Srujan Lokesh: ನನ್ನಮ್ಮ ಸೂಪರ್ ಸ್ಟಾರ್ ಆಂಕರ್ ಗೆ ಪೇಮೆಂಟ್ ಕೊಟ್ಟಿಲ್ವಂತೆ ಸೃಜನ್ ಲೋಕೇಶ್! ಏನಿದು ಆರೋಪ!

0 75

Srujan Lokesh: ನನ್ನಮ್ಮ ಸೂಪರ್ ಸ್ಟಾರ್ ಕಲರ್ಸ್ ಕನ್ನಡ ವಾಹಿನಿಯಲ್ಲಿ ಖ್ಯಾತಿ ಪಡೆದಿರುವ ರಿಯಾಲಿಟಿ ಶೋ. ಈ ಶೋ ಎಲ್ಲಾ ಮಕ್ಕಳಿಗೆ ಮತ್ತು ದೊಡ್ಡವರಿಗೆ ಎಲ್ಲರಿಗೂ ಬಹಳ ಇಷ್ಟ ಎಂದರೆ ತಪ್ಪಲ್ಲ. ಇತ್ತೀಚೆಗೆ ನನ್ನಮ್ಮ ಸೂಪರ್ ಸ್ಟಾರ್ ಸೀಸನ್ 3 ಶುರುವಾಗಿದೆ, ಫೆಬ್ರವರಿ 3ರಂದು ಹೊಸ ಅಮ್ಮಂದಿರು ಮತ್ತು ಮಕ್ಕಳ ಜೊತೆಗೆ ಶೋ ಶುರುವಾಗಿದೆ.

ಬಿಗ್ ಬಾಸ್ ಮುಗಿದ ನಂತರ ಈ ಶೋ ಏನೋ ಶುರುವಾಗುತ್ತಿದೆ. ಎಂದಿನಂತೆ ಸೃಜನ್ ಲೋಕೇಶ್, ನಟಿ ತಾರಾ ಹಾಗೂ ನಟಿ ಅನು ಪ್ರಭಾಕರ್ ಮೂವರು ಜಡ್ಜ್ ಆಗಿ ಬಂದಿದ್ದಾರೆ. ಇನ್ನು ಕಾರ್ಯಕ್ರಮದ ನಿರೂಪಕಿಯಾಗಿ ನಟಿ ಸುಶ್ಮಾ ಬಂದಿದ್ದಾರೆ. ಭಾಗ್ಯಲಕ್ಷ್ಮಿ ಧಾರವಾಹಿಯಲ್ಲಿ ನಟಿಸುತ್ತಿದ್ದು ಜೊತೆಗೆ ನಿರೂಪಕಿಯಾಗಿ ಬಂದಿದ್ದಾರೆ. ಹಳೆಯ ಕನ್ನಡದ ಕಿರುತೆರೆ ನಟಿ ನಯನಾ ಕಾವೇರಪ್ಪ ಹಾಗೂ ಇನ್ನಿತರರು ಬಂದಿದ್ದಾರೆ.

ಇದೀಗ ಸೃಜನ್ ಲೋಕೇಶ್ ಅವರ ಮೇಲೆ ಜಡ್ಜ್ ಆಗಿರುವ ನಟಿ ತಾರಾ ಅವರು ಸೃಜನ್ ಲೋಕೇಶ್ ಅವರು ಆಂಕರ್ ಗೆ ಪೇಮೆಂಟ್ ಕೊಟ್ಟಿಲ್ಲ ಎಂದಿದ್ದಾರೆ. ಅಷ್ಟಕ್ಕೂ ಇದು ನಿಜವಂತು ಅಲ್ಲ ಎಪಿಸೋಡ್ ನಡೆಯುವಾಗ ಸೃಜನ್ ಲೋಕೇಶ್ ಅವರನ್ನು ರೇಗಿಸಲು, ತಾರಾ ಅವರು ಮತ್ತು ಸುಷ್ಮಾ ಅವರು ಈ ರೀತಿ ಹೇಳಿ ತಮಾಷೆ ಮಾಡಿದ್ದರು. ನನ್ನಮ್ಮ ಸೂಪರ್ ಸ್ಟಾರ್ ಶೋ ಆಂಕರ್ ಗೆ ಇನ್ನು ಪೇಮೆಂಟ್ ಕೊಟ್ಟಿಲ್ಲ ಎಂದು ಸೃಜನ್ ಅವರ ಕಾಲೆಳೆದಿದ್ದರು.

ಈ ವಿಡಿಯೋ ಸಹ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಸೃಜನ್ ಅವರು ಆಂಕರ್ ಗೆ ಸಂಬಳ ಕೊಟ್ಟಿಲ್ವಾ ಎಂದು ತಮಾಷೆ ಕೂಡ ಮಾಡಲಾಗಿತ್ತು.

Leave A Reply

Your email address will not be published.