Neethu Vanajakshi: ಬಿಗ್ ಬಾಸ್ ಮನೆಗೆ ಈ ಸೀಸನ್ ನಲ್ಲಿ ತೃತೀಯ ಲಿಂಗಿ ಆಗಿರುವ ನೀತು ವನಜಾಕ್ಷಿ ಅವರು ಎಂಟ್ರಿ ಕೊಟ್ಟಿದ್ದಾರೆ. ನೀತು ಅವರ ತಮ್ಮ ಸಮುದಾಯದ ಬಗ್ಗೆ ಅರಿವು ಮೂಡಿಸಬೇಕು ಎನ್ನುವ ಒಳ್ಳೆಯ ಉದ್ದೇಶದಿಂದ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ. ಮೊದಲ ವಾರ ನಾಮಿನೇಟ್ ಆಗಿದ್ದ ನೀತು ಅವರು ನಾಮಿನೇಷನ್ ಇಂದ ಸೇವ್ ಆಗಿದ್ದು, ಈ ವಾರ ನಾಮಿನೇಟ್ ಆಗಿಯೇ ಇಲ್ಲ. ಇದೀಗ ನೀತು ಅವರು ಹುಡುಗ ಆಗಿದ್ದಾಗಿನ ಫೋಟೋಗಳು ವೈರಲ್ ಆಗಿವೆ.
ನೀತು ವನಜಾಕ್ಷಿ ಅವರು ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ಉದ್ಯಮಿಯಾಗಿ ಮಾಡೆಲ್ ಆಗಿ ಸಿಕ್ಕಾಪಟ್ಟೆ ಹೆಸರು ಮಾಡಿದ್ದಾರೆ. ಮೊದಲಿಗೆ ಟ್ಯಾಟೂ ಆರ್ಟಿಸ್ಟ್ ಆಗಿದ್ದ ನೀತು ಅವರು ಬಳಿಕ ತಮ್ಮದೇ ಆದ ಪಾರ್ಲರ್ ಬ್ಯುಸಿನೆಸ್ ಶುರು ಮಾಡಿದರು, ನಂತರ ಊಟದ ಬ್ಯುಸಿನೆಸ್ ಕೂಡ ಶುರು ಮಾಡಿದ್ದಾರೆ. ಬಹಳಷ್ಟು ಜನರಿಗೆ ಸ್ಫೂರ್ತಿಯಾಗಿದ್ದಾರೆ. ನೀತು ಅವರು ತಾವು ತೃತೀಯ ಲಿಂಗಿ ಆಗಿದ್ದು ಹೇಗೆ ಎನ್ನುವ ಕಥೆಯನ್ನು ಬಿಗ್ ಬಾಸ್ ಮನೆಯೊಳಗೆ ಕೂಡ ಹೇಳಿಕೊಂಡಿದ್ದರು.
ಹುಡುಗನಾಗಿ ಹುಟ್ಟಿದ ಅವರಿಗೆ ಮಂಜುನಾಥ್ ಎಂದು ಹೆಸರನ್ನು ಇಡಲಾಗಿತ್ತು, 7ನೇ ತರಗತಿಯಲ್ಲಿದ್ದ ಮಂಜು ಅವರಿಗೆ ತಮ್ಮಲ್ಲಾಗುತ್ತಿದ್ದ ಬದಲಾವಣೆಯ ಅರಿವಾಗಿತ್ತು. ಹುಡುಗರ ಮೇಲೆ ಹೆಚ್ಚು ಆಕರ್ಷಣೆಗೆ ಒಳಗಾಗುತ್ತಿದ್ದೇನೆ ಎಂದು ಅನ್ನಿಸಿ, ತಮ್ಮನ್ನು ತಾವು ಆಕ್ಸೆಪ್ಟ್ ಮಾಡಿಕೊಂಡಾಗ ಮಂಜುನಾಥ್ ಅವರಿಗೆ ತುಂಬಾ ಭಯ ಆಗಿತ್ತಂತೆ. ಮೊದಲು ಅವರಿಗೆ ಸಪೋರ್ಟ್ ಮಾಡಿದ್ದು ಅವರ ಅಕ್ಕ. ನಂತರ ಅವರ ತಾಯಿಗೂ ವಿಷಯ ಗೊತ್ತಾಯಿತು.
ತಾಯಿ ತಮ್ಮ ಮಗ ಹೀಗೆ ಬದಲಾಗುತ್ತಿದ್ದಾರೆ ಎಂದು ಮಗನನ್ನ ದೂರ ಮಾಡದೆ, ಮಗನಿಗೆ ಸಪೋರ್ಟ್ ಮಾಡಿದರೆ. ತಾಯಿಯ ಸಪೋರ್ಟ್ ಸಿಕ್ಕಿದ ಕಾರಣವೇ ನೀತು ವನಜಾಕ್ಷಿ ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ. ತಾವು ನೀತು ಎಂದು ಹೆಸರು ಬದಲಾಯಿಸಿಕೊಂಡು, ತಮ್ಮ ತಾಯಿಯ ಹೆಸರಾಗಿರುವ ವನಜಾಕ್ಷಿ ಎನ್ನುವ ಹೆಸರನ್ನು ತಮ್ಮ ಹೆಸರಿನ ಜೊತೆಗೆ ಸೇರಿಸಿಕೊಂಡಿದ್ದಾರೆ. ಇಂದು ಇಷ್ಟು ಎತ್ತರಕ್ಕೆ ಬೆಳೆದಿದ್ದಾರೆ ನೀತು.

ಇನ್ನು ಬಿಗ್ ಬಾಸ್ ಮನೆಯಲ್ಲಿ ಕೂಡ ನೀತು ಅವರು ಉತ್ತಮ ಸ್ಪರ್ಧಿಯಾಗಿ ಮುಂದುವರೆದಿದ್ದಾರೆ. ತಮಗೆ ಸಿಗುವ ಅವಕಾಶಗಳನ್ನು ಸರಿಯಾಗಿ ಬಳಸಿಕೊಂಡು ನೀತು ಅವರು ಉತ್ತಮವಾಗಿ ಪರ್ಫಾರ್ಮ್ ಮಾಡುತ್ತಿದ್ದಾರೆ. ಇನ್ನು ಹೆಚ್ಚು ದಿನಗಳ ಕಾಲ ಬಿಗ್ ಬಾಸ್ ಮನೆಯಲ್ಲಿ ಉಳಿಯುವ ವಿಶ್ವಾಸ ಹೊಂದಿದ್ದಾರೆ ನೀತು.