Renu Desai: ನಟ ಪವನ್ ಕಲ್ಯಾಣ್ ತೆಲುಗು ಚಿತ್ರರಂಗದಲ್ಲಿ ಸೂಪರ್ ಸ್ಟಾರ್ ಆಗಿ ಹೆಸರು ಮಾಡಿದ್ದಾರೆ. ಇವರಿಗೆ ಅತಿದೊಡ್ಡ ಮಾಸ್ ಫ್ಯಾನ್ ಬೇಸ್ ಇದ್ದು, ಪವನ್ ಕಲ್ಯಾಣ್ ಅವರನ್ನು ಅಭಿಮಾನಿಗಳು ದೇವರ ರೀತಿ ಆರಾಧನೆ ಮಾಡುತ್ತಾರೆ. ಪವನ್ ಕಲ್ಯಾಣ್ ಅವರು ಈ ಮೊದಲು ನಟಿ ರೇಣು ದೇಸಾಯಿ ಅವರೊಡನೆ ಮದುವೆಯಾದರು. ಇತ್ತೀಚೆಗೆ ಇವರಿಗೆ ನಿಶ್ಚಿತಾರ್ಥವಾಗಿತ್ತು, ಆದರೆ ಇದ್ದಕ್ಕಿದ್ದ ಹಾಗೆ ಮದುವೆ ರದ್ದಾಯಿತು. ಅದಕ್ಕೆ ಕಾರಣ ಏನು ಎಂದು ತಿಳಿಸುತ್ತೇವೆ ನೋಡಿ..
ನಟಿ ರೇಣು ದೇಸಾಯಿ ಅವರು ಸಹ ತೆಲುಗು ಚಿತ್ರರಂಗದಲ್ಲಿ ಹೆಸರು ಮಾಡಿದ ನಟಿ. ಹೀರೋಯಿನ್ ಆಗಿ ಭಾರಿ ಬೇಡಿಕೆಯನ್ನು ಸೃಷ್ಟಿಸಿಕೊಂಡಿದ್ದರು. ಪ್ರೀತಿ ಮಾಡಿ ಪವನ್ ಕಲ್ಯಾಣ್ ಅವರೊಡನೆ ಮದುವೆ ಕೂಡ ಆಯಿತು, ಇಬ್ಬರು ಮಕ್ಕಳು ಕೂಡ ಜನಿಸಿದರು. ನಂತರ ರೇಣು ದೇಸಾಯಿ ಮತ್ತು ಪವನ್ ಕಲ್ಯಾಣ್ ಭಿನ್ನಾಭಿಪ್ರಾಯಗಳ ಕಾರಣ ವಿಚ್ಛೇದನ ಪಡೆದರು. ಪವನ್ ಕಲ್ಯಾಣ್ ವಿಚ್ಛೇದನ ಪಡೆದ ಬಳಿಕ ಮತ್ತೊಂದು ಮದುವೆಯಾದರು. ಆದರೆ ರೇಣು ಸಿಂಗಲ್ ಆಗಿಯೇ ಇದ್ದಾರೆ.
ಕೆಲ ಸಮಯದ ಹಿಂದೆ ರೇಣು ಅವರು ಎರಡನೇ ಮದುವೆಗೆ ಸಿದ್ಧವಾಗಿ ನಿಶ್ಚಿತಾರ್ಥ ಕೂಡ ನಡೆದಿತ್ತು, ಆದರೆ ಇದ್ದಕ್ಕಿದ್ದ ಹಾಗೆ ಮದುವೆ ನಿಂತು ಹೋಗಿತ್ತು. ಆದರೆ ಮದುವೆ ನಿಲ್ಲಲು ಕಾರಣ ಏನು ಎನ್ನುವುದು ಮಾತ್ರ ಇನ್ನೂ ತಿಳಿದಿರಲಿಲ್ಲ. ಈ ಪ್ರಶ್ನೆಗೆ ಇದೀಗ ರೇಣು ದೇಸಾಯಿ ಅವರೇ ಉತ್ತರ ನೀಡಿದ್ದಾರೆ. ರೇಣು ದೇಸಾಯಿ ಅವರು ಇದೀಗ ಚಿತ್ರರಂಗಕ್ಕೆ ಕಂಬ್ಯಾಕ್ ಮಾಡಿದ್ದಾರೆ. ಅದು ಖ್ಯಾತ ನಟ ರವಿತೇಜ ಅವರ ಟೈಗರ್ ನಾಗೇಶ್ವರ್ ರಾವ್ ಸಿನಿಮಾ ಮೂಲಕ, ಈ ಸಿನಿಮಾದಲ್ಲಿ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ ರೇಣು ದೇಸಾಯಿ.
ಇದೇ ತಿಂಗಳು 20ರಂದು ಟೈಗರ್ ನಾಗೇಶ್ವರ್ ಸಿನಿಮಾ ಬಿಡುಗಡೆ ಆಗಲಿದೆ. ಸಿನಿಮಾ ಕುರಿತ ಹಾಗೆ ಪ್ರೊಮೋಷನ್ ಗಾಗಿ ಇಂಟರ್ವ್ಯೂ ಗಳಲ್ಲಿ ಪಾಲ್ಗೊಳ್ಳುತಿದ್ದಾರೆ. ಸಿನಿಮಾ ಬಗ್ಗೆ ಹಾಗೂ ಮದುವೆ ಬಗ್ಗೆ ಕೂಡ ಓಪನ್ ಅಪ್ ಆಗಿ ಮಾತನಾಡಿದ್ದು, ಮದುವೆ ಮುರಿದುಕೊಂಡಿದ್ದಕ್ಕೆ ಕಾರಣ ಏನು ಎಂದು ತಿಳಿಸಿದ್ದಾರೆ. ರೇಣು ಅವರು ವಿಚ್ಛೇದನ ಪಡೆದಾಗ ಮಕ್ಕಳು ಚಿಕ್ಕವರಾಗಿದ್ದರು, ಆಗ ಫ್ಯಾಮಿಲಿ ಫ್ರೆಂಡ್ಸ್ ಎಲ್ಲರೂ ಮತ್ತೊಂದು ಮದುವೆ ಮಾಡಿಕೊಳ್ಳುವಂತೆ ಹೇಳಿದ್ದರು ಕೂಡ ರೇಣು ಅವರು ಒಪ್ಪಿರಲಿಲ್ಲವಂತೆ.
ನಂತರ ತಮಗಾಗಿ ಒಬ್ಬ ಸಂಗಾತಿ ಇದ್ದರೆ ಚೆನ್ನಾಗಿರುತ್ತದೆ ಎಂದು ಭಾವಿಸಿದ ರೇಣು ಅವರು ಮದುವೆಗೆ ತಯಾರಿ ನಡೆಸಿ, ಎಂಗೇಜ್ಮೆಂಟ್ ಮಾಡಿಕೊಂಡರು. ಆದರೆ ಎಂಗೇಜ್ಮೆಂಟ್ ಆದ ಬಳಿಕ ಮದುವೆಯಾದರೆ ಮಕ್ಕಳಿಗೆ ಹೆಚ್ಚು ಸಮಯ ಕೊಡೋದಕ್ಕೆ ಆಗುತ್ತೋ ಇಲ್ಲವೋ ಎನ್ನುವ ಯೋಚನೆ ಬಂದ ಕಾರಣ ರೇಣು ದೇಸಾಯಿ ಅವರು ಮದುವೆಯನ್ನು ಕ್ಯಾನ್ಸಲ್ ಮಾಡಿದರಂತೆ. ಇನ್ನು ಎರಡು ಮೂರು ವರ್ಷದಲ್ಲಿ ಮಕ್ಕಳು ಸೆಟ್ಲ್ ಆದಮೇಲೆ, ಯೋಚಿಸಿ ಮದುವೆಯಾಗೋಣ ಎಂದು ನಿರ್ಧಾರ ಮಾಡಿದ್ದಾರಂತೆ.