Horoscope: ಹೊಸ ವರ್ಷದ ಶುರುವಿನಲ್ಲೇ ಗಜಲಕ್ಷ್ಮೀ ರಾಜಯೋಗ, ಗುರುದೇವನ ಕೃಪೆಯಿಂದ ಈ ರಾಶಿಗಳೆಲ್ಲಾ ಹೆಚ್ಚಿನ ಲಾಭ ಪಡೆಯಲಿದೆ

0 20

Horoscope: ಜ್ಯೋತಿಷ್ಯ ಶಾಸ್ತ್ರದಲ್ಲಿ ತಿಳಿಸಿರುವ ಹಾಗೆ ಪ್ರತಿ ಗ್ರಹಗಳ ಸ್ಥಾನ ಬದಲಾವಣೆ ಸಂಚಾರ ಇದೆಲ್ಲವೂ ಯೋಗಗಳು ನಿರ್ಮಾಣ ಆಗುವ ಹಾಗೆ ಮಾಡುತ್ತದೆ. ಇಂಥ ಯೋಗಗಳು ಎಲ್ಲಾ ರಾಶಿಗಳ ಮೇಲೆ ಪರಿಣಾಮ ಬೀರುತ್ತದೆ. ಈ ವರ್ಷದ ಕೊನೆಯಲ್ಲಿ ಡಿಸೆಂಬರ್ 21ರಂದು ಗುರುದೇವನು ತನ್ನ ನೇರನಡೆ ಶುರು ಮಾಡಲಿದ್ದಾನೆ, ಈ ಕಾರಣದಿಂದ 3 ರಾಶಿಗಳಿಗೆ 2024ರ ವರ್ಷ ಶುರುವಿನಲ್ಲೇ ಅದೃಷ್ಟ, ದಿಢೀರ್ ಧನಲಾಭ ಸಿಗುವ ಹಾಗೆ ಮಾಡಲಿದೆ. ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಕರ್ಕಾಟಕ ರಾಶಿ :- ಗುರು ಗ್ರಹದ ನೇರನಡೆ ಇಂದ ನಿಮ್ಮ ಉದ್ಯೋಗದಲ್ಲಿ ಹೆಚ್ಚು ಅಭಿವೃದ್ಧಿಯಾಗುತ್ತದೆ. ಈ ಸಮಯದಲ್ಲಿ ನಿಮ್ಮ ಬ್ಯುಸಿನೆಸ್ ಮತ್ತು ಕೆಲಸ ಎರಡರಲ್ಲಿ ಧನಲಾಭ ಉಂಟಾಗುತ್ತದೆ. ಬ್ಯುಸಿನೆಸ್ ವಿಸ್ತರಿಸಲು ಇದು ಸರಿಯಾದ ಸಮಯ, ಈ ವೇಳೆ ಹೂಡಿಕೆ ಮಾಡಿದರೆ ಒಳ್ಳೆಯ ಲಾಭ ಪಡೆಯುತ್ತೀರಿ. ಸರ್ಕಾರಿ ನೌಕರರಿಗೆ ಕೇಳಿದ ಕಡೆಗೆ ಪ್ರೊಮೋಷನ್ ಸಿಗುತ್ತದೆ.

ಸಿಂಹ ರಾಶಿ :- ಗುರುದೇವ ನೇರ ನಡೆ ಶುರು ಮಾಡುವುದರಿಂದ ನಿಮ್ಮ ಬದುಕಲ್ಲಿ ಎಲ್ಲವೂ ಒಳ್ಳೆಯದಾಗುವುದಕ್ಕೆ ಶುರುವಾಗುತ್ತದೆ. ಧಾರ್ಮಿಕ ಕೆಲಸಗಳಲ್ಲಿ ನಿಮಗೆ ಆಸಕ್ತಿ ಹೆಚ್ಚಾಗುತ್ತದೆ. ಮನೆಯಲ್ಲಿ ಧಾರ್ಮಿಕ ಕಾರ್ಯಗಳು ನಡೆಯುತ್ತದೆ. ಗುರುದೇವನು ನಿಮ್ಮ ಜಾತಕದ 5ನೇ ಮತ್ತು 8ನೇ ಮನೆಗೆ ಅಧಿಪತಿ ಆಗಿದ್ದಾನೆ, ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಲವ್ ಲೈಫ್ ಚೆನ್ನಾಗಿರುತ್ತದೆ..

ಧನು ರಾಶಿ :- ಗಜಲಕ್ಷ್ಮೀ ರಾಜಯೋಗ ನಿಮಗೆ ಬಹಳ ಶುಭ ತರುತ್ತದೆ, ಗುರುದೇವ ನಿಮ್ಮ ಜಾತಕಕ್ಕೆ ಅಧಿಪತಿ ಹಾಗಾಗಿ ಮಕ್ಕಳಿಂದ ಒಳ್ಳೆಯ ಸುದ್ದಿ ಕೇಳುತ್ತೀರಿ. ಗುರುದೇವ ನಿಮ್ಮ ಜಾತಕದ 4ನೇ ಮನೆಗೆ ಅಧಿಪತಿ, ಹಾಗಾಗಿ ಈ ವೇಳೆ ನಿಮ್ಮ ಮಕ್ಕಳ ಕೆಲಸ ಅಥವಾ ಮದುವೆ ನಡೆಯಬಹುದು. ಈ ವೇಳೆ ಕಾರ್ ಅಥವಾ ಆಸ್ತಿ ಖರೀದಿ ಮಾಡುವ ಯೋಗವಿದೆ. ಸುಖ ಸಂತೋಷ ಜಾಸ್ತಿಯಾಗುತ್ತದೆ. ಪೂರ್ವಿಕರ ಆಸ್ತಿಯಿಂದ ಲಾಭ ಸಿಗುತ್ತದೆ. ಬ್ಯುಸಿನೆಸ್ ವೃದ್ಧಿಯಾಗುತ್ತದೆ. ಕೆಲಸದಲ್ಲಿ ಒಳ್ಳೆಯ ಅವಕಾಶ ಸಿಗಲಿದೆ.

Leave A Reply

Your email address will not be published.