Pankaj Udhas : ಬರೆಯದ ಮೌನದ ಕವಿತೆ ಹಾಡಿನ ಗಾಯಕ ಪಂಕಜ್ ಉಧಾಸ್ ಇನ್ನಿಲ್ಲ!

0 75

Pankaj Udhas : ಚಿತ್ರರಂಗಕ್ಕೆ ಒಂದರ ನಂತರ ಒಂದು ಆಘಾತಗಳು ಸಂಭವಿಸುತ್ತಲೇ ಇದೆ. ಚಿತ್ರರಂಗದ ಗಣ್ಯರ ಅಗಲಿಕೆಯಿಂದ ಚಿತ್ರರಂಗ ಕಂಬನಿ ಮಿಡಿಯುತ್ತಿದೆ. ಇಂಥದ್ದೊಂದು ಘಟನೆ ಮತ್ತೆ ನಡೆದಿದ್ದು, ಹಿಂದಿಯ ಖ್ಯಾತ ಗಾಯಕ ಪಂಕಜ್ ಉಧಾಸ್ ಅವರು ನಿನ್ನೆ ವಿಧಿವಶರಾಗಿದ್ದಾರೆ. ಇಡೀ ಚಿತ್ರರಂಗ ಇವರಿಗಾಗಿ ಕಂಬನಿ ಮಿಡಿದಿದೆ. .

ಹಲವು ಹಿಂದಿ ಸಿನಿಮಾಗಳಲ್ಲಿ ಹಾಡಿದ್ದ ಪಂಕಜ್ ಉಧಾಸ್ ಅವರು ಕನ್ನಡದಲ್ಲಿ ಹಾಡಿದ್ದು ಒಂದೆರಡು ಹಾಡುಗಳು ಮಾತ್ರ, ಆದರೆ ಈ ಎರಡು ಹಾರುಗಳು ಕೂಡ ಇಂದಿಗೂ ಸಿನಿಪ್ರಿಯರ ಹೃದಯದಲ್ಲಿ ಅಚ್ಚಳಿಯದೇ ಹಾಗೆ ಉಳಿದಿದೆ. ಕಿಚ್ಚ ಸುದೀಪ್ ಅವರು, ಸುಧಾರಾಣಿ ಅವರು, ರೇಖಾ ಅವರು ಮುಖ್ಯ ಪಾತ್ರಗಳಲ್ಲಿ ನಟಿಸಿರುವ ಸ್ಪರ್ಶ ಸಿನಿಮಾದಲ್ಲಿ ಎರಡು ಹಾಡುಗಳನ್ನು ಪಂಕಜ್ ಅವರು ಹಾಡಿದ್ದಾರೆ.

ಬರೆಯದ ಮೌನದ ಕವಿತೆ ಮತ್ತು ಚಂದಕ್ಕಿಂತ ಚಂದ ನೀನೇ ಸುಂದರ.. ಈ ಎರಡು ಹಾಡುಗಳನ್ನ ಹಾಡಿದ್ದು ಪಂಕಜ್ ಅವರೇ. ಈ ಹಾಡುಗಳು ಈಗಲೂ ಪ್ಲೇಲಿಸ್ಟ್ ನಲ್ಲಿದೆ. ಇಂಥ ಸುಮಧುರ ಕಂಠ ಹೊಂದಿದ್ದ ಪಂಕಜ್ ಉಧಾಸ್ ಅವರು ನಿನ್ನೆ ಸಂಜೆ ಮುಂಬೈನಲ್ಲಿ ವಿಧಿವಶರಾಗಿದ್ದಾರೆ. ಪಂಕಜ್ ಅವರಿಗೆ ಈಗ 72 ವರ್ಷ ವಯಸ್ಸಾಗಿತ್ತು..

ವಯೋಸಹಜ ಆರೋಗ್ಯ ಸಮಸ್ಯೆ ಇಂದ ಬಳಲುತ್ತಿದ್ದ ಅವರು ನಿನ್ನೆ ಇಹಲೋಕ ತ್ಯಜಿಸಿದ್ದಾರೆ. ಪಂಕಜ್ ಉಧಾಸ್ ಅವರ ನಿಧನಕ್ಕೆ ಚಿತ್ರರಂಗದ ಗಣ್ಯರು ಕಂಬನಿ ಮಿಡಿದಿದ್ದಾರೆ.

Leave A Reply

Your email address will not be published.