Anushka Shetty :ಅನುಷ್ಕಾ ಶೆಟ್ಟಿ ಮದುವೆ ಫಿಕ್ಸ್..ವರ ಯಾರು?ವಯಸ್ಸು ಎಷ್ಟು!

Written by Keerthan

Published on:

Anushka Shetty Marriage News: ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರೊಬ್ಬರೊಂದಿಗೆ ನಟಿ ಅನುಷ್ಕಾ ಶೆಟ್ಟಿ ಮದುವೆಯ ಸುದ್ದಿ ಟಾಲಿವುಡ್‌ನಲ್ಲಿ ಹಬ್ಬಿದೆ. ಸದ್ಯದಲ್ಲೇ ನಟಿ ಹಸೆಮಣೆ ಏರಲಿದ್ದಾರೆ ಎನ್ನಲಾಗಿದೆ.

Anushka Shetty

ಸುಮಾರು ಎರಡು ದಶಕಗಳ ಕಾಲ ತೆಲುಗು ಚಿತ್ರರಂಗವನ್ನು ಆಳಿದ ಅನುಷ್ಕಾ ಶೆಟ್ಟಿ, ಬಾಹುಬಲಿ ನಂತರ ಸ್ವಲ್ಪ ವಿರಾಮ ತೆಗೆದುಕೊಂಡು ಮಿಸ್ ಮತ್ತು ಮಿಸ್ಟರ್ ಪಾಲಿ ಶೆಟ್ಟಿಯೊಂದಿಗೆ ಸಿನಿಮಾಗೆ ಮರಳಿದರು. ಇದೀಗ ಟಾಲಿವುಡ್ ಅಂಗಳದಲ್ಲಿ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿ ಬಂದಿದೆ. ನಟಿ ಅನುಷ್ಕಾ ಶೆಟ್ಟಿ ಕನ್ನಡ ಚಿತ್ರರಂಗದ ದೊಡ್ಡ ನಿರ್ಮಾಪಕರನ್ನು ಮದುವೆಯಾಗುತ್ತಿದ್ದಾರೆ ಎಂಬ ಸುದ್ದಿ ಟಾಲಿವುಡ್‌ನಲ್ಲಿ ಸದ್ದು ಮಾಡುತ್ತಿದೆ.ಈ ನಿರ್ಮಾಪಕನೊಂದಿಗೆ ಅನುಷ್ಕಾ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನಲಾಗಿದೆ

anushka shetty
anushka shetty

ಬಾಹುಬಲಿ ನಂತರ ಅನುಷ್ಕಾ ಶೆಟ್ಟಿ ಮತ್ತು ಪ್ರಭಾಸ್ ಪ್ರೀತಿಸುತ್ತಿದ್ದರು ಎಂಬ ವದಂತಿ ಹಬ್ಬಿತ್ತು. ಬಾಹುಬಲಿ ನಟ ಪ್ರಭಾಸ್ ಮತ್ತು ನಟಿ ಅನುಷ್ಕಾ ಶೆಟ್ಟಿ ಹೆಸರುಗಳು ಬಹಳ ದಿನಗಳಿಂದ ಚಲಾವಣೆಯಲ್ಲಿವೆ. ಇವರಿಬ್ಬರು ಜೋಡಿಯಾಗಿದ್ದು, ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂಬ ವದಂತಿ ಹಬ್ಬಿತ್ತು . ಆದರೆ ಇದೀಗ ಅನುಷ್ಕಾ ಮದುವೆ ಬಗ್ಗೆ ಹೊಸ ಸುದ್ದಿ ಬಂದಿದೆ.

ಆದರೆ, ಅನುಷ್ಕಾ ಮದುವೆ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಅನುಷ್ಕಾ ಶೆಟ್ಟಿ ಕುಟುಂಬಸ್ಥರು ಯಾವುದೇ ಮಾಹಿತಿ ನೀಡಿಲ್ಲ. ಈ ವರ್ಷದ ಕೊನೆಯಲ್ಲಿ ಅನುಷ್ಕಾ ಮದುವೆಯಾಗಲಿದ್ದಾರೆ. ಅನುಷ್ಕಾ 42ನೇ ವಯಸ್ಸಿನಲ್ಲಿ ನಿರ್ಮಾಪಕರ ಜೊತೆ ಮದುವೆಯಾಗಲಿದ್ದಾರೆ ಎಂಬ ಸುದ್ದಿಯೂ ಹರಿದಾಡುತ್ತಿದೆ.

ಮಂಗಳೂರಿನ ಸುಂದರಿ ಅನುಷ್ಕಾ ಶೆಟ್ಟಿ ಪ್ರಸ್ತುತ ಮಹಿಳಾ ಪ್ರಧಾನ ಮತ್ತು ಕಡಿಮೆ ಬಜೆಟ್ ಚಿತ್ರಗಳಿಗೆ ಸೀಮಿತವಾಗಿದ್ದಾರೆ. ಅನುಷ್ಕಾ ಶೆಟ್ಟಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ಮಾತ್ರ ನಟಿಸಿದ್ದಾರೆ ಆದರೆ ಇಓದು ಮಲಯಾಳಂ ಚಿತ್ರರಂಗಕ್ಕೆ ಅವರ ಮೊದಲ ಪ್ರವೇಶವಾಗಿದೆ.

Read More

Mahindra XUV 3XO :1 ಗಂಟೆಯಲ್ಲಿ 50 ಸಾವಿರ ಬುಕ್ಕಿಂಗ್‌ ಪಡೆದು ಧಾಖಲೆ ಮಾಡಿದ ಮಹೀಂದ್ರಾ XUV 3XO

Kangana Ranaut Net Worth :6.7 ಕೆಜಿ ಚಿನ್ನ, 2 ಮರ್ಸಿಡಿಸ್ ಕಾರುಗಳು! ಕಂಗನಾ ರಣಾವತ್ ಅವರ ಆಸ್ತಿ ಎಷ್ಟು? ಕಂಗನಾ ಗಳಿಕೆ ತಿಳಿದರೆ ಶಾಕ್ ಆಗುತ್ತೀರಿ

Leave a Comment