ವರ್ಷಪೂರ್ತಿ ಅರೋಗ್ಯವಾಗಿರಬೇಕೇಂದರೆ ಯುಗಾದಿ ಹಬ್ಬದ ದಿನ ಇದನ್ನು ಸೇವನೆ ಮಾಡಿ!

0
30

Yugadi 2023 :ಯುಗಾದಿ ಹಬ್ಬದ ದಿನ ಏಕೆ ಬೇವು ಬೆಲ್ಲವನ್ನು ತಿನ್ನಬೇಕು..? ಇದರಿಂದ ದೇಹದ ಮೇಲೆ ಯಾವೆಲ್ಲಾ ರೀತಿಯ ಲಾಭಗಳು ಆಗುತ್ತವೆ ಎಂದು ತಿಳಿದುಕೊಳ್ಳನ ಬನ್ನಿ.ಪ್ರತಿಯೊಂದು ಹಬ್ಬ ಹರಿದಿನ ಸಂಪ್ರದಾಯ ಆಚರಣೆಗೆ ಬೇರೆ ಬೇರೆ ರೀತಿಯ ವೈಜ್ಞಾನಿಕ ಕಾರಣ ಇದ್ದೆ ಇರುತ್ತದೆ.ಯುಗಾದಿ ಹಬ್ಬದಲ್ಲಿ ಬೇವು ಬೆಲ್ಲ ತಿನ್ನುವುದು ವಾಡಿಕೆ. ಅದರೆ ಈ ಬೇವು ಬೆಲ್ಲವನ್ನು ಯುಗಾದಿ ಹಬ್ಬದ ದಿನ ತಿನ್ನೋದ್ರಿಂದ ಏನಾಗುತ್ತೆ..?

ಬೇವು ಎಂದರೇ ಅದು ಕಹಿ ಎಂದು ಅದನ್ನು ದೂರ ಇಡುವವರೇ ಜಾಸ್ತಿ. ಅದರೆ ಆರೋಗ್ಯಕ್ಕೆ ಬೇವು ಮತ್ತು ಬೆಲ್ಲದ ಮಿಶ್ರಣ ತುಂಬಾನೇ ಒಳ್ಳೆಯದು.ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳುವುದಕ್ಕೆ ಸಹಾಯ ಮಾಡುತ್ತಾದೇ. ದೇಹದಲ್ಲಿ ಇಂಮ್ಯೂನಿಟಿ ಅನ್ನು ಜಾಸ್ತಿ ಮಾಡುವುದಕ್ಕೆ ಈ ಬೇವು ಬೆಲ್ಲದ ಮಿಶ್ರಣ ತುಂಬಾನೇ ಸಹಾಯವಾಗುತ್ತದೆ.ಹೊಟ್ಟೆ ಉಣ್ಣಿನ ಸಮಸ್ಸೆಯನ್ನು ದೂರ ಇಡುವುದಕ್ಕೆ ಬೇವು ಬೆಲ್ಲದ ಮಿಶ್ರಣವನ್ನು ತಿನ್ನಬಹುದು ಮತ್ತು ತುಂಬಾನೇ ಆರೋಗ್ಯಕ್ಕೆ ಒಳ್ಳೆಯದು.

ಇನ್ನು ಜಂತು ಹುಳ ನಿವಾರಣೆಗೆ ಬೇವು ಬೆಲ್ಲ ಸೇವನೆ ತುಂಬಾ ಒಳ್ಳೆಯರು.ಬೇವಿನಲ್ಲಿ ಇರುವ ಕಹಿ ಅಂಶ ಜಂತು ಹುಳ ನಿವಾರಣೆಗೆ ತುಂಬಾನೇ ಸಹಾಯವಾಗುತ್ತದೆ.ಇನ್ನು ದೇಹವನ್ನು ಡಿಟ್ಯಾಕ್ಸ್ ಮಾಡುವುದಕ್ಕೆ ತುಂಬಾ ಒಳ್ಳೆಯದು. ದೇಹದಲ್ಲಿ ಇರುವ ವಿಷಕಾರಿ ಅಂಶವನ್ನು ಹೊರ ಹಾಕಲು ಇದು ಸಹಾಯ ಮಾಡುತ್ತದೆ.

ಇನ್ನು ಚರ್ಮದ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಮಾರ್ಚ್ ಏಪ್ರಿಲ್ ಸಮಯದಲ್ಲಿ ಬಿಸಿಲು ತುಂಬಾ ಜಾಸ್ತಿ ಇರುತ್ತದೆ.ಈ ಸಮಯದಲ್ಲಿ ಚರ್ಮದ ಹಾನಿ ಹೆಚ್ಚಾಗುತ್ತದೆ. ಇವುಗಳನ್ನು ದೂರ ಇಡುವುದಕ್ಕೆ ಯುಗಾದಿ ಸಮಯದಲ್ಲಿ ಬೇವು ಬೆಲ್ಲ ತಿನ್ನುವುದು ತುಂಬಾನೇ ಸಹಾಯಕರಿ.ಚರ್ಮದ ಅರೋಗ್ಯವನ್ನು ಕಾಪಾಡುವುದಕ್ಕೆ ತುಂಬಾನೇ ಸಹಾಯವಾಗುತ್ತದೆ. ಅಷ್ಟೇ ಅಲ್ಲದೆ ದೇಹದ ತೂಕವನ್ನು ಕಡಿಮೆ ಮಾಡಿಕೊಳ್ಳುವುದಕ್ಕೆ ಬೇವು ಬೆಲ್ಲ ತುಂಬಾ ಸಹಾಯ ಮಾಡುತ್ತದೆ ಮತ್ತು ಜೀರ್ಣ ಶಕ್ತಿಯನ್ನು ಕೂಡ ಹೇಚ್ಚಿಸುತ್ತದೆ. ಬೇವು ಎಷ್ಟೇ ಕಹಿ ಇದ್ದರು ದೇಹಕ್ಕೆ ಒಳ್ಳೆಯದು.

LEAVE A REPLY

Please enter your comment!
Please enter your name here