Darshan: ತರುಣ್ ಸುಧೀರ್ ಹುಟ್ಟುಹಬ್ಬಕ್ಕೆ ಭರ್ಜರಿ ಗಿಫ್ಟ್ ಕೊಟ್ಟ ಡಿಬಾಸ್, ಬೆಲೆ ಎಷ್ಟು ಗೊತ್ತಾ?

Written by Pooja Siddaraj

Published on:

Darshan: ನಟ ದರ್ಶನ್ ಅವರ ಒಳ್ಳೆತನದ ಬಗ್ಗೆ ವಿಶೇಷವಾಗಿ ಹೇಳುವ ಅವಶ್ಯಕತೆ ಇಲ್ಲ. ದರ್ಶನ್ ಅವರು ತೆರೆಮೇಲೆ ಹೇಗೆ ಹೀರೋ ಆಗಿದ್ದಾರೋ ತೆರೆ ಹಿಂದೆ ಕೂಡ ರಿಯಲ್ ಲೈಫ್ ಹೀರೋ. ಯಾರೇ ಕಷ್ಟದಲ್ಲಿದ್ದರು, ಆ ವಿಷಯ ದರ್ಶನ್ ಅವರಿಗೆ ಗೊತ್ತಾದರೆ, ಸಹಾಯ ಮಾಡದೆ ಸುಮ್ಮನೆ ಇರುವವರಲ್ಲ. ಹಾಗೆಯೇ ಸ್ನೇಹಿತರು ಎಂದರೆ ದರ್ಶನ್ ಅವರಿಗೆ ಬಹಳ ಪ್ರೀತಿ. ಫ್ರೆಂಡ್ಸ್ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಾರೆ.

ದರ್ಶನ್ ಅವರು ಫ್ರೆಂಡ್ಸ್ ಜೊತೆಗೆ ಟ್ರಿಪ್ ಹೋಗುವ ಫೋಟೋಗಳು ವೈರಲ್ ಆಗುತ್ತದೆ. ಸ್ನೇಹಿತರೊಡನೆ ಹೆಚ್ಚು ಎಂಜಾಯ್ ಮಾಡುವ ಡಿಬಾಸ್ ತಮ್ಮ ಬೆಸ್ಟ್ ಫ್ರೆಂಡ್ಸ್ ಗೆ ವಿಶೇಷ ಸಂದರ್ಭಗಳಲ್ಲಿ ಗಿಫ್ಟ್ ಕೂಡ ನೀಡುತ್ತಾರೆ. ಇದೀಗ ನಟ ದರ್ಶನ್ ಅವರು ತಮ್ಮ ಬೆಸ್ಟ್ ಫ್ರೆಂಡ್ ಗಳಲ್ಲಿ ಒಬ್ಬರಾದ ನಟ ಹಾಗೂ ನಿರ್ದೇಶಕ ತರುಣ್ ಸುಧೀರ್ ಅವರ ಹುಟ್ಟುಹಬ್ಬಕ್ಕೆ ಭರ್ಜರಿಯಾದ ಗಿಫ್ಟ್ ಒಂದನ್ನು ನೀಡಿದ್ದಾರೆ.

ಇತ್ತೀಚೆಗೆ ತರುಣ್ ಸುಧೀರ್ ಅವರು ಹುಟ್ಟುಹಬ್ಬ ಆಚರಿಸಿಕೊಂಡರು, ಇವರ ಹುಟ್ಟುಹಬ್ಬಕ್ಕೆ ದರ್ಶನ್ ಅವರು ಹಾರ್ಲಿ ಡೇವಿಡ್ಸನ್ X440 ಬೈಕ್ ಅನ್ನು ಗಿಫ್ಟ್ ಆಗಿ ನೀಡಿದ್ದಾರೆ. ದರ್ಶನ್ ಅವರ ಕಾಟೇರ ಸಿನಿಮಾವನ್ನು ತರುಣ್ ಸುಧೀರ್ ಅವರು ನಿರ್ದೇಶನ ಮಾಡುತ್ತಿದ್ದು, ಈ ಸಿನಿಮಾ ಶೂಟಿಂಗ್ ಈಗ ತಾವರೆಕೆರೆಯಲ್ಲಿ ನಡೆಯುತ್ತಿದೆ. ಶೂಟಿಂಗ್ ಸ್ಪಾಟ್ ಗೆ ಹಾರ್ಲಿ ಡೇವಿಡ್ಸನ್ ಬೈಕ್ ಹೋಗಿದೆ ಎಂದು ಮಾಹಿತಿ ಸಿಕ್ಕಿದೆ.

ಕಾಟೇರ ಸೆಟ್ ನಲ್ಲಿ ತರುಣ್ ಸುಧೀರ್ ಅವರ ಹುಟ್ಟುಹಬ್ಬವನ್ನು ಕೇಕ್ ಕಟ್ ಮಾಡುವ ಮೂಲಕ ಆಚರಣೆ ಮಾಡಲಾಗಿದೆ. ಅದರ ಜೊತೆಗೆ ಡಿಬಾಸ್ ದರ್ಶನ್ ಅವರು ಈ ಗಿಫ್ಟ್ ನೀಡಿದ್ದಾರೆ. ದರ್ಶನ್ ಹಾಗೂ ತರುಣ್ ಅವರನ್ನು ಬಹಳಷ್ಟು ವರ್ಷಗಳ ಸ್ನೇಹ. ದರ್ಶನ್ ಅವರ ತಮ್ಮ ದಿನಕರ್ ನಿರ್ದೇಶನ ಮಾಡಿದ ನವಗ್ರಹ ಸಿನಿಮಾದಲ್ಲಿ ತರುಣ್ ಅವರು ದರ್ಶನ್ ಅವರೊಡನೆ ನಟಿಸಿದ್ದರು. ತರುಣ್ ಅವರು ನಿರ್ದೇಶನ ಮಾಡಿದ ಮೊದಲ ಸಿನಿಮಾ ಚೌಕ.

ಈ ಸಿನಿಮಾದಲ್ಲಿ ದರ್ಶನ್ ಅವರು ಅತಿಥಿ ಪಾತ್ರದಲ್ಲಿ ನಟಿಸಿದ್ದರು. ದರ್ಶನ್ ಅವರ ರಾಬರ್ಟ್ ಸಿನಿಮಾ ನಿರ್ದೇಶನ ಮಾಡಿದ್ದು ತರುಣ್ ಸುಧೀರ್, ರಾಬರ್ಟ್ ಸೂಪರ್ ಹಿಟ್ ಆಗಿತ್ತು. ಈ ಹಿಟ್ ಜೋಡಿ ಮತ್ತೊಮ್ಮೆ ಕಾಟೇರ ಸಿನಿಮಾ ಮೂಲಕ ಒಂದಾಗಿದೆ. ಕಾಟೇರ ಸಿನಿಮಾವನ್ನು ಶೀಘದಲ್ಲೇ ತೆರೆಮೇಲೆ ತರುವ ಎಲ್ಲಾ ತಯಾರಿ ನಡೆಯುತ್ತಿದೆ.

Leave a Comment