ಟ್ರಾಫಿಕ್ ಮಧ್ಯೆ ಒಮ್ಮೆ ಗನ್ ತೆಗೆದಿದ್ದೆ: ವರ್ಷಗಳ ನಂತರ ಶಾಕಿಂಗ್ ವಿಚಾರ ತಿಳಿಸಿದ ನಟ ಯಶ್
Yash:ಕೆಜಿಎಫ್(KGF) ಮೂಲಕ ಪ್ಯಾನ್ ಇಂಡಿಯಾ ಸ್ಟಾರ್ ಆಗಿರುವ ಸ್ಯಾಂಡಲ್ವುಡ್ ಸ್ಟಾರ್ ನಟ ರಾಕಿಂಗ್ ಸ್ಟಾರ್ ಯಶ್(Yash) ಅವರು ಕೆಜಿಎಫ್ ಸರಣಿಗಳ ಮೂಲಕ ಅಪಾರ ಸಂಖ್ಯೆಯ ಅಭಿಮಾನಿಗಳ ಹೃದಯ ಮತ್ತು ಮನಸ್ಸಿನಲ್ಲಿ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಇಂದು ನಟ ಯಶ್ ಅವರಿಗೆ ಇಡೀ ದೇಶದಲ್ಲಿ ಯಾವುದೇ ಪ್ರತ್ಯೇಕ ಪರಿಚಯದ ಅಗತ್ಯವೇ ಇಲ್ಲ. 2007 ರಲ್ಲಿ ‘ಜಂಬದ ಹುಡುಗ’ ಚಿತ್ರದಲ್ಲಿ ಪೋಷಕ ನಟನಾಗಿ ನಟನೆಯನ್ನು ಪ್ರಾರಂಭಿಸಿದ ಯಶ್ ಇಂದು ತಮ್ಮ ಶ್ರಮದಿಂದ ದೊಡ್ಡ ಯಶಸ್ಸನ್ನು ಪಡೆದುಕೊಂಡಿದ್ದಾರೆ. ಯಶ್ ತಮ್ಮ ವೃತ್ತಿಜೀವನದಲ್ಲಿ ಗೂಗ್ಲಿ(googly), ಮಾಸ್ಟರ್ಪೀಸ್(Master piece) ಮತ್ತು ಲಕ್ಕಿಯಂತಹ(Lucky) ಅನೇಕ ಹಿಟ್ ಚಿತ್ರಗಳನ್ನು ನೀಡಿದ್ದಾರೆ.
Top 5 Low Budget Electric Scooters:ಕಡಿಮೆ ಬೆಲೆಯ ಟಾಪ್ 5 ಎಲೆಕ್ಟ್ರಿಕ್ ಸ್ಕೂಟರ್ಗಳು!
ಆದರೆ ಕೆಜಿಎಫ್(KGF) ಮತ್ತು ಕೆಜಿಎಫ್ -2 (KGF 2) ಅವರನ್ನು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಾಡಿತು. ಈ ಚಿತ್ರದಲ್ಲಿ ಯಶ್ ಬ್ಯಾಡ್ ಬಾಯ್ ಆಗಿ ಮಿಂಚಿದ್ದಾರೆ. ತಮ್ಮ ಪಾತ್ರದ ಮೂಲಕ ಅವರು ಪ್ರೇಕ್ಷಕರ ಮೇಲೆ ಮ್ಯಾಜಿಕ್ ಮಾಡಿದ್ದಾರೆ. ಪ್ರಸ್ತುತ ಯಶ್ ಅವರು ಒಂದು ಕಾಲದಲ್ಲಿ ತಾನು ಗ್ಯಾಂಗ್ಸ್ಟರ್ (Gangster) ಚಿತ್ರ ಮಾಡುತ್ತಿದ್ದೆ ಎಂದು ಬಹಿರಂಗಪಡಿಸುತ್ತಾ, ಆ ಸಿನಿಮಾದ ಪಾತ್ರವು ತನ್ಬ ಮೇಲೆ ಎಂತಹ ಪ್ರಭಾವವನ್ನು ಬೀರಿತ್ತು ಎಂದರೆ ಅವರು ಒಮ್ಮೆ ಟ್ರಾಫಿಕ್ ನಡುವೆ ಬಂದೂಕನ್ನು ಹೊರ ತೆಗೆದಿದ್ದೆ ಎನ್ನುವ ಸತ್ಯವನ್ನು ಹೇಳಿದ್ದಾರೆ. ಫಿಲ್ಮ್ ಕಂಪ್ಯಾನಿಯನ್ ಜೊತೆಗೆ ನಡೆದ ಸಂಭಾಷಣೆಯಲ್ಲಿ ಯಶ್ ಈ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಸಂದರ್ಶನದ ವೇಳೆ ಯಶ್(Yash) ಅವರನ್ನು ಅವರ ಸಿನಿಮಾದ ಪಾತ್ರಗಳು ಅವರ ನಿಜ ಜೀವನದ ಮೇಲೆ ಎಂತಹ ಪ್ರಭಾವವನ್ನು ಬೀರಿದೆ ಎಂದು ಕೇಳಲಾಯಿತು. ಈ ಪ್ರಶ್ನೆಗೆ ಉತ್ತರಿಸಿದ ಯಶ್, ನೀವು ಒಂದು ಪಾತ್ರವನ್ನು ನಿರ್ವಹಿಸಿದಾಗ, ನೀವು ಆ ಪಾತ್ರದ ನಡವಳಿಕೆಯನ್ನು ಅರ್ಥಮಾಡಿಕೊಳ್ಳಲು ಪ್ರಾರಂಭಿಸುತ್ತೀರಿ ಮತ್ತು ಅನೇಕ ಬಾರಿ ತಿಳಿದೋ ತಿಳಿಯದೆಯೋ ನೀವು ಆ ಪಾತ್ರದಂತೆ ವರ್ತಿಸಲು ಆರಂಭಿಸುತ್ತೀರಿ. ಕೆಲವೊಮ್ಮೆ ಆ ಪಾತ್ರವು ಕೆಟ್ಟ ವಿಷಯವೂ ಆಗಿರುತ್ತದೆ ಎಂದಿದ್ದಾರೆ. ಅದಕ್ಕೆ ಉದಾಹರಣೆ ಎನ್ನುವಂತೆ, ಯಶ್ ಅವರು ತಮ್ಮ ಮೊದಲ ಗ್ಯಾಂಗ್ಸ್ಟರ್ ಚಿತ್ರ ‘ರಾಜಧಾನಿ’ ಮಾಡುವಾಗಿನ ಅನುಭವ ತಿಳಿಸಿದ್ದಾರೆ.
ಆ ಚಿತ್ರದಲ್ಲಿನ ಅವರ ಪಾತ್ರವು, ಪ್ರತಿ ಶಾಟ್ನಲ್ಲಿ ಕೂಡಾ ಹಿಂದಿನಿಂದ ಬಂದೂಕು ತೆಗೆದುಕೊಂಡು ಬೆದರಿಕೆ ಹಾಕುವುದಾಗಿತ್ತು ಎಂದು ಹೇಳಿದ್ದಾರೆ. ಯಶ್ ಅವರು ಒಮ್ಮೆ ಟ್ರಾಫಿಕ್ನಲ್ಲಿದ್ದಾಗ ಹಿಂದಿನಿಂದ ಬಂದೂಕನ್ನು ಹೊರತೆಗೆದರು, ನಂತರ ತನಗೆ ತಾನು ಏನು ಮಾಡುತ್ತಿದ್ದೇನೆ ಎನ್ನುವ ಅರಿವಾಯಿತು ಎಂದು ಹೇಳಿದ್ದಾರೆ. ಈ ಸಂಭಾಷಣೆಯಲ್ಲಿ, ಯಶ್, ನೀವು ಒಂದು ಪಾತ್ರವನ್ನು ನಿರ್ವಹಿಸುವಾಗ ಅದು ಸಹಜವಾಗಿಯೇ ನಿಮ್ಮ ಮೇಲೆ ಸ್ವಲ್ಪ ಪರಿಣಾಮ ಬೀರುತ್ತದೆ ಎನ್ನುವ ಮಾತನ್ನು ಹೇಳಿದ್ದಾರೆ.