ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು ಗೊತ್ತಾ?ಓದಿ

Featured-Article

ಪ್ರತಿ ರಾಶಿಗೂ ಒಂದು ನಕ್ಷತ್ರ ಇರುತ್ತದೆ ಹಾಗೂ ಪ್ರತಿ ರಾಶಿಗೂ ಒಂದು ಗುಣ ಸ್ವಭಾವ, ಒಂದು ಪಂಚಭೂತ ಇರುವಂತೆ. ಆಯಾ ಜನ್ಮರಾಶಿಯವರು ತಮಗೆ ಸಂಬಂಧಿಸಿದ ದೇವತೆಗಳನ್ನು ನೆನೆದರೆ, ಧ್ಯಾನಿಸಿದರೆ, ಪೂಜಿಸಿದರೆ ಅವರ ಆಶೀರ್ವಾದ ಸಿಗುವುದು. ಯಾವ ರಾಶಿಯವರು ಯಾವ ದೇವರನ್ನು ಪೂಜಿಸಬೇಕು ಎಂದರೆ,

ಮೇಷ, ವೃಶ್ಚಿಕ,ಮಕರ ಮತ್ತು ಕುಂಭ ರಾಶಿಯವರು :ಮೇಷ ಹಾಗೂ ವೃಶ್ಚಿಕ ರಾಶಿಯನ್ನು ಆಳುವ ಗ್ರಹ ಮಂಗಳ. ಮಕರ ಮತ್ತು ಕುಂಭ ರಾಶಿಯವರ ಗ್ರಹ ಶನಿ. ಈ 4 ರಾಶಿಗೂ ಶಿವನೇ ಅಧಿದೇವತೆ. ಇತನಿಗೆ ನಿಮ್ಮ ಮೊದಲ ಪೂಜೆ ಸಲ್ಲಬೇಕು.ಲಿಂಗಕ್ಕೆ ಅರ್ಚನೆ ಮಾಡುವುದು, ಬಿಲ್ವ ಪತ್ರೆ ಸಮರ್ಪಿಸುವುದು, ಶಿವರಾತ್ರಿ ಜಾಗರಣೆ, ಶಿವಪೂಜೆ ಮುಂತಾದವುಗಳಿಂದ ಆತ ಸಂತುಷ್ಟನಾಗುತ್ತಾನೆ. ಶಿವ ದೇವಾಲಯಕ್ಕೆ ಭೇಟಿ ನೀಡಿದರೆ ಸಾಕು ನೀವು ನಿಮ್ಮ ಇಷ್ಟ ಸಿದ್ಧಿಯನ್ನು ಪಡೆದುಕೊಳ್ಳುತ್ತೀರಿ.

ತುಲಾ ಮತ್ತು ವೃಷಭ ರಾಶಿಯನ್ನು ಆಳುವ ಗ್ರಹ ಎಂದರೆ ಶುಕ್ರ. ಈ ಎರಡು ರಾಶಿಯವರಿಗೂ ಅಧಿದೇವತೆ ಮಹಾಲಕ್ಷ್ಮಿ. ಮಿಥುನ ಮತ್ತು ಕನ್ಯಾ ರಾಶಿಯವರಿಗೆ ಅಧಿಪತಿಯಾಗಿರುವ ಗ್ರಹ ಬುಧ. ಇವರ ಸುಖೀ ಜೀವನಕ್ಕೆ ಕಾರಣವಾಗುವ ದೇವರು ಎಂದರೆ ಶ್ರೀಮನ್ ನಾರಾಯಣ. ಕಟಕ ರಾಶಿಯವರಿಗೆ ಅಧಿಪತಿಯಾಗಿರುವ ಗ್ರಹವು ಚಂದ್ರ. ಇವನು ಪೂಜಿಸಬೇಕಾದ ದೇವರು ಎಂದರೆ ಗೌರಿ ಅಥವಾ ಪಾರ್ವತಿ.

ಸಿಂಹ ಜನ್ಮ ರಾಶಿಯವರಿಗೆ ಅಧಿಪತಿಯಗಿರುವ ಗ್ರಹವು ಸೂರ್ಯ. ಸೂರ್ಯನ ಪ್ರಕಾರತೆ ಯನ್ನು ತಡೆದುಕೊಳ್ಳುವ ಈಶ್ವರನು ಈ ರಾಶಿಯವರ ಅಧಿದೇವತೆ. ಇನ್ನು ಧನಸ್ಸು ಮತ್ತು ಮೀನ ರಾಶಿಯವರನ್ನು ಅಳುವ ಗ್ರಹವೆಂದರೆ ಗುರು. ಗುರುವಿಗೆ ತಕ್ಕ ದೇವತೆಯೆಂದರೆ ಶ್ರೀ ದಕ್ಷಿಣಾಮೂರ್ತಿ. ಈ ದೇವರು ಬಹಳ ಪ್ರಭಾವಶಾಲಿ ದೇವರಾಗಿದ್ದು ನಿರ್ದಿಷ್ಟ ಪೂಜೆ ಮಂತ್ರಗಳಿಂದ ಅರ್ಪಿಸಿದರೆ ಈ ದೇವರನ್ನು ಒಲಿಸಿಕೊಳ್ಳಬಹುದು. ದುಷ್ಟಶಕ್ತಿಗಳಿಂದ ನಿಮ್ಮ ಕುಟುಂಬವನ್ನು ಈ ದೇವರು ರಕ್ಷಿಸುತ್ತಾನೆ.

Leave a Reply

Your email address will not be published.