಶನದಲ್ಲಿ ಯಶ್ ಹೊಸ ಸಿನಿಮಾ ಮಾಡಲಿದ್ದಾರೆ ಎಂದು ಮಾದ್ಯಮವೊಂದು ಸುದ್ದಿ ಮಾಡಿತ್ತು. ಆದರೆ ಆ ಪ್ರಾಜೆಕ್ಟ್ ಅನ್ನು ಅರ್ಧಕ್ಕೆ ಕೈ ಬಿಡಲಾಗಿದೆ ಎನ್ನುವ ಸುದ್ದಿಗಳು ಹರಡಿವೆ. ಯಶ್ ಅವರು ತಮಿಳು ನಿರ್ದೇಶಕನಿಗೆ ಕಾಲ್ ಶೀಟ್ ನೀಡಿದ್ದಾರೆ ಎನ್ನಲಾಗಿದೆ. ಈ ಬಾರಿ ಅವರ ಜನ್ಮದಿನ ಬಹಳ ವಿಶೇಷವಾಗಿರಲಿದ್ದು, ತಮ್ಮ ನಿರ್ಮಾಣ ಸಂಸ್ಥೆಯನ್ನು ಶುರು ಮಾಡಲಿದ್ದಾರೆ ಎನ್ನಲಾಗಿದೆ. ಅಂದೇ ಹೊಸ ಸಿನಿಮಾದ ಘೋಷಣೆ ಆಗಲಿದೆ ಎನ್ನಲಾಗಿದೆ. Yash new Movie

ಟ್ರಾಫಿಕ್ ಮಧ್ಯೆ ಒಮ್ಮೆ ಗನ್ ತೆಗೆದಿದ್ದೆ: ವರ್ಷಗಳ ನಂತರ ಶಾಕಿಂಗ್ ವಿಚಾರ ತಿಳಿಸಿದ ನಟ ಯಶ್

LEAVE A REPLY

Please enter your comment!
Please enter your name here