ಯುಗಾದಿ ಹಬ್ಬದ ದಿನ ಈ ತಪ್ಪುಗಳನ್ನು ಮಾಡಬಾರದು!ಈ ಕೆಲಸ ಮಾಡಬೇಡಿ
ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಎಂದರೆ ಹೊಸವರ್ಷ ಎಂದು ಅರ್ಥ. ಯುಗಾದಿ ಹಬ್ಬದ ದಿನದಂದು ಮಾವಿನ ತೋರಣ ಕಟ್ಟುವುದು , ಬಣ್ಣದ ರಂಗೋಲಿಯನ್ನು ಹಾಕುವುದು ಹೀಗೆ ಎಲ್ಲರೂ ವಿಜೃಂಭಣೆಯಿಂದ ಯುಗಾದಿ ಹಬ್ಬವನ್ನು ಆಚರಿಸುತ್ತಾರೆ.ಆದ್ದರಿಂದ ಯುಗಾದಿ ಹಬ್ಬದ ದಿನದಂದು ಈ ಕೆಲವೊಂದು ತಪ್ಪುಗಳನ್ನು ಮಾಡಬಾರದು.
1, ಹಬ್ಬದ ದಿನದಂದು ಯಾರಿಗೂ ಸಹ ಅವಮಾನ ಮಾಡಬಾರದು ಹಾಗೂ ಬೇರೆಯವರೊಂದಿಗೆ ಜಗಳವನ್ನು ಹಾಡಬಾರದು.ಮನೆಯಲ್ಲಿ ಇರುವ ಎಲ್ಲಾ ಹೆಣ್ಣು ಮಕ್ಕಳಿಗೆ ಗೌರವವನ್ನು ನೀಡಬೇಕು.
2, ಯುಗಾದಿ ಹಬ್ಬದ ದಿನದಂದು ಯಾವುದೇ ಕಾರಣಕ್ಕೂ ಮದ್ಯಪಾನ ಮಾಡಬಾರದು.ಮಾಂಸಾಹಾರದ ಊಟಗಳನ್ನು ಸಹ ಮಾಡಬಾರದು. ಇವುಗಳ ಬದಲು ಹಬ್ಬದ ದಿನದಂದು ಸಿಹಿ ಪದಾರ್ಥಗಳನ್ನು ತಿನ್ನಬಹುದು.
3, ಯುಗಾದಿ ಹಬ್ಬದ ದಿನದಂದು ಕೊಳೆಯಾದ ಬಟ್ಟೆಗಳನ್ನು ಅಥವಾ ಹರಿದು ಹೋದ ಬಟ್ಟೆಗಳನ್ನು ಧರಿಸಬಾರದು. ಆದಷ್ಟು ಈ ದಿನದಂದು ಹೊಸ ಬಟ್ಟೆಯನ್ನು ಧರಿಸಬೇಕು.ಸಾಧ್ಯವಾದಷ್ಟು ದಾನ-ಧರ್ಮ ಮಾಡುವುದು ಒಳ್ಳೆಯದು.ಈ ರೀತಿ ಮಾಡುವುದರಿಂದ ಇನ್ನೊಬ್ಬರ ಆಶೀರ್ವಾದ ನಿಮ್ಮ ಮೇಲೆ ಸದಾ ಕಾಲ ಇರುತ್ತದೆ.
4, ಯುಗಾದಿ ಹಬ್ಬದಲ್ಲಿ ಪಂಚಾಗ ಪಾಲನೆಯನ್ನು ಮಾಡುತ್ತಾರೆ. ಇದನ್ನು ದೇವಸ್ಥಾನ ಅಥವಾ ಮನೆಯಲ್ಲಿ ಕೂಡ ಮಾಡಬಹುದು.
5,ಮನೆಯ ಮುಖ್ಯದ್ವಾರವನ್ನು ಖಾಲಿ ಬಿಡಬಾರದು. ಯುಗಾದಿ ಹಬ್ಬದ ದಿನದಂದು ಮಾವಿನ ತೋರಣದಿಂದ ದ್ವಾರದ ಬಾಗಿಲನ್ನು ನೀವು ಶೃಂಗರಿಸಬಹುದು ಜೊತೆಗೆ ಬೇವಿನಸೊಪ್ಪನ್ನು ಸೇರಿ ಕಟ್ಟುವುದರಿಂದ ನೋಡುವುದಕ್ಕೂ ತುಂಬಾ ಚೆನ್ನಾಗಿ ಕಾಣಿಸುತ್ತದೆ.ಯಾವುದೇ ಕಾರಣಕ್ಕೂ ಪ್ಲಾಸ್ಟಿಕ್ ಮಾವಿನ ತೋರಣವನ್ನು ಮನೆಯಲ್ಲಿ ಕಟ್ಟಬಾರದು.