Prabhas: ಇಂಗ್ಲೆಂಡ್ ನಲ್ಲಿ ಐಷಾರಾಮಿ ಮನೆ ಖರೀದಿ ಮಾಡಿದ ನಟ ಪ್ರಭಾಸ್!

0 89

Prabhas: ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಂಡಿರುವ ಬಾಹುಬಲಿ ಸಿನಿಮಾ ನಟ ಪ್ರಭಾಸ್ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ನಟಿಸುತ್ತಾ ಬ್ಯುಸಿ ಆಗಿದ್ದಾರೆ. ಸಿನಿಮಾಗಳಲ್ಲಿ ಹೆಚ್ಚು ತೊಡಗಿಸಿಕೊಂಡಿರುವ ನಟನ ಬಗ್ಗೆ ಇದೀಗ ಒಂದು ವಿಚಾರ ಕೇಳಿ ಬರುತ್ತಿದೆ. ಅದೇನೆಂದರೆ ಪ್ರಭಾಸ್ ಅವರು ದೂರದ ಇಂಗ್ಲೆಂಡ್ ನಲ್ಲಿ ಸ್ವಂತ ಮನೆ ಖರೀದಿ ಮಾಡಿದ್ದಾರೆ ಎನ್ನುವ ಮಾತು ಕೇಳಿಬರುತ್ತಿದೆ..

ನಟ ಪ್ರಭಾಸ್ ಅವರು ಈಗ ಅವರ ಸಿನಿಮಾ ಗೆದ್ದಿರುವ ಸಂತೋಷದಲ್ಲಿದ್ದಾರೆ. ಪ್ರಭಾಸ್ ಅವರು ನಟಿಸಿ, ಪ್ರಶಾಂತ್ ನೀಲ್ ಅವರು ನಿರ್ದೇಶನ ಮಾಡಿರುವ ಸಲಾರ್ ಭಾಗ1 ಡಿಸೆಂಬರ್ 22 ರಂದು ಬಿಡುಗಡೆಯಾಗಿ 400 ಕೋಟಿಗಿಂತ ಹೆಚ್ಚು ಹಣಗಳಿಕೆ ಮಾಡಿ, ಭಾರಿ ಸೆನ್ಸೇಷನ್ ಸೃಷ್ಟಿಸಿದೆ. ಈ ಸಿನಿಮಾ ಪ್ರಭಾಸ್ ಅವರಿಗೆ ದೊಡ್ಡ ಕಂಬ್ಯಾಕ್ ಎಂದು ಹೇಳಿದರೆ ತಪ್ಪಲ್ಲ. ಇದರ ಜೊತೆಗೆ ಪ್ರಭಾಸ್ ಅವರು ತಮ್ಮ ಬೇರೆ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಆಗಿದ್ದಾರೆ..

ಆದರೆ ಇತ್ತೀಚೆಗೆ ಪ್ರಭಾಸ್ ಅವರಿಗೆ ಆಪರೇಷನ್ ಅಗಬೇಕಿದ್ದ ಕಾರಣ ಚಿಕಿತ್ಸೆಗಾಗಿ ಅವರು ಹೊರದೇಶಕ್ಕೆ ಹೋಗಿದ್ದಾರೆ ಲಂಡನ್ ನಲ್ಲಿ ಪ್ರಭಾಸ್ ಅವರು ಬಾಡಿಗೆ ಮನೆಯಲ್ಲಿದ್ದು ಚಿಕಿತ್ಸೆ ಪಡೆಯುತ್ತಿದ್ದು, ಸಧ್ಯಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಅವರ ಮನೆಗೆ ಕೊಡುತ್ತಿರುವ ಬಾಡಿಗೆಯನ್ನು ಭಾರತದ ಕರೆನ್ಸಿಯಲ್ಲಿ ಹೇಳಿದರೆ, ತಿಂಗಳಿಗೆ 60 ಲಕ್ಷ ರೂಪಾಯಿ ಆಗಿದೆ. ಹಾಗಾಗಿ ಪ್ರಭಾಸ್ ಅವರು ಇಂಗ್ಲೆಂಡ್ ನಲ್ಲಿ ಸ್ವಂತ ಮನೆ ಖರೀದಿ ಮಾಡಬೇಕು ಅಂದುಕೊಂಡಿದ್ದಾರೆ.

ಪ್ರಸ್ತುತ ತಾವು ಬಾಡಿಗೆಗೆ ಇರುವ ಮನೆಯನ್ನೇ ಖರೀದಿ ಮಾಡಬೇಕು ಎಂದು ಪ್ರಭಾಸ್ ಅವರು ಬಯಸಿದ್ದು, ಅದಕ್ಕಾಗಿ ಅಡ್ವಾನ್ಸ್ ಪೇಮೆಂಟ್ ಕೂಡ ಮಾಡಿದ್ದಾರಂತೆ. ಕಂತುಗಳನ್ನು ಹಣವನ್ನು ನೀಡಿ, ಮನೆ ಖರೀದಿ ಮಾಡಿಕೊಳ್ಳಲಿದ್ದಾರಂತೆ ಪ್ರಭಾಸ್. ಒಟ್ಟಿನಲ್ಲಿ ನಮ್ಮ ದೇಶದಲ್ಲಿ ಮಾತ್ರವಲ್ಲದೇ, ಹೊರದೇಶದಲ್ಲಿ ಕೂಡ ಸ್ವಂತ ಮನೆ ಹೊಂದಿರುವ ನಟ ಆಗಿದ್ದಾರೆ ಪ್ರಭಾಸ್ ಅವರು. ಇದೀಗ ಈ ವಿಚಾರ ವೈರಲ್ ಆಗಿದೆ.

Leave A Reply

Your email address will not be published.