Horoscope: ಧನು ಸಂಕ್ರಾಂತಿ ದಿನ ಈ ಕೆಲಸ ಮಾಡಿದ್ರೆ ನಿಮ್ಮ ಜಾತಕದಲ್ಲಿ ಸೂರ್ಯನ ಸ್ಥಾನ ಸ್ಟ್ರಾಂಗ್ ಆಗುತ್ತದೆ

0 29

Horoscope: ನಮಗೆಲ್ಲ ಗೊತ್ತಿರುವ ಹಾಗೆ ಸೂರ್ಯದೇವನನ್ನು ಎಲ್ಲಾ ಗ್ರಹಗಳ ರಾಜ ಎಂದು ಕರೆಯುತ್ತಾರೆ. ಹಾಗೆಯೇ ನಮ್ಮ ಧರ್ಮದಲ್ಲಿ ಧನು ರಾಶಿಯ ಸಂಕ್ರಾಂತಿಗೆ ವಿಶೇಷವಾದ ಸ್ಥಾನ ಸಹ ಇದೆ. ಧನು ಸಂಕ್ರಾಂತಿ ಅಂದರೆ ಏನು ಎಂದರೆ, ಸೂರ್ಯದೇವನು ಧನು ರಾಶಿಗೆ ಪ್ರವೇಶ ಮಾಡಿದಾಗ ಅದನ್ನು ಧನು ಸಂಕ್ರಾಂತಿ ಎಂದು ಕರೆಯುತ್ತಾರೆ. ಡಿಸೆಂಬರ್ 16ರಂದು ಸೂರ್ಯದೇವನು ವೃಶ್ಚಿಕ ರಾಶಿಯಿಂದ ಹೊರಬಂದು, ಧನು ರಾಶಿಗೆ ತಲುಪುತ್ತಾನೆ. ಇದನ್ನೇ ಧನು ಸಂಕ್ರಾಂತಿ ಎನ್ನುತ್ತಾರೆ.

ಈ ದಿನ ನೀವು ಕೆಲವು ಕೆಲಸಗಳನ್ನು ಮಾಡುವುದರಿಂದ, ಒಂದು ವೇಳೆ ನಿಮ್ಮ ಜಾತಕದಲ್ಲಿ ಸೂರ್ಯದೇವನ ದೋಷ ಇದ್ದರೆ, ಅದೆಲ್ಲವೂ ಪರಿಹಾರ ಸಿಗುತ್ತದೆ. ಈ ವಿಶೇಷ ದಿನ ಸೂರ್ಯದೇವನ ಆಶೀರ್ವಾದ ಪಡೆಯುವುದರಿಂದ ನಿಮ್ಮ ಸಮಯ ಒಳ್ಳೆಯದಾಗುತ್ತದೆ. ಈ ದಿನ ನೀವು ಮಾಡಬೇಕಾದ ಕೆಲಸಗಳು ಏನೇನು ಎಂದು ನೋಡುವುದಾದರೆ..

ಪುಣ್ಯ ಸ್ನಾನ :- ಈ ದಿವಸ ಪವಿತ್ರವಾದ ನದಿಯಲ್ಲಿ ಪುಣ್ಯ ಸ್ನಾನ ಮಾಡುವುದು ಒಳ್ಳೆಯದು, ನಂತರ ಸೂರ್ಯದೇವನಿಗೆ ಆರ್ಘ್ಯ ಅರ್ಪಿಸಬೇಕು. ಜೊತೆಗೆ ಓಂ ಸೂರ್ಯಾಯ ನಮಃ ಈ ಮಂತ್ರ ಪಠಣೆ ಮಾಡಿದರೆ, ನಿಮ್ಮ ಪಾಪಗಳಿಗೆ ಮುಕ್ತಿ ಸಿಗುತ್ತದೆ, ಜಾಟಕದಲ್ಲಿ ಸೂರ್ಯನ ಸ್ಥಾನ ಬಲವಾಗುತ್ತದೆ.

ಸೂರ್ಯನ ಸ್ಮರಣೆ :- ಧನು ಸಂಕ್ರಾಂತಿಯ ದಿವಸ ನೀವಿ ಸೂರ್ಯನ ಸ್ಮರಣೆ ಮಾಡಿ, ಸೂರ್ಯ ಚಾಲೀಸ ಪಠಿಸಿ, ಸೂರ್ಯ ಕವಚ ಸ್ತೋತ್ರಗಳನ್ನ ಪಠಿಸಿ, 108 ಸಾರಿ ಸೂರ್ಯನಾಮವನ್ನು ಜೆಪಿಸಬೇಕು. ಈ ರೀತಿ ಮಾಡಿದರೆ ಬದುಕಿನ ಎಲ್ಲಾ ತೊಂದರೆಗಳು ನಿವಾರಣೆ ಆಗುತ್ತದೆ.

ಶಿವಾಭಿಷೇಕ :- ಮೇಲೆ ತಿಳಿಸಿದ ಎರಡು ಕೆಲಸಗಳನ್ನು ಮಾಡಿದ ಬಳಿಕ, ಗಂಗಾಜಲದ ಜೊತೆಗೆ ಕಪ್ಪು ಎಳ್ಳನ್ನು ಬೆರೆಸಿ ಶಿವನಿಗೆ ಅಭಿಷೇಕ ಮಾಡಬೇಕು. ಈ ರೀತಿ ಮಾಡಿದರೆ ಗ್ರಹಗಳ ದೋಷಗಳು ಸರಿಹೋಗುತ್ತವೆ.

ದಾನ :- ಈ ದಿನ ನೀವು ನಿಮ್ಮಿಂದ ಆದದ್ದನ್ನು ದಾನ ನೀಡಬಹುದು. ನೀವು ಮಾಡುವ ದಾನದಿಂದ ಬೇರೊಬ್ಬರು ಸಂತೋಷಪಟ್ಟರೆ, ಅದರಿಂದ ನೀವು ಏಳಿಗೆ ಕಾಣುತ್ತೀರಿ.

Leave A Reply

Your email address will not be published.