Yash: ರಾಕಿ ಭಾಯ್ ಮುಂದಿನ ಸಿನಿಮಾ ಬಗ್ಗೆ ಬಿಗ್ ಅಪ್ಡೇಟ್, ರಾವಣನಾಗ್ತಾರ ನಟ ಯಶ್?

Written by Pooja Siddaraj

Published on:

ನಟ ಯಶ್ ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. ಕೆಜಿಎಫ್ ಸಿನಿಮಾ ಯಶಸ್ಸಿನ ನಂತರ ಯಶ್ ಅವರಿಗೆ ವಿಶ್ವದ ಹಲವೆಡೆ ಅಭಿಮಾನಿ ಬಳಗ ಇದೆ. ಬಾಲಿವುಡ್ ಸಿನಿಮಾ ತಯಾರಕರು ಕೂಡ ಯಶ್ ಅವರೊಡನೆ ಸಿನಿಮಾ ಮಾಡಬೇಕು ಎಂದು ಹಾತೊರೆಯುತ್ತಿದ್ದಾರೆ. ಆದರೆ ಯಶ್ ಅವರು ಕೆಜಿಎಫ್2 ಬಳಿಕ ಹೊಸ ಸಿನಿಮಾ ಬಗ್ಗೆ ಇನ್ನೂ ಮಾಹಿತಿ ನೀಡಿಲ್ಲ. ಅಭಿಮಾನಿಗಳು ಯಶ್ ಅವರ ಮುಂದಿನ ಸಿನಿಮಾ ಅಪ್ಡೇಟ್ ಗಾಗಿ ಕಾಯುತ್ತಿದ್ದಾರೆ.

ಕೆಜಿಎಫ್2 ಸಿನಿಮಾ ಬಿಡುಗಡೆಯಾಗಿ ಒಂದೂವರೆ ವರ್ಷ ಕಳೆಯುತ್ತಿದ್ದರು ಸಹ ಇಲ್ಲಿಯವರೆಗೂ ಯಶ್ ಅವರ ಮುಂದಿನ ಸಿನಿಮಾ ಬಗ್ಗೆ ಹೊಸ ಅಪ್ಡೇಟ್ ಇನ್ನು ಸಿಕ್ಕಿಲ್ಲ. ಮುಂದಿನ ಸಿನಿಮಾ ಘೋಷಣೆ ಆಗ ಈಗ ಎಂದು ಅಭಿಮಾನಿಗಳು ಕಾಯುತ್ತಿದ್ದಾರೆ. ಯಶ್ ಅವರ ಮುಂದಿನ ಸಿನಿಮಾ ಮಫ್ತಿ ಸಿನಿಮಾ ನಿರ್ದೇಶನ ಮಾಡಿದ ನರ್ತನ್ ಅವರೊಡನೆ ಎಂದು ಕೆಲ ದಿನಗಳ ಹಿಂದೆ ಸುದ್ದಿ ಕೇಳಿಬಂದಿತ್ತು.

ಬಳಿಕ ಮಲಯಾಳಂ ಭಾಷೆಯ ಮಹಿಳಾ ನಿರ್ದೇಶಕಿ ಗೀತು ಮೋಹನ್ ದಾಸ್ ಅವರೊಡನೆ ಯಶ್ ಸಿನಿಮಾ ಮಾಡ್ತಾರೆ ಎನ್ನುವ ಸುದ್ದಿ ಕೂಡ ಹರಿದಾಡಿತು. ಈ ಎಲ್ಲಾ ಸುದ್ದಿಗಳ ನಡುವೆ ಈಗ ಯಶ್ ಅವರು ರಾವಣನ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ. ಇದು ಬಾಲಿವುಡ್ ಪ್ರಾಜೆಕ್ಟ್ ಆಗಿದೆ, ನಟ ಪ್ರಭಾಸ್ ಅವರ ಆದಿಪುರುಶ್ ಸಿನಿಮಾ ನಿರ್ಮಾಣ ಮಾಡಿದ್ದ ನಿತೇಶ್ ತಿವಾರಿ ಅವರ ಕನಸಿನ ಪ್ರಾಜೆಕ್ಟ್ ರಾಮಾಯಣ ಆಗಿದೆ..

ಇದರಲ್ಲಿ ರಾಮನ ಪಾತ್ರದಲ್ಲಿ ನಟ ರಣಬೀರ್ ಕಪೂರ್ ನಟಿಸುತ್ತಾರೆ ಎನ್ನಲಾಗಿದ್ದು, ಸೀತೆಯ ಪಾತ್ರಕ್ಕೆ ಮೊದಲು ಆಲಿಯಾ ಭಟ್ ಅವರನ್ನು ಆಯ್ಕೆ ಮಾಡಿಕೊಳ್ಳಲಾಗಿತ್ತು, ಆದರೆ ಡೇಟ್ಸ್ ಸಮಸ್ಯೆ ಇರುವುದರಿಂದ ಆಲಿಯಾ ಭಟ್ ಅವರು ರಾಮಾಯಣ ಪ್ರಾಜೆಕ್ಟ್ ಇಂದ ಹೊರಬಂದಿದ್ದು, ನಟಿ ಸಾಯಿಪಲ್ಲವಿ ಸೀತೆಯ ಪಾತ್ರದಲ್ಲಿ ನಟಿಸುತ್ತಾರೆ ಎಂದು ಹೇಳಲಾಗುತ್ತಿದೆ.

ಇನ್ನು ರಾವಣನ ಪಾತ್ರಕ್ಕೆ ನಟ ಯಶ್ ಅವರೊಡನೆ ಮಾತುಕತೆ ನಡೆಸಲಾಗಿದೆಯಂತೆ. ಯಶ್ ಅವರು ಕೇವಲ 15 ದಿನಗಳ ಡೇಟ್ಸ್ ನೀಡಿದ್ದಾರೆ ಎಂದು ಹೇಳಲಾಗುತ್ತಿದೆ. ರಾಮಾಯಣ ಸಿನಿಮಾವನ್ನು ಎರಡು ಭಾಗಗಳಾಗಿ ತೆರೆಮೇಲೆ ತರಲಾಗುವುದು ಎಂದು ಹೇಳಲಾಗುತ್ತಿದೆ. ಸಿನಿಮಾದ ಮೊದಲ ಭಾಗದಲ್ಲಿ ರಾಮ ಸೀತೆಯ ಹೆಚ್ಚಾಗಿ ಇರಲಿದ್ದು, ಯಶ್ ಅವರು ರಾವಣನಾಗಿ ಕಾಣಿಸಿಕೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ.

ಎರಡನೆಯ ಭಾಗದಲ್ಲಿ ಸೀತೆಯ ಅಪಹರಣ ಸನ್ನಿವೇಷ ಎಲ್ಲವೂ ಇರಲಿದ್ದು, ರಾವಣನ ಪಾತ್ರ ಎರಡನೇ ಭಾಗದಲ್ಲಿ ಅಬ್ಬರಿಸಲಿದೆ ಎಂದು ಮಾಹಿತಿ ಸಿಕ್ಕಿದೆ. ಮುಂದಿನ ವರ್ಷದ ಆರಂಭದಲ್ಲಿ ನಟ ರಣಬೀರ್ ಕಪೂರ್ ಮತ್ತು ನಟಿ ಸಾಯಿ ಪಲ್ಲವಿ ಇಬ್ಬರು ಕೂಡ ಶೂಟಿಂಗ್ ನಲ್ಲಿ ಪಾಲ್ಗೊಳ್ಳಲಿದ್ದು, 2024ರ ಜುಲೈ ನಲ್ಲಿ ಯಶ್ ಅವರು ರಾಮಾಯಣ ಶೂಟಿಂಗ್ ನಲ್ಲಿ ಪಾಲ್ಗೊಳ್ಳುತ್ತಾರೆ ಎಂದು ಹೇಳಲಾಗುತ್ತಿದೆ..

ಈ ವಿಚಾರದ ಬಗ್ಗೆ ಅಧಿಕೃತ ಮಾಹಿತಿ ಇನ್ನುಮುಂದೆ ಸಿಗಬೇಕಿದೆ. ಆದರೆ ನಿತೇಶ್ ತಿವಾರಿ ಅವರು ಈ ಸಿನಿಮಾ ಮಾಡಬಾರದು ಎಂದು ವಿರೋಧ ವ್ಯಕ್ತವಾಗಿತ್ತು. ಆದಿಪುರುಶ್ ಸಿನಿಮಾದಲ್ಲಿ VFX ಕಳಪೆ ಆಗಿದ್ದು, ಪಾತ್ರಗಳನ್ನು ತೋರಿಸಿದ ವಿಧಾನ ಚೆನ್ನಾಗಿಲ್ಲದ ಕಾರಣ ರಾಮಾಯಣ ಮಾಡಬಾರದು ಎನ್ನುವ ಮಾತು ಕೇಳಿಬಂದಿತ್ತು. ಆದರೆ ಆ ಸಿನಿಮಾದಲ್ಲಿ ಆದ ಹಾಗೆ ರಾಮಾಯಣ ಸಿನಿಮಾದಲ್ಲಿ ಆಗುವುದಿಲ್ಲ ಎಂದು ನಿತೇಶ್ ತಿವಾರಿ ಅವರು ತಿಳಿಸಿದ್ದು. ರಾಮಾಯಣ ಸಿನಿಮಾದ ಕ್ವಾಲಿಟಿ ಚೆನ್ನಾಗಿರಬೇಕು ಎನ್ನುವ ಕಾರಣಕ್ಕೆ ಆಸ್ಕರ್ ವಿಜೇತ ಸಿನಿಮಾಗೆ VFX ಮಾಡಿದ್ದ ತಂಡವನ್ನು ಕರೆಸಲಿದ್ದಾರಂತೆ.

Leave a Comment