Astrology: ಮನೆಯವರು ಸಂತೋಷವಾಗಿ ಇರಬೇಕು ಎಂದರೆ ಪೂಜೆಗೆ ಬಳಸಿದ ಹೂವುಗಳಿಂದ ಈ ರೀತಿ ಮಾಡಿ

0 25

Astrology: ಮನೆಯಲ್ಲಿ ಪೂಜೆ ಮಾಡುವುದಕ್ಕೆ ಹೂವುಗಳನ್ನು ಖಂಡಿತವಾಗಿ ಬಳಸುತ್ತೇವೆ. ಆ ಹೂವುಗಳು ಒಣಗಿದ ಬಳಿಕ ಎಸೆದುಬಿಡುತ್ತೇವೆ, ಅಥವಾ ನೀರಿಗೆ ಹಾಕಿಬಿಡುತ್ತ3ವೆ. ಆದರೆ ಜ್ಯೋತಿಷ್ಯ ಶಾಸ್ತ್ರದಲ್ಲಿ ಪೂಜೆಗೆ ಬಳಸಿ ಒಣಗಿದ ಹೂವು ಮತ್ತು ಹೂವಿನ ಹಾರದಿಂದ ಏನೆಲ್ಲಾ ಮಾಡಬಹುದು ಎಂದು ತಿಳಿಸಲಾಗಿದೆ. ಈ ಪರಿಹಾರಗಳನ್ನು ಮಾಡಿದರೆ, ನಿಮಗೆ ಹಾಗೂ ನಿಮ್ಮ ಮನೆಯವರಿಗೆ ಒಳ್ಳೆಯದಾಗುತ್ತದೆ, ಹಾಗೆಯೇ ಮನೆಯ ಸಮೃದ್ಧಿಯು ಹೆಚ್ಚಾಗುತ್ತದೆ. ಆ ಪರಿಹಾರಗಳು ಏನೇನು ಎಂದು ತಿಳಿಸುತ್ತೇವೆ ನೋಡಿ..

*ಒಂದು ವೇಳೆ ನಿಮಗೆ ಗಿಡಗಳನ್ನು ಬೆಳೆಸುವುದು, ತೋಟಗಾರಿಕೆ ಇದರಲ್ಲೆಲ್ಲಾ ಆಸಕ್ತಿ ಇದ್ದರೆ, ನೀವು ಪೂಜೆಗೆ ಬಳಸಿರುವ ಒಣಗಿದ ಹೂವುಗಳನ್ನು ನಿಮ್ಮ ತೋಟದಲ್ಲಿ ಇರಿಸಿ, ಗೊಬ್ಬರವಾಗಿ ಮಾಡಿ.. ಇದರಿಂದ ಲಕ್ಷ್ಮಿದೇವಿಗೆ ಸಂತೋಷವಾಗುತ್ತದೆ, ನಿಮ್ಮ ಮೇಲೆ ಹಾಗೂ ನಿಮ್ಮ ಕುಟುಂಬದ ಮೇಲೆ ತಾಯಿಯ ಆಶೀರ್ವಾದ ಯಾವಾಗಲೂ ಇರುತ್ತದೆ.

*ಮನೆಯಲ್ಲಿ ಯಾವುದೇ ವಿಶೇಷ ಪೂಜೆಗಳನ್ನು ಮಾಡಿ, ದೇವರ ಪೂಜೆಗೆ ಬಳಸಿದ ಹೂವುಗಳು ಒಣಗಿದರೆ, ಅಂಥ ಹೂವುಗಳನ್ನು ಕೆಂಪು ಬಟ್ಟೆಯೊಂದರಲ್ಲಿ ಸುತ್ತಿ ಇಡಿ, ಈ ಬಟ್ಟೆಯನ್ನು ಹುಷಾರಾಗಿ ಇಡುವುದರಿಂದ ಮನೆಯಲ್ಲಿ ಪಾಸಿಟಿವಿಟಿ ಹೆಚ್ಚಾಗುತ್ತದೆ.

*ದೇವಸ್ಥಾನಕ್ಕೆ ಹೋದಾಗ ಪ್ರಸಾದವಾಗಿ ನೀಡುವ ಹೂವುಗಳನ್ನು ಒಣಗಿದ ಬಳಿಕ ಎಲ್ಲಿಯೂ ಬಿಸಾಕಬೇಡಿ, ಅವುಗಳನ್ನು ಹರಿಯುವ ನೀರಿನಲ್ಲಿ ಬಿಡುವುದರಿಂದ ನಿಮ್ಮ ಮನೆಯಲ್ಲಿ ಸಂತೋಷ ಮತ್ತು ಸಮೃದ್ಧಿ ವೃದ್ಧಿಸುತ್ತದೆ.

Leave A Reply

Your email address will not be published.