Horoscope: ಇನ್ನೇನು ಕೆಲವೇ ದಿನಗಳು ನವೆಂಬರ್ ಶುರುವಾಗುತ್ತಿದ್ದ ಹಾಗೆ ಈ ರಾಶಿಗಳಿಗೆ ರಾಹು ಕೇತು ತೊಂದರೆಯಿಂದ ಮುಕ್ತಿ

0 21

Horoscope: ರಾಹು ಮತ್ತು ಕೇತು ಈ ಎರಡು ಗ್ರಹಗಳು ಶನಿದೇವರ ಬಳಿಕ ಅತಿ ನಿಧಾನವಾಗಿ ಚಲಿಸುವ ಗ್ರಹಗಳು, ಒಂದು ರಾಶಿಯಿಂದ ಸ್ಥಾನ ಬದಲಾವಣೆ ಮಾಡುವುದಕ್ಕೆ ಒಂದೂವರೆ ವರ್ಷ ಸಮಯ ತೆಗೆದುಕೊಳ್ಳುತ್ತಾರೆ. ಈ ಎರಡು ರಾಶಿಗಳು ಯಾವಾಗಲೂ ಹಿಮ್ಮುಖವಾಗಿ ಚಲಿಸುತ್ತದೆ, ಹಾಗೆಯೇ ಇವು ಪಾಪ ಗ್ರಹಗಳು ಎಂದು ಕರೆಯಲ್ಪಡುತ್ತವೆ. ಆಕ್ಟೊಬರ್ 30ರಂದು ಈ ಎರಡು ಗ್ರಹಗಳ ರಾಶಿ ಬದಲಾವಣೆ ಅಗಲಿದೆ, ರಾಹು ಗ್ರಹ ಮೇಷ ರಾಶಿಯಿಂದ ಮೀನ ರಾಶಿಗೆ ಪ್ರವೇಶ ಮಾಡಲಿದೆ.

ಕೇತು ತುಲಾ ರಾಶಿಯಿಂದ ಕನ್ಯಾ ರಾಶಿಗೆ ಪ್ರವೇಶ ಮಾಡಲಿದೆ. ಇವರಿಬ್ಬರ ಸ್ಥಾನ ಬದಲಾವಣೆ ಇಂದ ಕೆಲವು ರಾಶಿಗಳ ಜೀವನಕ್ಕೆ ಬೆಳಕು ಮೂಡಲಿದ್ದು, ರಾಹು ಮತ್ತು ಕೇತುವಿನ ತೊಂದರೆ ಇಂದ ಮುಕ್ತಿ ಸಿಕ್ಕಿ, ಇವರ ಜೀವನಕ್ಕೆ ಹೊಸ ರೂಪ ಸಿಗಲಿದೆ. ಶುಭಫಲ ಪಡೆಯುವ ಆ ರಾಶಿಗಳು ಯಾವುವು ಎಂದು ತಿಳಿಸುತ್ತೇವೆ ನೋಡಿ..

ಮೇಷ ರಾಶಿ :- ಈ ರಾಶಿಯವರು ಒಂದೂವರೆ ವರ್ಷಗಳಿಂದ ರಾಹುವಿನಿಂದ ತೊಂದರೆ ಅನುಭವಿಸುತ್ತಿದ್ದರು, ಹಾಗಾಗಿ ಆಕ್ಟೊಬರ್ 30ರ ನಂತರ ಇವರ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಇದರಿಂದ ಇವರು ಕೆಲಸ ಮತ್ತು ಬ್ಯುಸಿನೆಸ್ ಎರಡರಲ್ಲೂ ಯಶಸ್ವಿಯಾಗುತ್ತಾರೆ. ಎಲ್ಲಾ ಕೆಲಸದಲ್ಲೂ ಅದೃಷ್ಟ ಇವರ ಜೊತೆಗಿರುತ್ತದೆ.

ಕರ್ಕಾಟಕ ರಾಶಿ :- ರಾಹು ಮತ್ತು ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಈ ರಾಶಿಯವರಿಗೆ ಶುಭದಿನಗಳು ಶುರುವಾಗಲಿದೆ. ಈ ವೇಳೆ ನಿಮ್ಮ ಆರ್ಥಿಕ ಸ್ಥಿತಿ ಮೇಲೆ ಹೆಚ್ಚಿನ ಪಾಸಿಟಿವ್ ಆದ ಪ್ರಭಾವ ಬೀರಲಿದೆ. ನಿಮ್ಮ ಕೆಲಸ ಮತ್ತು ಬ್ಯುಸಿನೆಸ್ ಎರಡಲ್ಲು ಲಾಭ ನಿಮ್ಮದಾಗುತ್ತದೆ.

ಸಿಂಹ ರಾಶಿ :- ರಾಹು ಮತ್ತು ಕೇತು ಗ್ರಹದ ಸ್ಥಾನ ಬದಲಾವಣೆ ಇಂದ ಇವರಿಗೂ ಶುಭ ಘಳಿಗೆ ಶುರುವಾಗಲಿದೆ. ನವೆಂಬರ್ ಇಂದ ನಿಮ್ಮ ನೆಮ್ಮದಿ ಹಾಳು ಮಾಡುತ್ತಿದ್ದ ಎಲ್ಲಾ ಸಮಸ್ಯೆಗಳು ದೂರವಾಗಿ ಚಿನ್ನದಂಥ ಸಮಯ ಶುರುವಾಗುತ್ತದೆ. ಹಣಕಾಸಿನ ವಿಷಯದಲ್ಲೂ ನಿಮಗೆ ಅನುಕೂಲಕರವಾಗಿರುತ್ತದೆ.

ತುಲಾ ರಾಶಿ :- ರಾಹು ಮತ್ತು ಕೇತು ಗ್ರಹಗಳ ಸ್ಥಾನ ಬದಲಾವಣೆ ನಿಮ್ಮ ಬದುಕಿಗೂ ಒಳ್ಳೆಯ ಬದಲಾವಣೆಗಳನ್ನೇ ತರುತ್ತದೆ. ಇದು ದಂಪತಿಗಳಿಗೆ ಬಹಳ ಸಂತೋಷ ತರುವಂಥ ಸಮಯ. ಇನ್ನು ಮದುವೆ ಆಗದೆ ಇರುವವರಿಗೆ ಒಳ್ಳೆಯ ಸಂಬಂಧ ಕೂಡಿಬರುತ್ತದೆ. ಬೇರೆ ಕಡೆ ಸಿಕ್ಕಿಹಾಕಿಕೊಂಡಿರುವ ಹಣ ವಾಪಸ್ ನಿಮಗೆ ಸಿಗುತ್ತದೆ.

ಮೀನಾ ರಾಶಿ :- ರಾಹು ಮತ್ತು ಕೇತು ಗ್ರಹಗಳ ಸ್ಥಾನ ಬದಲಾವಣೆ ಇವರ ಬದುಕಿನಲ್ಲಿ ಹೊಸ ಅವಕಾಶಗಳನ್ನು ತಂದುಕೊಡುತ್ತದೆ. ಅರ್ಧಕ್ಕೆ ನಿಂತಿರುವ ಎಲ್ಲಾ ಕೆಲಸಗಳು ಪೂರ್ತಿಯಾಗುತ್ತದೆ. ಉದ್ಯೋಗದಲ್ಲಿ ಇರುವವರಿಗೆ ಪ್ರೊಮೋಷನ್ ಸಿಗಬಹುದು.

Leave A Reply

Your email address will not be published.