Nayanthara: ಎಲ್ಲಾ ಸ್ಟಾರ್ಸ್ ಜೊತೆ ನಟಿಸಿರುವ ನಯನತಾರ 100 ಕೋಟಿ ಕೊಟ್ರು ಆಟನೊಬ್ಬನ ಜೊತೆಗೆ ನಟಿಸಲ್ಲ ಅಂದಿದ್ರಂತೆ!

0 98

Nayanthara: ಸೌತ್ ಇಂಡಿಯನ್ ಸಿನಿಮಾದ ಲೇಡಿ ಸೂಪರ್ ಸ್ಟಾರ್ ನಯನತಾರ ಅವರು ಅತಿಹೆಚ್ಚು ಬೇಡಿಕೆ ಇರುವ, ಸೌತ್ ಇಂಡಿಯನ್ ಸಿನಿಮಾದಲ್ಲಿ ಅತಿಹೆಚ್ಚು ಸಂಭಾವನೆ ಪಡೆಯುವ ನಟಿ ಆಗಿದ್ದಾರೆ. ನಯನತಾರ ಅವರು ಮದುವೆಯಾದ ಮೇಲೆ ಕೂಡ ಅವರಿಗೆ ಇರುವ ಬೇಡಿಕೆ ಮಾತ್ರ ಕಡಿಮೆ ಆಗಿಲ್ಲ. ಆದರೆ ನಯನತಾರ ಅವರು 100 ಕೋಟಿ ಕೊಟ್ರು ಕೂಡ ಆ ಒಬ್ಬ ನಟನ ಜೊತೆಗೆ ಸಿನಿಮಾ ಮಾಡಲ್ಲ ಅಂದಿದ್ರಂತೆ..

ನಟಿ ನಯನತಾರ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು ಎರಡು ದಶಕವೇ ಕಳೆದು ಹೋಗುತ್ತಿದೆ. ತಮಿಳು, ತೆಲುಗು ಮತ್ತು ಮಲಯಾಳಂ ಭಾಷೆಗಳಲ್ಲಿ ಹೆಚ್ಚಾಗಿ ನಟಿಸುವ ನಯನತಾರ ಅವರು ಕನ್ನಡದಲ್ಲಿ ಉಪೇಂದ್ರ ಅವರೊಡನೆ ಸೂಪರ್ ಸಿನಿಮಾದಲ್ಲಿ ನಟಿಸಿದರು. ಇನ್ನು ಬಾಲಿವುಡ್ ಗೆ ಕಳೆದ ವರ್ಷ ಜವಾನ್ ಸಿನಿಮಾ ಮೂಲಕ ಎಂಟ್ರಿ ಕೊಟ್ಟರು. ಎಲ್ಲಾ ಕಡೆ ಇವರದ್ದೇ ಹವಾ ಎಂದರೆ ತಪ್ಪಲ್ಲ..

ನಯನತಾರ ಅವರು ಬ್ಯಾಕ್ ಟು ಬ್ಯಾಕ್ ಸಿನಿಮಾಗಳಲ್ಲಿ ಬ್ಯುಸಿ ಆಗಿದ್ದಾರೆ. ಇವರು ನಿರ್ದೇಶಕ ವಿಘ್ನೇಶ್ ಶಿವನ್ ಅವರೊಡನೆ ಮದುವೆಯಾಗಿ, ಇಬ್ಬರು ಮಕ್ಕಳನ್ನು ಪಡೆದಿದ್ದಾರೆ ಎನ್ನುವುದು ಗೊತ್ತೇ ಇದೆ. ಅವಳಿ ಗಂಡು ಮಕ್ಕಳಿಗೆ ಉಯಿರ್, ಉಲಗ್ ಎಂದು ಹೆಸರಿಟ್ಟಿದ್ದಾರೆ. ಸಿನಿಮಾ ಜೊತೆಗೆ ಹೆಚ್ಚಿನ ಸಮಯವನ್ನು ಮಕ್ಕಳ ಜೊತೆಗೆ ಕಳೆಯುತ್ತಿದ್ದಾರೆ ನಯನ್. ಫ್ಯಾಮಿಲಿಗೆ ಹೆಚ್ಚು ಸಮಯ ಕೊಡುತ್ತಾರೆ.

ನಯನತಾರ ಅವರು ಬ್ಯುಸಿನೆಸ್ ಲೆಜೆಂಡ್ ಸರವಣನ್ ಅವರ ಸಿನಿಮಾದಲ್ಲಿ ನಟಿಸಬೇಕು ಎಂದು ಕೇಳಿಕೊಂಡಿದ್ದರಂತೆ, ನಯನತಾರ ಅವರ ಫ್ಲ್ಯಾಟ್ ಇರುವ ಜಾಗಕ್ಕೆ ಸರವಣನ್ ಅವರೇ ಹೋಗಿ, ನಯನತಾರ ಅವರು ಒಂದು ಸಿನಿಮಾಗೆ 10 ಕೋಟಿ ಸಂಭಾವನೆ ಪಡೆಯುತ್ತಾರೆ, ಆದರೆ ಸರವಣನ್ ಅವರು ದುಪ್ಪಟ್ಟು ಸಂಭಾವನೆ ಕೊಡುತ್ತೇವೆ ಎಂದು ಕೂಡ ಹೇಳಿದರಂತೆ. ಆದರೆ ನಾಯನತಾರ ಅವರು 100 ಕೋಟಿ ಸಂಭಾವನೆ ಕೊಟ್ರು, ಅವರ ಜೊತೆಗೆ ನಟಿಸೋದಿಲ್ಲ ಎಂದು ಹೇಳಿದರಂತೆ.

ಅದೇ ಹಠಕ್ಕೆ ಬಿದ್ದ ಸರವಣನ್ ಅವರು, ನಯನತಾರ ಅವರ ಥರದ ನಟಿಯನ್ನೇ ಹುಡುಕಿ ತರ್ತೀನಿ ಎಂದು ಹೇಳಿ, ಆಡಿಷನ್ ಮಾಡಿ, ಕೊನೆಗೆ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿಕೊಂಡರು. ಆದರೆ ನಯನತಾರ ಅವರು ಆ ಸಿನಿಮಾದಲ್ಲಿ ನಟಿಸಬೇಕಿತ್ತು ಎನ್ನುವ ವಿಷಯ, ಇದೀಗ ವೈರಲ್ ಆಗಿದೆ.

Leave A Reply

Your email address will not be published.