Sonu Srinivas: ಇನ್ಸ್ಟಾಗ್ರಾಮ್ ಇಂದ ವೈರಲ್ ಆಗಿರುವ ಸೋನು ಶ್ರೀನಿವಾಸ್ ಗೌಡ ಅವರ ತಿಂಗಳ ಆದಾಯ ಎಷ್ಟು ಲಕ್ಷ ಗೊತ್ತಾ?

0 34

Sonu Srinivas: ಸೋನು ಶ್ರೀನಿವಾಸ್ ಗೌಡ ಸೋಷಿಯಲ್ ಮೀಡಿಯಾ ಮೂಲಕವೇ ಫೇಮಸ್ ಆದ ಹುಡುಗಿ. ಟಿಕ್ ಟಾಕ್ ವಿಡಿಯೋ ಮಾಡುತ್ತಾ ಫೇಮಸ್ ಆಗಿದ್ದ ಸೋನು ಬಳಿಕ ಇನ್ಸ್ಟಾಗ್ರಾಮ್ ರೀಲ್ಸ್ ಮೂಲಕ ಫೇಮಸ್ ಆದರು. ಇನ್ಸ್ಟಾಗ್ರಾಮ್ ನಲ್ಲಿ ಲಕ್ಷಗಟ್ಟಲೇ ಫಾಲೋವರ್ಸ್ ಹೊಂದಿರುವ ಸೋನು ತಿಂಗಳಿಗೆ ಗಳಿಸುವ ಆದಾಯ ಎಷ್ಟು ಗೊತ್ತಾ? ತಿಳಿದರೆ ನೀವು ಶಾಕ್ ಆಗೋದಂತೂ ಗ್ಯಾರಂಟಿ.

ಹೌದು, ಒಂದೆರಡು ವರ್ಷಗಳಿಂದ ಸೋಷಿಯಲ್ ಮೀಡಿಯಾ ಇಂದ ಭಾರಿ ಫೇಮಸ್ ಆಗಿರುವವರು ಸೋನು, ಕಳೆದ ವರ್ಷ ಬಿಗ್ ಬಾಸ್ ಕನ್ನಡ ಓಟಿಟಿ ಮೊದಲ ಸೀಸನ್ ನಲ್ಲಿ ಸ್ಪರ್ಧಿಯಾಗಿ ಬಿಗ್ ಬಾಸ್ ಮನೆಗೆ ಎಂಟ್ರಿ ಕೊಟ್ಟು, ಫಿನಾಲೆ ವರೆಗು ಮನೆಯಲ್ಲಿದ್ದರು ಸೋನು. ಬಿಗ್ ಮನೆಯೊಳಗೆ ಇದ್ದಾಗಲು, ತಾವು ಮಾಡುವ ತಪ್ಪುಗಳಿಂದ ಸೋನು ಗೌಡ ಅವರಿಗೆ ಕಿಚ್ಚ ಸುದೀಪ್ ಅವರು ಕ್ಲಾಸ್ ತೆಗೆದುಕೊಂಡಿದ್ದರು.

ಇನ್ನು ಸೋನು ಶ್ರೀನಿವಾಸ್ ಗೌಡ ಅವರು ಬಿಗ್ ಬಾಸ್ ಇಂದ ಹೆಚ್ಚು ಸುದ್ದಿಯಲ್ಲಿದ್ದರು ಕೂಡ, ಇವರು ಟ್ರೋಲ್ ಆಗಿದ್ದೆ ಹೆಚ್ಚು. ಸೋಷಿಯಲ್ ಮೀಡಿಯಾದಲ್ಲಿ ಅಪ್ಲೋಡ್ ಮಾಡುವ ವಿಡಿಯೋಗಳು, ಹಾಕುವ ಕ್ಯಾಪ್ಶನ್ ಗಳಿಂದ ಸೋನು ಶ್ರೀನಿವಾಸ್ ಗೌಡ ಅವರು ಸಿಕ್ಕಾಪಟ್ಟೆ ಟ್ರೋಲ್ ಆಗಿದ್ದು ಇದೇ. ಇತ್ತೀಚೆಗೆ ಮಾಲ್ಡಿವ್ಸ್ ಟ್ರಿಪ್ ಹೋಗಿ ಅಲ್ಲಿನ ಫೋಟೋಸ್ ಶೇರ್ ಮಾಡಿ, ಟ್ರೋಲ್ ಆಗಿದ್ದರು.

ಹಾಗೆಯೇ ಇವರು ಮಾಡುವ ಶೋಕಿ ನೋಡುವ ಜನರು ಈಕೆ ಎಷ್ಟು ಹಣ ಗಳಿಸುತ್ತಾರೆ ಎಂದು ಪ್ರಶ್ನೆ ಮಾಡಿಕೊಂಡಿದ್ದು ಇದೆ. ಒಂದು ಕಾರ್ಯಕ್ರಮದಲ್ಲಿ ಸೋನು ಗೌಡ ಅವರೇ ಹೇಳಿಕೊಂಡಿರುವ ಪ್ರಕಾರ ಸೋಷಿಯಲ್ ಮೀಡಿಯಾ ಇಂದಲೇ ಸೋನು ಗೌಡ ಅವರು ತಿಂಗಳಿಗೆ ಸುಮಾರು 3 ಲಕ್ಷ ರೂಪಾಯಿ ಸಂಪಾದನೆ ಮಾಡುತ್ತಾರಂತೆ.

ಸೋನು ಗೌಡ ಕೇವಲ ಸೋಷಿಯಲ್ ಮೀಡಿಯಾ ಇಂದಲೇ ಇಷ್ಟು ಹಣ ಸಂಪಾದಂನೆ ಮಾಡುತ್ತಾರಾ ಎಂದು ಜನರು ಶಾಕ್ ಆಗಿದ್ದು ಇದೆ. ಸೋನು ನಿಜವಾಗಲೂ ಇಷ್ಟು ಹಣ ಸಂಪಾದನೆ ಮಾಡುತ್ತಾರಾ ಎಂದು ಅಂದುಕೊಂಡಿದ್ದಾರೆ. ಇದು ನಿಜವೋ ಸುಳ್ಳೋ ಗೊತ್ತಿಲ್ಲ, ಆದರೆ ಸೋನು ಗೌಡ ತಿಂಗಳಿಗೆ 3 ಲಕ್ಷ ಸಂಪಾದನೆ ಮಾಡುತ್ತಿರುವುದಾಗಿ ಹೇಳಿರುವುದಂತೂ ಸತ್ಯ.

Leave A Reply

Your email address will not be published.