Ramola: ನಟ ರಿಚ್ಚಿ ಮೇಲೆ ಹಲ್ಲೆ ಮಾಡಿದ ಕನ್ನಡತಿ ಖ್ಯಾತಿಯ ರಾಮೋಲಾ ಮತ್ತು ಅವರ ತಾಯಿ, ಅಸಲಿ ಕಥೆ ಏನು ಗೊತ್ತಾ?

Written by Pooja Siddaraj

Published on:

Ramola:ಚಿತ್ರರಂಗ ಮತ್ತು ಕಿರುತೆರೆ ಈ ಎರಡರಲ್ಲೂ ನಡೆಯುವ ಕೆಲವು ಘಟನೆಗಳು ಶಾಕ್ ನೀಡುತ್ತದೆ. ಇಲ್ಲಿ ಎಲ್ಲವೂ ಒಳ್ಳೆಯದೇ ನಡೆಯುತ್ತದೆ, ಎಲ್ಲರಿಗೂ ಒಳ್ಳೆಯದೇ ಆಗುತ್ತದೆ ಎಂದು ಹೇಳಲು ಅಸಾಧ್ಯ. ಕೆಲವೊಮ್ಮೆ ಕಲಾವಿದರ ಮಧ್ಯೆ ಇರುವ ಭಿನ್ನಾಭಿಪ್ರಾಯದ ಕಾರಣ ತಪ್ಪುಗಳು ನಡೆದು ಹೋಗಬಹುದು. ಇದೀಗ ಅಂಥದ್ದೇ ಒಂದು ಘಟನೆ ನಡೆದಿದೆ. ಕಿರುತೆರೆ ನಟಿ ರಾಮೋಲಾ ನಟ ರಿಚ್ಚಿ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಮಾಹಿತಿ ಸಿಕ್ಕಿದೆ.

ಇವರಿಬ್ಬರ ಮಧ್ಯೆ ಸಿನಿಮಾ ಶೂಟಿಂಗ್, ಕಾಲ್ ಶೀಟ್ ವಿಚಾರಕ್ಕೆ ಜಗಳವಾಗಿದೆ. ರಿಚ್ಚಿ ಸಿನಿಮಾವನ್ನು ರಿಚ್ಚಿ ಅವರೇ ನಟಿಸಿ, ನಿರ್ದೇಶಿಸಿ, ನಿರ್ಮಾಣ ಸಹ ಮಾಡುತ್ತಿದ್ದಾರೆ. ಸಿನಿಮಾದಲ್ಲಿ ರಾಮೋಲಾ ಅವರು ನಟಿಸುತ್ತಿದ್ದು, ಕಾಲ್ ಶೀಟ್ ಕೊಡದೆ ತೊಂದರೆ ಕೊಡುತ್ತಿದ್ದಾರೆ ಎಂದು ರಿಚ್ಚಿ ಆರೋಪ ಮಾಡಿದ್ದಾರೆ. ಇವರಿಬ್ಬರ ಜಗಳ ಯಾವ ಹಂತಕ್ಕೆ ಹೋಗಿದೆ ಎಂದರೆ, ಇಬ್ಬರ ನಡುವೆ ಮಾತು ಹೆಚ್ಚಾಗಿ ಹಲ್ಲೆ ಮಾಡುವ ಮಟ್ಟಕ್ಕೆ ಹೋಗಿದ್ದಾರೆ .

ಈ ಬಗ್ಗೆ ಮಾತನಾಡಿರುವ ರಿಚ್ಚಿ,”ಕಳೆದ ವರ್ಷವೇ ಅಗ್ರಿಮೆಂಟ್ ಮಾಡಿಕೊಳ್ಳಲಾಗಿತ್ತು. ನಾನು ಅವರ ಪಿಜಿ ಬ್ಯುಸಿನೆಸ್ ಪಾರ್ಟ್ನರ್ಶಿಪ್ ಗೆ ಒಪ್ಪಲಿಲ್ಲ, ಅದಕ್ಕೆ ಕಾಲ್ ಶೀಟ್ ಕೊಡದೇ ತೊಂದರೆ ಮಾಡುತ್ತಿದ್ದಾರೆ. 10 ರಿಂದ 12 ದಿನಗಳ ಕಾಲ ಈಗಾಗಲೇ ಶೂಟಿಂಗ್ ಮಾಡಿದ್ದೀವಿ, ಇನ್ನು 2 ದಿನ ಕಾಲ್ ಶೀಟ್ ಇದೆ. ಅವರ ಸಂಭಾವನೆಯನ್ನು ಕ್ಲಿಯರ್ ಮಾಡಿದ್ದೇವೆ, ಹಾಗಿದ್ದರು ಅವರು ಕಾಲ್ ಶೀಟ್ ಕೊಡುತ್ತಿಲ್ಲ. ” ಎಂದು ರಿಚ್ಚಿ ಹೇಳಿದ್ದಾರೆ.

ಬೆಂಗಳೂರಿನ, ಗಾಂಧೀನಗರದ ಕಾನಿಷ್ಕ ಹೋಟೆಲ್ ಹತ್ತಿರ ಇರುವ ಲಾಯರ್ ಆಫೀಸ್ ನಲ್ಲಿ ಇವರಿಬ್ಬರ ಭಿನ್ನಾಭಿಪ್ರಾಯದಿಂದ ಜಗಳ ಶುರುವಾಗಿದ್ದು, ಮಾತಿಗೆ ಮಾತು ಬೆಳೆದು, ಹಲ್ಲೆ ಆಗುವವರೆಗೂ ಹೋಗಿದೆ. ಈ ಘಟನೆ ಬಗ್ಗೆ ಇದೀಗ ರಾಮೋಲಾ ಅವರು ಕೂಡ ಪ್ರತಿಕ್ರಿಯೆ ನೀಡಿದ್ದಾರೆ. “ಈ ಘಟನೆ ಬಗ್ಗೆ ಈಗ ನಾನು ರಿಯಾಕ್ಟ್ ಮಾಡುವುದಿಲ್ಲ. ಅವರ ತಂಡದ ಜೊತೆಗೆ ಆಗಿರುವ ಅಗ್ರಿಮೆಂಟ್ ಒಂದು ವರ್ಷದ ಹಿಂದೆಯೇ ಮುಗಿದು ಹೋಗಿದೆ.

ಮೂರು ವರ್ಷದಿಂದ ಅವರು ಶೂಟಿಂಗ್ ಮಾಡ್ತಾನೆ ಇದ್ದಾರೆ. 6 ತಿಂಗಳ ಅವಧಿಗೆ ಒಂದು ದಿನ ಶೂಟಿಂಗ್ ಮಾಡುತ್ತಾರೆ. ಅವರ ಸಿನಿಮಾದಲ್ಲಿ ಕನ್ನಡದ ಬೇರೆ ಕಲಾವಿದರಿಗೆ ಟಾಂಗ್ ಕೊಡುವಂಥ ಡೈಲಾಗ್ ಗಳು ಇವೆ, ಅದರಿಂದ ನನ್ನ ಕೆರಿಯರ್ ಮೇಲೆ ಪರಿಣಾಮ ಬೀರುತ್ತದೆ. ಇದೆಲ್ಲಾ ಮಾಡ್ತಿರೋದು ಪ್ರಚಾರಕ್ಕೆ ಅಷ್ಟೇ..” ಎಂದು ಹೇಳಿದ್ದಾರೆ ನಟಿ ರಾಮೋಲಾ.

Leave a Comment